ಇಂದೊಂದು ಹಬ್ಬ; ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು!. ಕನ್ನಡದ ಜನಪ್ರಿಯ ಹಾಡು ಎಲ್ಲರಿಗೂ ನೆನಪು ಇದ್ದೇ ಇದೆ. ಮದ್ಯ ಆರೋಗ್ಯಕ್ಕೆ ಹಾನಿಕಾರಕ ಎಂಬ ಬೋರ್ಡ್ ಮದ್ಯದಂಗಡಿ ಮುಂದೆ ನೇತಾಡಿಸಿದ್ದರೂ ಯಾರೂ ಅದಕ್ಕೆ ಕ್ಯಾರೇ ಅನ್ನಲ್ಲ.
ಬಿಯರ್ ಕುಡೀರಿ ಅಂತಾ ಯಾರದಾರೂ ಹೇಳ್ತರಾ? ಆದರೆ ಕುಡಿದ್ರೆ ತೊಂದ್ರೆ ಜಾಸ್ತಿ ಎಂಬ ಸಂಗತಿ ತಿಳಿದಿದ್ದರೂ ಇಂದಿನ ಯುವ ಜನಾಂಗ ಲೈಸನ್ಸ್ ಇಲ್ಲದೆ ಈ ಕೆಟ್ಟ ಚಟಕ್ಕೆ ಬಲಿಯಾಗುತ್ತಾರೆ. ಇನ್ನು ಕೆಲವು ಅಧ್ಯಯನಗಳ ಪ್ರಕಾರ ಬಿಯರ್ ಹೃದಯಕ್ಕೆ ಒಳ್ಳೆಯದಂತೆ. ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಒಳಿತಿಗಿಂತ ಕೆಡುಕೇ ಜಾಸ್ತಿ ಕಾಣಸಿಗುತ್ತದೆ.
ಅದು ಏನೇ ಇರಲಿ. ನಾವಿಂದು ಹೇಳಬಯಸುವ ಲೇಖನ ಕೂಡಾ ಬಿಯರ್‌ಗೆ ಸಂಬಂಧ ಪಟ್ಟಿದ್ದು. ಆಸ್ಟ್ರೇಲಿಯಾದಲ್ಲಿ ವರ್ಷಂಪ್ರತಿ ವಿಚಿತ್ರವಾದ ಖಾಲಿ ಬಿಯರ್ ಬಾಟಲಿ ರೇಸ್‌ವೊಂದು ನಡೆಯುತ್ತಿದೆ. ಅದೇನು ಅಂತೀರಾ? ಸ್ಲೈಡರ್ ಕ್ಲಿಕ್ಕಿಸುತ್ತಾ ಆಸಕ್ತಿದಾಯಕ ವಿಚಾರಗಳನ್ನು ತಿಳಿಯಿರಿ...

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಹೌದು, ಆಸ್ಟ್ರೇಲಿಯಾದಲ್ಲಿ ವರ್ಷಂಪ್ರತಿ ಬಿಯರ್ ಕ್ಯಾನ್ ರೆಗ್ಗಟ್ಟಾ ಎಂಬ ಒಂದು ದಿನದ ಹಬ್ಬವೊಂದನ್ನು ಆಚರಿಸಲಾಗುತ್ತದೆ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಇಲ್ಲಿ ಖಾಲಿ ಬಿಯರ್ ಬಾಟಲಿಗಳಿಂದ ತಯಾರಿಸಲಾದ ಬೋಟ್‌ಗಳ ರೇಸ್ ನಡೆಯುತ್ತದೆ. ಅಂದರೆ ಈ ರೇಸ್ ಎಷ್ಟರ ಮಟ್ಟಿಗೆ ತಮಾಷೆಯಾಗಿರಬಹುದು ಎಂಬುದನ್ನು ನೀವೇ ಊಹಿಸಿ ನೋಡಿ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಈ ಸಾಂಪ್ರದಾಯಿಕ ಬೋಟ್ ರೇಸ್ ಬರ ಬರುತ್ತಾ ಭಾರಿ ಪ್ರಚಾರ ಗಿಟ್ಟಿಸಿತೊಡಗಿದ್ದು, ಜಗತ್ತಿನ ಪ್ರಮುಖ ಪ್ರವಾಸಿ ತಾಣ ಎಂಬ ಮೆಚ್ಚುಗೆಗೂ ಪಾತ್ರವಾಗುತ್ತಿದೆ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯ ಪ್ರದೇಶ ಡಾರ್ವಿನ್‌ನಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ. ಡಾರ್ವಿನ್‌ನ ಸಂಯೋಜಿತ ಲಯನ್ಸ್ ಕ್ಲಬ್‌ಗಳು ಇದನ್ನು ಆಯೋಜಿಸುತ್ತಿದೆ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
1974ನೇ ಇಸವಿಯ ಜೂನ್ 16ರಂದು ಮೊದಲ ಬಾರಿಗೆ ಖಾಲಿ ಬಿಯರ್ ಬಾಟಲಿಗಳಿಂದ ತಯಾರಿಸಲಾದ ಬೋಟ್ ರೇಸ್ ಹಮ್ಮಿಕೊಳ್ಳಲಾಗಿತ್ತು. ಇದರ ಯಶಸ್ಸಿನ ಬಳಿಕ ಮೈಂಡಿಲ್ (mindil) ಕಡಲ ತೀರಾ ಪ್ರದೇಶದಲ್ಲಿ ವಾರ್ಷಿಕವಾಗಿ ಸ್ಪರ್ಧೆ ಏರ್ಪಡಿಸಲಾಗುತ್ತದೆ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಕುಡಿದು ಖಾಲಿಯಾಗಿರುವ ಸಾವಿರಾರು ಬಿಯರ್ ಬಾಟಲಿಗಳನ್ನು ತ್ಯಾಜ್ಯ ವಸ್ತುವಾಗಿ ಬಿಸಾಡುವುದರ ಹೊರತಾಗಿ ಇಂತಹದೊಂದು ಬೋಟ್ ನಿರ್ಮಿಸುವ ಕಲ್ಪನೆ ಹೊರಬಂದಿದೆ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಇಲ್ಲಿ ನಾವು ಖಾಲಿ ಬಿಯರ್ ಬಾಟಲಿಗಳಿಂದ ತಯಾರಿಸಲಾದ ಹಲವು ವಿಧದ ಚಿತ್ರ ವಿಚಿತ್ರ ಬೋಟ್‌ಗಳನ್ನು ನೋಡಬಹುದಾಗಿದೆ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ವರ್ಷದಲ್ಲಿ ಸಂಗ್ರಹಿಸಿಡಲಾದ ಸಾವಿರ ಬಾಟಲಿಗಳಿಂದ ಹಿಡಿದು 50,000 ಖಾಲಿ ಬಿಯರ್ ಬಾಟಲಿಗಳಿಂದ ತಯಾರಿಸಲಾದ ಬೋಟ್‌ಗಳನ್ನು ನಾವಿಲ್ಲಿ ನೋಡಬಹುದು. ಅಂದರೆ ಇಲ್ಲಿನ ಜನರು ಎಷ್ಟು ಪ್ರಮಾಣದ ಬಿಯರ್ ಕುಡಿದು ಖಾಲಿ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಜಲ ಫಿರಂಗಿ ಇನ್ನು ಕೆಲವು ಸಂದರ್ಭಗಳಲ್ಲಿ ಆಗ್ನಿ ಕುಂಡಗಳನ್ನು ಈ ಹಬ್ಬದಲ್ಲಿ ಬಳಸಲಾಗುತ್ತದೆ. ಇದು ನೋಡುಗರಲ್ಲಿ ಭಯಭೀತಿ ಸೃಷ್ಟಿಸಲು ಕಾರಣವಾಗುತ್ತದೆ.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಅಂದ ಹಾಗೆ ಈ ಬಾರಿಯ ಡಾರ್ವಿನ್ ಲಯನ್ಸ್ ಕ್ಲಬ್ ಬಿಯರ್ ಕ್ಯಾನ್ ರೆಗಟ್ಟಾ ರೇಸ್ ಜುಲೈ 7ರಂದು ಜರಗಿತ್ತು.

ಖಾಲಿ ಬಿಯರ್ ಬಾಟಲಿ ಬೋಟ್ ರೇಸ್
ಒಟ್ಟಾರೆಯಾಗಿ ಸ್ಪರ್ಧಿಗಳು ಹಾಗೂ ನೋಡುಗರಲ್ಲಿ ಹೆಚ್ಚು ಮೋಜನ್ನು ಸೃಷ್ಟಿ ಮಾಡುವಲ್ಲಿ ಪ್ರಸ್ತುತ ಈವೆಂಟ್ ಯಶಸ್ಸನ್ನು ಕಂಡಿದೆ.


Click it and Unblock the Notifications








