ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಚಲಿಸುತ್ತಿರುವ ಆಟೋರಿಕ್ಷಾದಲ್ಲಿ ಹಾಲಿವುಡ್ ಸಿನಿಮಾ ರೀತಿಯಲ್ಲಿ ಟಯರ್ ಅನ್ನು ಬದಲಾಯಿಸುವ ರಣರೋಚಕ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಕೆಲವರು ಜೇಮ್ಸ್ ಬಾಂಡ್ ಶೈಲಿಯ ಸ್ಟಂಟ್ಸ್ ಅಂದರೆ ಇನ್ನೂ ಕೆಲವರು ಇದು ಅಪಾಯಕಾರಿ ಮತ್ತು ಜೀವಕ್ಕೆ ಕುತ್ತು ತರುವ ಸ್ಟಂಟ್ ಎಂದು ಟೀಕಿಸಿದ್ದಾರೆ.

ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಸ್ಟಂಟ್ಸ್ ವೀಡಿಯೊವನ್ನು ನೋಡುವುದು ರೋಮಾಂಚನಕಾರಿ ಎಂಬುದು ಸತ್ಯ. ಈ ರೋಮಾಂಚನಕಾರಿ ಸ್ಟಂಟ್ಸ್ ವೀಡಿಯೋ ಕಳೆದ ವಾರದಿಂದಲೇ ಅನ್‍‍ಲೈನ್‍‍ನಲ್ಲಿ ಕಾಣಿಸಿಕೊಂಡಿದೆ. ಅಪ್‍‍ಲೋಡ್ ಆದ ನಂತರ ಸಾವಿರಾರು ಜನರು ಲೈಕ್‍ ಹಾಗೂ ಶೇರ್ ಮಾಡಿದ್ದಾರೆ. ಹೀಗೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಳೆಯ ಹಳದಿ ಬಣ್ಣದ ಆಟೋರಿಕ್ಷಾದ ಸ್ಟಂಟ್ ವೀಡಿಯೊ ನೋಡುವಾಗ ನಿಜಕ್ಕೂ ಒಂದು ಕ್ಷಣ ಮೈ‍ಜುಮ್ ಎನಿಸುತ್ತದೆ.

ಯಾವ ಸ್ಥಳದಲ್ಲಿ ಸ್ಟಂಟ್ಸ್ ಮಾಡಿದ್ದಾರೆ ಎಂಬುವುದು ಇನ್ನೂ ತಿಳಿದುಬಂದಿಲ್ಲ. ಆದರೆ ಈ ಆಟೋ ರಿಕ್ಷಾ ನೋಡುವಾಗ ಟಿ‍ವಿಎಸ್ ಕಂಪನಿಯ ಹಳೆಯ ಮಾದರಿ ಆಟೋ ರಿಕ್ಷಾ ಎಂದು ತಿಳಿಯುತ್ತದೆ. ಹಾಲಿವುಡ್ ಸಿನಿಮಾಗಳಲ್ಲಿ ಒಂದು ಭಾಗವನ್ನು ಪೂರ್ಣ ಪ್ರಮಾಣದಲ್ಲಿ ಮೇಲೆ ಎತ್ತಿ ಚಲಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇಲ್ಲಿ ನಿಜ ಜೀವನದಲ್ಲಿ ಆಟೋ ರಿಕ್ಷಾದ ಬಲಬದಿಯನ್ನು ಫೂರ್ಣ ಪ್ರಮಾಣದಲ್ಲಿ ಎತ್ತಿ ಎರಡು ಟಯರ್‍‍‍ಗಳಲ್ಲಿ ಕಂಟ್ರೋಲ್ ಮಾಡಿ ಆಟೋವನ್ನು ಓಡಿಸುತ್ತಿದ್ದಾರೆ.

ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಆಟೋ ರಿಕ್ಷಾದ ಬಲ ಬದಿಯ ಟಯರ್ ಗಾಳಿಯಲ್ಲಿರುವಾಗ ಒಬ್ಬ ವ್ಯಕ್ತಿಯು ಟಯರ್ ಬೋಲ್ಟ್ ಗಳೆನೆಲ್ಲಾ ಸಡಿಲಗೊಳಿಸಿ ಅದನ್ನು ಹಬ್‍‍ನಿಂದ ಬಿಚ್ಚುತ್ತಾನೆ. ಇದಾದ ಕೆಲವೇ ಸೆಕೆಂಡ್‍‍ಗಳಲ್ಲಿ ಮತ್ತೊಂದು ಆಟೋರಿಕ್ಷಾ ಈ ಆಟೋರಿಕ್ಷಾದ ಪಕ್ಕಕ್ಕೆ ಬರುತ್ತದೆ. ಈ ಆಟೋ ಸಾಗುತ್ತಿರುವ ವೇಗದಲ್ಲಿಯೇ ಆ ಆಟೋ ಸಹ ಚಲಿಸುತ್ತದೆ.

ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಎರಡನೇ ಆಟೋದಲ್ಲಿ ಬಂದ ವ್ಯಕ್ತಿ ಸ್ಪೇರ್ ಟಯರ್ ಅನ್ನು ತಂದು ಮೊದಲನೇಯ ಆಟೋದಲ್ಲಿ ಇದ್ದ ವ್ಯಕ್ತಿಗೆ ಕೊಡುತ್ತಾನೆ. ಆ ವ್ಯಕ್ತಿ ಆ ಟಯರ್ ಅನ್ನು ಮೊದಲಿಗೆ ಟಯರ್ ಬಿಚ್ಚಿದ ಸ್ಥಳಕ್ಕೆ ಜೋಡಿಸುತ್ತಾನೆ. ಮತ್ತೆ ಆಟೋ ರಿಕ್ಷಾ ಅದೇ ರೀತಿಯಲ್ಲಿ ಬಲ ಚಕ್ರವನ್ನು ಗಾಳಿಯಲ್ಲಿ ತೇಲಿ ಅದೇ ವೇಗದಲ್ಲಿ ಸಾಗುತ್ತದೆ.

ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಈ ಸ್ಟಂಟ್ ನೋಡಲು ರೋಮಾಂಚನಕಾರಿಯಾಗಿದ್ದರೂ, ತುಂಬಾ ಅಪಾಯಕಾರಿಯಾಗಿದ್ದು ಜೀವಕ್ಕೆ ಕುತ್ತು ತರುತ್ತದೆ. ಇದಲ್ಲಕ್ಕಿಂತ ಬಹು ಮುಖ್ಯ ವಿಷಯವೆಂದರೆ ಇವರು ಸ್ಟಂಟ್ಸ್ ಮಾಡಿಲು ಆಯ್ಕೆ ಮಾಡಿಕೊಂಡಿರುವುದು ಸಾರ್ವಜನಿಕರು ಮತ್ತು ವಾಹನಗಳು ಓಡಾಡುವ ರಸ್ತೆಯನ್ನು. ಇದರಿಂದ ಮತ್ತಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ.

ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಇವರು ಸ್ಟಂಟ್ ಮಾಡುತ್ತಿರುವ ರಸ್ತೆ ಸಾಮಾನ್ಯವಾದ ಸಣ್ಣ ಹೆದ್ದಾರಿಯಾಗಿದ್ದು, ರಸ್ತೆಯ ಎರಡೂ ಬದಿಯಲ್ಲಿ ಹಳ್ಳಿ ಹಾಗೂ ಮನೆಗಳನ್ನು ಕಾಣಬಹುದು. ರಸ್ತೆಗಳಲ್ಲಿಯೂ ಸಾಕಷ್ಟು ವಾಹನಗಳು ಓಡಾಡುತ್ತಿವೆ. ಈ ವೀಡಿಯೊದಲ್ಲಿ ಕಾರು ಮತ್ತು ಬೈಕ್‍‍ಗಳು ಸ್ಟಂಟ್ ಮಾಡುತ್ತಿರುವ ಆಟೋ ರಿಕ್ಷಾದ ಹಿಂಭಾಗ ಮತ್ತು ಮುಂಭಾಗದಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಒಂದು ವೇಳೆ ಆಟೋ ಡ್ರೈವರ್ ವಾಹನದ ನಿಯಂತ್ರಣ ಕಳೆದುಕೊಂಡಿದ್ದರೆ ಅವರಿಗೆ ಮಾತ್ರವಲ್ಲದೇ ರಸ್ತೆಯಲ್ಲಿ ಓಡಾಡುವವರಿಗೆ ಹಾಗೂ ರಸ್ತೆಯಲ್ಲಿದ್ದ ಇತರ ವಾಹನಗಳಲ್ಲಿದ್ದವರ ಜೀವಕ್ಕೂ ಕುತ್ತು ಬರುತ್ತಿತ್ತು. ಈ ಹಿಂದೆ ಹಲವಾರು ಜನರು ಚಲಿಸುತ್ತಿರುವ ವಾಹನದ ಟಯರನ್ನು ಬದಲಾಯಿಸಿದ್ದ ವೀಡಿಯೊಗಳು ವೈರಲ್ ಆಗಿದ್ದವು.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಕಾರುಗಳಲ್ಲಿ ಈ ರೀತಿಯ ಸಾಹಸಗಳು ಹಲವರು ನಡೆಸಿದ್ದರೂ, ಆಟೋ ರಿಕ್ಷಾದಲ್ಲಿ ಈ ರೀತಿಯಾಗಿ ಸ್ಟಂಟ್ ಮಾಡುತ್ತಿರುವುದು ಇದೇ ಮೊದಲ ಬಾರಿ. ಈ ಸ್ಟಂಟ್ ರೋಮಾಂಚನಕಾರಿಯಾಗಿರಬಹುದು ಮತ್ತು ವೀಕ್ಷಿಸಲು ಮನರಂಜನೆಯಾಗಿರಬಹುದು. ಆದರೆ ಸ್ಟಂಟ್ ಮಾಡುವಾಗ ಸ್ವಲ್ಪ ನಿಯಂತ್ರಣ ತಪ್ಪಿದರೂ ದುರಂತವಾಗುತ್ತಿತ್ತು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಾಂಡ್ ಶೈಲಿಯಲ್ಲಿ ಚಲಿಸುತ್ತಿರುವ ಆಟೋದ ಟಯರ್ ಬದಲಿಸಿದ ಭೂಪ..!

ಸಿನಿಮಾಗಳಲ್ಲಿ ತೋರಿಸುವ ಹಾಗೇ ಸ್ಟಂಟ್ಸ್ ಗಳನ್ನು ಮಾಡಲು ಹೋಗಿ ಆಸ್ಪತ್ರೆ ಸೇರಿದವರ ಸಂಖ್ಯೆಯೇ ಹೆಚ್ಚು. ಅಲ್ಲದೆ ಸ್ಟಂಟ್ಸ್ ಗಳನ್ನು ಮಾಡಿ ಬಹಳಷ್ಟು ಮಂದಿ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸ್ಟಂಟ್‍‍ಗಳನ್ನು ರಸ್ತೆಗಳಲ್ಲಿ ಮಾಡಬೇಡಿ. ನಿಮ್ಮಲ್ಲಿ ಸ್ಟಂಟ್ ಮಾಡುವ ಪ್ರತಿಭೆ ಇದ್ದರೆ, ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಜನನಿಬಿಡ ಪ್ರದೇಶಗಳಲ್ಲಿ ಮಾತ್ರ ಸ್ಟಂಟ್ ಮಾಡಿ.

Most Read Articles

Kannada
English summary
Auto Rickshaw Stunts: Video Shows Wheel Being Changed While Driving On A Highway - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more