Audi Car: ಯುವಕನಿಂದ ದುಬಾರಿ ಬೆಲೆಯ 'ಆಡಿ' ಕಾರಿನಲ್ಲಿ ಟೀ ಮಾರಾಟ.. ಎಂತಾ ಕಾಲ ಬಂತಪ್ಪ!

ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫೋಟೋ, ವಿಡಿಯೋಗಳು ಭಾರೀ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ್ದರೆ ಕ್ಷಣ ಮಾತ್ರದಲ್ಲಿ ಎಲ್ಲೆಡೆ ಹರಿದಾಡುತ್ತವೆ. ಸದ್ಯ, ದುಬಾರಿ ಬೆಲೆಯ ಐಷಾರಾಮಿ ಆಡಿ ಕಾರಿನಲ್ಲಿ ಯುವಕನೊಬ್ಬ ಟೀ ಮಾರಿರುವ ವಿಡಿಯೋ ಸಖತ್ ಹಲ್ ಚಲ್ ಸೃಷ್ಟಿಸುತ್ತಿದೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರು ಹಾಗೂ ಬೈಕ್ ಗಳಿಗೆ ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್ ಬಂದಿದೆ. ಅದಕ್ಕೆ ಕಾರಣವೆಂದರೆ, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವುದು. ಕೆಲವರು, ಕ್ರೇಜ್ ಗಾಗಿ ಖರೀದಿಸಿದರೆ, ಮತ್ತಷ್ಟು ಮಂದಿ, ವ್ಯಾಪಾರದ ದೃಷ್ಟಿಯಿಂದ ಕೊಂಡುಕೊಳ್ಳುತ್ತಾರೆ. ಈ ವಾಹನಗಳನ್ನು ತಮಗೆ ಬೇಕಾದಂತೆ ಪರಿವರ್ತನೆ ಮಾಡಿ, ಸಣ್ಣ ಪ್ರಮಾಣದಲ್ಲಿ ವ್ಯವಹಾರವನ್ನು ಆರಂಭಿಸುತ್ತಾರೆ.

Audi Car: ಯುವಕನಿಂದ ದುಬಾರಿ ಬೆಲೆಯ ಆಡಿ ಕಾರಿನಲ್ಲಿ ಟೀ ಮಾರಾಟ.. ಎಂತಾ ಕಾಲ ಬಂತಪ್ಪ!

ಸದ್ಯ, ವೈರಲ್ ಆಗಿರುವ ವಿಡಿಯೋದಲ್ಲಿ ಟೀ ಮಾರಾಟ ಮಾಡುತ್ತಿರುವ ವ್ಯಕ್ತಿ, ಇಂತಹ ದೃಷ್ಟಿಕೋನವನ್ನು ಹೊಂದಿರುವಂತೆ ತೋರುತ್ತಿದೆ. ಆ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆಶಿಶ್ ತ್ರಿವೇದಿ ಎಂಬುವವರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ರಸ್ತೆ ಬದಿಯಲ್ಲಿ ಯುವಕನೊಬ್ಬ ಆಡಿ ಕಾರನ್ನು ನಿಲ್ಲಿಕೊಂಡು, ಬೂಟ್ (ಡಿಕ್ಕಿ)ನಲ್ಲಿ ವ್ಯಾಪಾರ ನಡೆಸಲು ಅಗತ್ಯ ಸಾಮಗ್ರಿ ಇಟ್ಟುಕೊಂಡು, ಪಕ್ಕದಲ್ಲಿಯೇ ಸಣ್ಣ ಟೇಬಲ್ ಮೇಲೆ ಟೀ ತಯಾರಿಸುತ್ತಿದ್ದಾನೆ. ಸಮೀಪವೇ ಇಬ್ಬರು ಗ್ರಾಹಕರು ನಿಂತಿದ್ದಾರೆ.

ಅಲ್ಲಿ ಸುತ್ತಮುತ್ತ ಚಲಿಸುವ ಆಟೋರಿಕ್ಷಾ ಸೇರಿದಂತೆ ಇತರೆ ವಾಹನಗಳನ್ನು ಗಮನಿಸಿದಾಗ ಈ ವಿಡಿಯೋ ಬಹುತೇಕ ಉತ್ತರ ಭಾರತದ ಯಾವುದೋ ಒಂದು ರಾಜ್ಯಕ್ಕೆ ಸಂಬಂಧಿಸಿದೆ ಎಂದು ಸುಲಭವಾಗಿ ತಿಳಿಯುತ್ತಿದೆ. ಇದಿಷ್ಟೇ ಅಲ್ಲ.. ಟೀ ಮಾರುತ್ತಿರುವ ಯುವಕನನ್ನು ಕಂಡು ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ, 'ಟೀ ಮಾರುವ ಮೂಲಕ ಆಡಿ ಕಾರನ್ನು ಖರೀದಿಸಿದ್ದಾರಾ.. ಇಲ್ಲವೇ, ಆಡಿ ಉಳಿಸಿಕೊಳ್ಳಲು ಟೀ ಸೇಲ್ ಮಾಡುತ್ತಿದ್ದಾರೆಯೇ' ಎಂದು ವಿಡಿಯೋ ಮೇಲೆಯೇ ಕ್ಯಾಪ್ಶನ್ ಬರೆದಿದ್ದಾರೆ.

ವೈರಲ್ ಆಗುತ್ತಿರುವ ಟೀ ಮಾರುವ ಯುವಕನ ವಿಡಿಯೋಗೆ ನೆಟ್ಟಿಗರೂ ಸಹ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅದರಲೊಬ್ಬ 'ಟೀ ಮಾರುವುದು ಉತ್ತಮ ವ್ಯಾಪಾರ' ಎಂದಿದ್ದಾನೆ. 'ಏನು ಇಲ್ಲ.. ಯುವಕನೊಬ್ಬನ ಸ್ಟಾರ್ಟಪ್ ಇದು' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಏನಿಲ್ಲ ಬ್ರೋ.. ಆಡಿ ಇದೆಯಲ್ಲ ಪೆಟ್ರೋಲ್ ಖರೀದಿಗೆ ಟೀ ಮಾರಿ ಹಣ ಸಂಪಾದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚೆಗೆ, ದೆಹಲಿಯಲ್ಲಿ 21 ವರ್ಷದ ಎಂಜಿನಿಯರಿಂಗ್ ಪದವೀಧರೆ ತಾಪ್ಸಿ ಉಪಾಧ್ಯಾಯ ಎಂಬುವವರೂ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಫುಡ್ ಕಾರ್ಟ್‌ ಮಾಡಿ, ಪಾನಿಪುರಿ ಮಾರಾಟ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್ ಅಕೌಂಟ್ ಓಪನ್ ಮಾಡಿದ ತಕ್ಷಣ, ಆಕೆಯ ರೀಲ್ಸ್ ಗಳೇ ಹರಿದಾಡುತ್ತಿದ್ದು, 'ಯಾವುದೇ ವ್ಯವಹಾರ ಆರಂಭಿಸಲು ವಯಸ್ಸು ಕೇವಲ ಸಂಖ್ಯೆಯಷ್ಟೇ' ಎಂದು ತಾಪ್ಸಿ ಹೇಳುತ್ತಾರೆ.

ದುಬಾರಿ ಬೆಲೆಯ ಐಷಾರಾಮಿ 'ಆಡಿ' ಕಾರಿಗಳ ಬಗ್ಗೆ ಕೆಲವು ವಿಷಯಗಳನ್ನು ಮಾತನಾಡುವುದಾದರೆ, ಭಾರತದ ಮಾರುಕಟ್ಟೆಯಲ್ಲಿ ಆಡಿ ಕಂಪನಿಯು ರೂ.43.85 ಲಕ್ಷ ಆರಂಭಿಕ ಬೆಲೆಯಿಂದ ರೂ.1.43 ಕೋಟಿ ಬೆಲೆಯಲ್ಲಿ ವಿವಿಧ ಮಾದರಿ ಕಾರುಗಳನ್ನು ಮಾರಾಟ ಮಾಡುತ್ತದೆ. ಅದರಲ್ಲಿ 'Q7' ಹೆಚ್ಚು ಜನಪ್ರಿಯವಾಗಿದ್ದು, ರೂ.84.70 ಲಕ್ಷದಿಂದ ರೂ.92.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಇನ್ನು, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಕಾರು, ದ್ವಿಚಕ್ರ ವಾಹನಗಳನ್ನು ಖರೀದಿಸಿ, ಅವುಗಳನ್ನು ತಮ್ಮ ವ್ಯಾಪಾರಕ್ಕೆ ಬೇಕಾಗುವ ರೀತಿಯಲ್ಲಿ ವಿನ್ಯಾಸ ಮಾಡುವುದು ಸದ್ಯದ ಟ್ರೆಂಡ್ ಆಗಿದೆ. ಜೊತೆಗೆ ಆ ವಾಹನಗಳನ್ನು ಧಿಡೀರನೇ ಆಕರ್ಷಿಸುವುದರಿಂದ ಹೆಚ್ಚಿನ ಗ್ರಾಹಕರು ಬರುತ್ತಾರೆ ಎಂಬ ನಂಬಿಕೆಯು ಆಗಿದೆ. ಇಲ್ಲಿಯೂ 'ಆಡಿ' ಕಾರಿನ ಮಾಲೀಕ ಅದನ್ನೇ ಮಾಡಿದ್ದಾನೆಯೇ ಎಂಬ ಪ್ರಶ್ನೆ ಕಾಡಬಹುದು. ಆ ಬಗ್ಗೆ ಖಚಿತತೆ ಇಲ್ಲ.

Article Published On: Wednesday, April 12, 2023, 16:33 [IST]
English summary
Audi luxury car man make it tea stall
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+