ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಟಿವಿಯಲ್ಲಿ ಪ್ರಸಾರವಾಗುವ ಲೈಫ್ ಬಾಯ್ ಸಾಬೂನಿನ ಜಾಹೀರಾತು ತುಂಬಾ ಜನಪ್ರಿಯವಾಗಿರುವುದು. ಈ ಜಾಹೀರಾತಿನಲ್ಲಿ ಕೈ ತೊಳೀತಾ ಇರು, ತೊಳೀತಾ ಇರು..' ಎಂದು ಹೇಳಿದ ಪುಟ್ಟ ಬಾಲಕನಿಗೆ 'ಬಂಟಿ ನಿನ್ನ ಸಾಬೂನು ಸ್ಲೋ ನಾ'ಎನ್ನುವ ಮೂಲಕ ಟಾಂಗ್ ಕೊಡುವ ಮುದ್ದು ಹುಡುಗಿಯೇ ನಟಿ ಅವನೀತ್​ ಕೌರ್.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

2013ರಲ್ಲಿ ಚಿತ್ರೀಕರಿಸಿದ ಲೈಫ್‌ ಬಾಯ್‌ ಸಾಬೂನಿನ ಜಾಹೀರಾತಿನಲ್ಲಿ ಕಾಣಿಸಿಕೊಂಡ ಪುಟ್ಟ ಹುಡುಗಿ ಅವನೀತ್​ ಕೌರ್​ ಸೋಷಿಯಲ್ ಮೀಡಿಯಾಗಳಲ್ಲಿಯು ಸಿಕ್ಕಾಪಟ್ಟೆ ಫೇಮಸ್. ಹಿಂದಿ ಕಿರುತೆರೆ ನಟಿ ಅವನೀತ್​ ಕೌರ್​ ಕೂಡ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ.2 0 ವರ್ಷದ ವನೀತ್​ ಕೌರ್ ಕೇವಲ 9ನೇ ವಯಸ್ಸಿಗೆ ಅವರು ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಲಿಟ್ಟದ್ದರು. ಡ್ಯಾನ್ಸ್​ ಇಂಡಿಯಾ ಲಿಟ್ಲ್​ ಮಾಸ್ಟರ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಅವನೀತ್ ನಂತರ ಕೆಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡರು.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಬಳಿಕ ಅವನೀತ್​ ಕೌರ್ ಹಲವು ಧಾರಾವಾಹಿಗಳಲ್ಲಿ ನಟಿಸಿದರು. 2014ರಲ್ಲಿ ಚಿತ್ರರಂಗಕ್ಕೂ ಕಾಲಿಟ್ಟರು. ಕೆಲವು ಸಿನಿಮಾಗಳಲ್ಲೂ ಕೂಡ ಇವರು ನಟಿಸಿದ್ದಾರೆ. ಇಷ್ಟೇ ಅಲ್ಲದೇ ವೆಬ್ ಸೀರಿಸ್​ ಹಾಗೂ ಮ್ಯೂಸಿಕ್​ ವಿಡಿಯೋಗಳ ಮೂಲಕವೂ ಅವರು ಜನಪ್ರಿಯತೆಗಳಿಸಿದ್ದಾರೆ.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಇದೀಗ ನಟಿ ಅವನೀತ್​ ಕೌರ್ ಐಷಾರಾಮಿ ರೇಂಜ್​ ರೋವರ್​ ಎಸ್‍ಯುವಿಯನ್ನು ಖರೀದಿಸಿದ್ದಾರೆ. ನಟಿ ರೇಂಜ್​ ರೋವರ್​ ಎಸ್‍ಯುವಿಯ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ, ವೆಲಾರ್ ರೇಂಜ್ ರೋವರ್‌ನ ಹೆಚ್ಚು ಬೇಡಿಕೆಯ ಆವೃತ್ತಿಗಳಲ್ಲಿ ಒಂದಾಗಿದೆ.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಈ ಜನಪ್ರಿಯ ರೇಂಜ್​ ರೋವರ್​ ವೆಲಾರ್ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪವರ್‌ಟ್ರೇನ್‌ಗಳಲ್ಲಿ ಲಭ್ಯವಿದೆ. ರೇಂಜ್ ರೋವರ್ ವೆಲಾರ್ ಬೆಲೆಯು ಭಾರತದ ಎಕ್ಸ್ ಶೊರೂಂ ಪ್ರಕಾರ ರೂ.86.75 ಲಕ್ಷವಾಗಿದೆ.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಈ ಹೊಸ ರೇಂಜ್​ ರೋವರ್​ ವೆಲಾರ್ ಎಸ್‍ಯುವಿಯು ನವೀಕರಿಸಿದ ಮಾದರಿಯು ಈಗ ಸುಧಾರಿತ ಸ್ಟೈಲಿಂಗ್, ಹೆಚ್ಚು ತಂತ್ರಜ್ಞಾನ ಮತ್ತು ಹೊಸ ಮತ್ತು ನವೀಕರಿಸಿದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಹೊಸ ವೆಲಾರ್ ಹಿಂದಿನ ಮಾದರಿಗೆ ಹೋಲಿಸಿದರೆ ಹಲವಾರು ಹೊಸ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ವೆಲಾರ್ ಮಾದರಿಯು ರೇಂಜ್ ರೋವರ್ ಸರಣಿಯಲ್ಲಿ ತಾಂತ್ರಿಕವಾಗಿ ಸುಧಾರಿತ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ. ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಮುಂಭಾಗದಲ್ಲಿ ಹನಿ ಕಾಬ್ ಗ್ರಿಲ್ ಅನ್ನು ಹೊಂದಿದೆ. ಹಿಂಭಾಗವು ಸ್ಲೋಪಿಂಗ್ ರೂಫ್ ರೈಲ್ ಮತ್ತು ಟೈಲ್ ಲ್ಯಾಂಪ್ ಗಳ ಸುತ್ತಲೂ ಮತ್ತು ಸಿಲ್ವರ್ ಅಸ್ಸೆಂಟ್ ಗಳನ್ನು ಹೊಂದಿವೆ.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ನಾಲ್ಕು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದು ಫ್ಯೂಜಿ ವೈಟ್, ಪೋರ್ಟೊಫಿನೊ ಬ್ಲೂ, ಸಾರ್ಟೋರಿನಿ ಬ್ಲ್ಯಾಕ್ ಮತ್ತು ಸಿಲಿಕಾನ್ ಸಿಲ್ವರ್ ಬಣ್ಣಗಳಾಗಿವೆ. ಗ್ರಾಹಕರು ಇದರಲ್ಲಿ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯಲ್ಲಿ ಡೀಸೆಲ್ ಆಯ್ಕೆಯನ್ನು ಸಹ ಪಡೆದುಕೊಂಡಿದೆ, ಇದು ಇಂಜಿನಿಯಮ್ 2.0-ಲೀಟರ್ ಆಯಿಲ್ ಬರ್ನರ್ ಎಂಜಿನ್ ಆಗಿದೆ. ಈ ಎಂಜಿನ್ 177 ಬಿಹೆಚ್‌ಪಿ ಮತ್ತು 430 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಇದರೊಂದಿಗೆ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಕೂಡ ನೀಡಲಾಗಿದೆ. ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಈ ಹೊಸ ಎಸ್‍ಯುವಿಯು ಐಷಾರಾಮಿ ಇಂಟಿರಿಯರ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸ್ಟ್ಯಾಂಡರ್ಡ್ 10-ಇಂಚಿನ ಟಚ್‌ಸ್ಕ್ರೀನ್, 10-ಇಂಚಿನ ಕಡಿಮೆ ಟಚ್‌ಸ್ಕ್ರೀನ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಇಂಟರ್ಫೇಸ್ ಅನ್ನು ಹೊಂದಿದೆ. ಸಿಸ್ಟಮ್ ಅನ್ನು ಮೆರಿಡಿಯನ್ ಸೌಂಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ವೆಲಾರ್ 3ಡಿ ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಏರ್ ಸಸ್ಪೆಂಕ್ಷನ್, ಪಿಬಿ 2.5 ಫಿಲ್ಟರ್‌ನೊಂದಿಗೆ ಕ್ಯಾಬಿನ್ ಏರ್ ಮುಂತಾದ ಹೊಸ ಫೀಚರ್ಸ್ ಗಳನ್ನು ಹೊಂದಿವೆ. ಎಸ್‌ಯುವಿ ಸ್ಯಾಟಿನ್ ಕ್ರೋಮ್ ಪ್ಯಾಡಲ್ ಶಿಫ್ಟರ್‌ಗಳು, ಚರ್ಮದ ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಸ್ಥಿರ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.

ಐಷಾರಾಮಿ ಕಾರು ಖರೀದಿಸಿದ 'ಬಂಟಿ ನಿನ್ನ ಸಾಬೂನು ಸ್ಲೋ ನಾ' ಡೈಲಾಗ್​ ಖ್ಯಾತಿಯ ಅವನೀತ್​ ಕೌರ್

ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರುವ ಹೊಸ ವೆಲಾರ್ ಕಾರು ಮಾದರಿಯು ಎಲ್ಲಾ ಮಾದರಿ ಭೂಪ್ರದೇಶಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಗುಣಹೊಂದಿದೆ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಆಫ್ ರೋಡ್ ಕೌಶಲ್ಯತೆಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ರೇಂಜ್ ರೋವರ್ ವೆಲಾರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜಾಗ್ವಾರ್ ಎಫ್-ಪೇಸ್ ಮತ್ತು ಮರ್ಸಿಡಿಸ್ ಜಿಎಲ್‌ಇ ಕೂಪೆ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ,

Article Published On: Saturday, February 5, 2022, 17:29 [IST]
English summary
Avneet kaur buys land rover range rover velar suv price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+