Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
80ನೇ ವಯಸ್ಸಿನಲ್ಲಿ 80ನೇ ಪೋರ್ಷೆ ಕಾರು ಖರೀದಿಸಿದ ಪೋರ್ಷೆ ಕಾರುಗಳ ಅಭಿಮಾನಿ
ಜರ್ಮನಿ ಮೂಲದ ಪೋರ್ಷೆ ಕಂಪನಿಯ ಸ್ಪೋರ್ಟ್ಸ್ ಕಾರುಗಳು ತಮ್ಮ ಪರ್ಫಾಮೆನ್ಸ್'ಗೆ ಹೆಸರುವಾಸಿಯಾಗಿವೆ. 1931ರಲ್ಲಿ ಸ್ಥಾಪನೆಯಾದ ಪೋರ್ಷೆ ಕಂಪನಿಯು ಈ 89 ವರ್ಷಗಳಲ್ಲಿ ವಿಶ್ವಾದ್ಯಂತ ಅಸಂಖ್ಯಾತ ಕಾರುಗಳನ್ನು ಮಾರಾಟ ಮಾಡಿದೆ.

ಪೋರ್ಷೆ ಕಾರುಗಳಿಗೆ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪೋರ್ಷೆ ಕಂಪನಿಯ ಕಾರುಗಳು ಯುವಕರಿಂದ ಮುದುಕರವರೆಗೆ ಎಲ್ಲರನ್ನೂ ಮೋಡಿ ಮಾಡಿವೆ. ಈಗ 80 ವರ್ಷದ ಕಟ್ಟಾ ಅಭಿಮಾನಿಯೊಬ್ಬರು ಇತ್ತೀಚೆಗೆ ತಮ್ಮ 80ನೇ ಪೋರ್ಷೆ ಕಾರನ್ನು ಖರೀದಿಸಿದ್ದಾರೆ.

ಅವರ ಮನೆಯಲ್ಲಿರುವ ಕಾರು ಗ್ಯಾರೇಜ್'ನಲ್ಲಿ ಪೋರ್ಷೆ ಕಂಪನಿಯ ಕಾರುಗಳೇ ತುಂಬಿವೆ. ಪೋರ್ಷೆ ಕಾರು ಅಭಿಮಾನಿಗಳ ಪಟ್ಟಿಯಲ್ಲಿ ಅವರಿಗೆ ಖಂಡಿತವಾಗಿಯೂ ವಿಶೇಷವಾದ ಸ್ಥಾನ ಸಿಗುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನಾವು ಇಲ್ಲಿ ಹೇಳುತ್ತಿರುವುದು ಒಟ್ಟೊಕಾರ್ ಜೆ ಎಂಬುವವರ ಬಗ್ಗೆ. ಒಟ್ಟೊಕಾರ್ ಜೆ, ಆಸ್ಟ್ರಿಯಾದ ವಿಯೆನ್ನಾ ಮೂಲದವರು. ಅವರು ಕಳೆದ 50 ವರ್ಷಗಳಿಂದ ಪೋರ್ಷೆ ಕಾರುಗಳನ್ನು ಖರೀದಿಸಿ ಚಾಲನೆ ಮಾಡುತ್ತಿದ್ದಾರೆ.

ಪೋರ್ಷೆ ಕಾರುಗಳನ್ನು ಪಾರ್ಕ್ ಮಾಡುವುದಕ್ಕಾಗಿಯೇ ಅವರು ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಿದ್ದಾರೆ. 80ನೇ ವಯಸ್ಸಿನಲ್ಲಿ ಹಲವರು ಕಾರುಗಳ ಜೊತೆಗೆನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಒಟ್ಟೊಕಾರ್ ಜೆ ರವರು ಮಾತ್ರ ಪೋರ್ಷೆ ಕಾರುಗಳನ್ನು ಖರೀದಿಸಿ ಚಾಲನೆ ಮಾಡುತ್ತಿದ್ದಾರೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಒಟ್ಟೊಕಾರ್ ಜೆ ಸದ್ಯಕ್ಕೆ 38 ಪೋರ್ಷೆ ಕಾರುಗಳನ್ನು ಹೊಂದಿದ್ದಾರೆ. ಉಳಿದ ಕಾರುಗಳನ್ನು ಏನು ಮಾಡಿದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಅವರು ಪ್ರತಿದಿನವೂ ವಿವಿಧ ಪೋರ್ಷೆ ಕಾರುಗಳಲ್ಲಿ ಸಂಚರಿಸುತ್ತಾರೆ.

ಸುಮಾರು 50 ವರ್ಷಗಳ ಹಿಂದೆ ಪೋರ್ಷೆ ಕಾರುಗಳ ಮೇಲಿನ ಪ್ರೀತಿ ಆರಂಭವಾಯಿತು ಎಂದು ಒಟ್ಟೊಕಾರ್ ಜೆ ಹೇಳಿದ್ದಾರೆ. ಪೋರ್ಷೆ ಕಾರೊಂದು ಅವರ ಮುಂದೆ ವೇಗವಾಗಿ ಹಾದುಹೋದಾಗ ಅದರ ಪರ್ಫಾಮೆನ್ಸ್'ನಿಂದ ಅವರು ಪ್ರಭಾವಿತರಾದರು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅಂದಿನಿಂದ ಅವರು ಪೋರ್ಷೆ ಕಾರುಗಳನ್ನು ಖರೀದಿಸಲು ಶುರು ಮಾಡಿದರು. ಒಟ್ಟೊಕಾರ್ ಜೆ ಇದುವರೆಗೂ ಒಟ್ಟು 80 ಪೋರ್ಷೆ ಕಾರುಗಳನ್ನು ಖರೀದಿಸಿದ್ದಾರೆ. ಪೋರ್ಷೆ ಕಾರುಗಳನ್ನು ಕೇವಲ ಉತ್ಸಾಹಕ್ಕೆ ಮಾತ್ರ ಖರೀದಿಸದೇ ಚಾಲನೆಯೂ ಮಾಡುತ್ತಿದ್ದಾರೆ.

ಕಾರ್ಯಾಚರಣೆ ನಡೆಸದ ಕಾರುಗಳನ್ನು ಪಾರ್ಕ್ ಮಾಡುವುದಕ್ಕಾಗಿಯೇ ಒಟ್ಟೊಕಾರ್ ಜೆ ಪ್ರತ್ಯೇಕ ಕಟ್ಟಡವನ್ನು ಸಹ ನಿರ್ಮಿಸಿದ್ದಾರೆ. ಈ ಸ್ಥಳವನ್ನು ಅವರು ತಮ್ಮ ಲಿವಿಂಗ್ ರೂಮ್ ಎಂದೇ ಪರಿಗಣಿಸಿದ್ದಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಒಟ್ಟೊಕಾರ್ ಜೆ ರವರ ಬಳಿಯಿರುವ ಎಲ್ಲಾ ಪೋರ್ಷೆ ಕಾರುಗಳನ್ನು ಇಲ್ಲಿ ನಿಲ್ಲಿಸಲಾಗಿದೆ. ಈ ಕಟ್ಟಡದಲ್ಲಿ ಕಲಾತ್ಮಕ ಪ್ರಾಚೀನ ವಸ್ತುಗಳು ಹಾಗೂ ಸಿನೆಮಾ ಪರದೆಯೂ ಸಹ ಇದೆ. ಒಟ್ಟೊಕಾರ್ ಜೆ ಇಲ್ಲಿ ಕೆಲವು ಪೇಂಟಿಂಗ್'ಗಳನ್ನು ಸಹ ಇಟ್ಟಿದ್ದಾರೆ.

ಇದರ ಜೊತೆಗೆ ಪೋಸ್ಟರ್, ಟ್ರೋಫಿ ಹಾಗೂ ಕಾರ್ ರೇಸಿಂಗ್ ಸ್ಮಾರಕಗಳನ್ನು ಸಹ ಕಾಣಬಹುದು. ಅವರ ಕಾರು ಗ್ಯಾರೇಜ್, ಕಾರ್ ಮ್ಯೂಸಿಯಂನಂತೆ ಕಾಣುತ್ತದೆ. ಆಟೊಕಾರ್ ಜೆ ಇತ್ತೀಚೆಗೆ ತಮ್ಮ 80ನೇ ವಯಸ್ಸಿನಲ್ಲಿ ಪೋರ್ಷೆ ಬಾಕ್ಸ್‌ಸ್ಟರ್ ಸ್ಪೈಡರ್ ಕಾರನ್ನು ಖರೀದಿಸಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇದರೊಂದಿಗೆ ಅವರು 80 ಪೋರ್ಷೆ ಕಾರುಗಳನ್ನು ಖರೀದಿಸಿದ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಅವರು ಇತ್ತೀಚೆಗೆ ಖರೀದಿಸಿರುವ ಪೋರ್ಷೆ ಬ್ಯಾಕ್ಸ್ಟರ್ ಸ್ಪೈಡರ್ ಕಾರು ನೀಲಿ ಬಣ್ಣವನ್ನು ಹೊಂದಿದೆ.

ಮುಂದಿನ ಜನುಮದಿನಕ್ಕೆ ಅವರು ಮತ್ತೊಂದು ಪೋರ್ಷೆ ಕಾರನ್ನು ಖರೀದಿಸಲಿ ಎಂದು ಹಾರೈಸೋಣ. ಈ ಚಿತ್ರಗಳನ್ನು ಪೋರ್ಷೆ ಕಾರ್ಸ್ ನಾರ್ತ್ ಅಮೆರಿಕಾದಿಂದ ಪಡೆಯಲಾಗಿದೆ.