Just In
Don't Miss!
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಏಳು ವರ್ಷಗಳ ಹೋರಾಟದ ಬಳಿಕ ಜಯದ ನಗೆ ಬೀರಿದ ಆಡಿ ಕಾರಿನ ಮಾಲೀಕ
ವಿಮಾ ಕಂಪನಿ ಹಾಗೂ ಆಡಿ ಕ್ಯೂ 7 ಕಾರು ಮಾಲೀಕರ ನಡುವಿನ ತಿಕ್ಕಾಟವು 7 ವರ್ಷಗಳ ನಂತರ ಕೊನೆಯಾಗಿದ್ದು, ಕಾರು ಮಾಲೀಕರು ಜಯದ ನಗೆ ಬೀರಿದ್ದಾರೆ. ತೆಲಂಗಾಣದ ಸುಧಾಕರ್ ರಾಜು ಎಂಬುವವರೇ ಸುದೀರ್ಘ ಹೋರಾಟದ ನಂತರ ವಿಮಾ ಕಂಪನಿಯಿಂದ ಹಣ ಪಡೆದವರು.

ಅವರು 2012ರ ಡಿಸೆಂಬರ್ ನಲ್ಲಿ ಆಡಿ ಕ್ಯೂ 7 ಕಾರಿನ 3.0 ಟಿಡಿಐ ಮಾದರಿಯನ್ನು ರೂ.60 ಲಕ್ಷ ನೀಡಿ ಖರೀದಿಸಿದ್ದರು. ಅವರು ಈ ಕಾರಿಗೆ ವಿಮಾ ಪಾಲಿಸಿಯನ್ನು ಸಹ ಮಾಡಿಸಿದ್ದರು. ಕಾರು ಖರೀದಿಸಿದ 10 ತಿಂಗಳ ಒಳಗೆ ಅಂದರೆ 2013ರ ಸೆಪ್ಟೆಂಬರ್ 15ರಂದು ಭಾರಿ ಮಳೆಯಿಂದಾಗಿ ಅವರಿದ್ದ ಕಾರು ಜುಬಿಲಿ ಹಿಲ್ಸ್‌ನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು.

ಈ ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಕೆಬಿಆರ್ ಪಾರ್ಕ್ ವರೆಗೂ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಪ್ರವಾಹದಲ್ಲಿ ಸುಧಾಕರ್ ರಾಜುರವರ ಆಡಿ ಕ್ಯೂ 7 ಕಾರಿನ ಎಂಜಿನ್‌ಗೆ ನೀರು ನುಗ್ಗಿದೆ. ಹಲವಾರು ಬಾರಿ ಪ್ರಯತ್ನ ಪಟ್ಟರೂ ಕಾರು ಸ್ಟಾರ್ಟ್ ಆಗಿಲ್ಲ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರಾಜು ಕಾರನ್ನು ರಿಪೇರಿಗಾಗಿ ಆಡಿ ಸರ್ವೀಸ್ ಸೆಂಟರಿಗೆ ಕೊಂಡೊಯ್ದಿದ್ದಾರೆ. ನಂತರ ಪರಿಹಾರ ಕೋರಿ ವಿಮಾ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಹಾನಿಯನ್ನು ಪರೀಕ್ಷಿಸಲು ಸಿಬ್ಬಂದಿಯನ್ನು ನೇಮಿಸಿದ ವಿಮಾ ಕಂಪನಿಯು ಹೈಡ್ರೋಸ್ಟಾಟಿಕ್ ನಷ್ಟದಿಂದಾಗಿ ಕಾರಿಗೆ ಹಾನಿಯಾಗಿದೆ ಎಂದು ತಿಳಿಸಿದೆ.

ಎಂಜಿನ್ ವೈಫಲ್ಯವು ಮಾಲೀಕರ ದೋಷಪೂರಿತ ನಿರ್ವಹಣೆಯ ಕಾರಣದಿಂದಾಗಿರುವುದರಿಂದ ಪರಿಹಾರವನ್ನು ನೀಡಲು ಸಾಧ್ಯವಿಲ್ಲವೆಂದು ವಿಮಾ ಕಂಪನಿ ತಿಳಿಸಿದೆ. ರಾಜುರವರು ತಮ್ಮ ಕಾರಿನ ರಿಪೇರಿಗಾಗಿ ರೂ.20 ಲಕ್ಷ ಖರ್ಚು ಮಾಡಿದ್ದರು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರಾಜು ಅವರು ರೂ.1.12 ಲಕ್ಷ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸಿದ್ದರೂ ಸಹ ವಿಮಾ ಕಂಪನಿಯು ಕಾರಿಗಾಗಿರುವ ಹಾನಿಯು ಆ ನೀತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿ, ರೂ.53,000ಗಳನ್ನು ಪರಿಹಾರವಾಗಿ ನೀಡಿದೆ.

ಕಾರು ಸ್ಟಾರ್ಟ್ ಮಾಡುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ಕಾರಣಕ್ಕೆ ಚಾಲಕನು ಕಾರನ್ನು ಸ್ಟಾರ್ಟ್ ಮಾಡಬಾರದಿತ್ತು ಎಂದು ತಿಳಿಸಿದ್ದ ವಿಮಾ ಕಂಪನಿಯು ರಾಜುರವರು ಕೋರಿದ್ದ ಪರಿಹಾರವನ್ನು ನೀಡಲು ನಿರಾಕರಿಸಿತು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಕಾರಣಕ್ಕೆ ರಾಜುರವರು ಪರಿಹಾರ ಕೊಡಿಸುವಂತೆ ಕೋರಿ ತೆಲಂಗಾಣ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗವನ್ನು (ಟಿಎಸ್‌ಸಿಡಿಆರ್‌ಸಿ) ಸಂಪರ್ಕಿಸಿದರು.ಪರಿಹಾರವನ್ನು ಪಾವತಿಸಲು ಬಯಸದ ವಿಮಾ ಕಂಪನಿಯು 7 ವರ್ಷಗಳ ಕಾಲ ಈ ವ್ಯಾಜ್ಯವನ್ನು ಮುಂದುವರೆಸಿತು.

ಕೊನೆಗೆ ಗ್ರಾಹಕ ನ್ಯಾಯಾಲಯವು ವಿಮಾ ಕಂಪನಿಯ ವಾದವನ್ನು ತಳ್ಳಿ ಹಾಕಿ ಕಾರು ಮಾಲೀಕನ ಪರವಾಗಿ ತೀರ್ಪು ನೀಡಿದೆ. ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಎಂ.ಎಸ್.ಕೆ.ಜೈಸ್ವಾಲ್ ಹಾಗೂ ಸದಸ್ಯರಾದ ಮೀನಾ ರಾಮನಾಥನ್ ಅವರಿದ್ದ ನ್ಯಾಯಪೀಠವು ಕಾರು ಮಾಲೀಕರ ಪರವಾಗಿ ತೀರ್ಪು ನೀಡಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ರವಾಹ ಪರಿಸ್ಥಿತಿಯಲ್ಲಿ ಕಾರು ಚಾಲಕರು ಕಾರನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸುವುದು ಸಹಜ. ವಿಮಾ ಕಂಪನಿಯ ವಾದವನ್ನು ಒಪ್ಪಲು ಸಾಧ್ಯವಿಲ್ಲವೆಂದು ತಿಳಿಸಿರುವ ನ್ಯಾಯಪೀಠವು ಸುಧಾಕರ್ ರಾಜುರವರಿಗೆ 7% ಬಡ್ಡಿಯೊಂದಿಗೆ ರೂ.17.54 ಲಕ್ಷ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶ ನೀಡಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.