Ayodhya: ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ 1,000ಕ್ಕೂ ಹೆಚ್ಚು ರೈಲುಗಳು, ಕರ್ನಾಟಕದಲ್ಲಿ ಎಲ್ಲಿಂದ?

ಪುಣ್ಯ ಭೂಮಿ ಅಯೋಧ್ಯೆ (Ayodhya)ಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡ ಮೊದಲ 100 ದಿನಗಳಲ್ಲಿ ಅಲ್ಲಿಗೆ ದೇಶದ ನಾನಾ ಭಾಗಗಳಿಂದ ಭಕ್ತರು ಬರಲು 1,000ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ (Indian Railway) ಯೋಜಿಸಿದೆ. ಈ ರೈಲುಗಳು ಜನವರಿ 19 ರಿಂದ ಕಾರ್ಯಾಚರಣೆ ಶುರು ಮಾಡಲಿವೆ ಎಂದು ವರದಿಯಾಗಿದೆ.

ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ನೂತನವಾಗಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ರೈಲುಗಳಿಂದ ಉದ್ಘಾಟನಾ ಸಮಾರಂಭಕ್ಕೂ ಕೆಲವೇ ದಿನಗಳ ಮೊದಲು ಯಾತ್ರಿಕರು ಅಯೋಧ್ಯೆಗೆ ಬಂದು ಸೇರಿಕೊಳ್ಳಬಹುದು. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ, ನಾಗ್ಪುರ, ಲಕ್ನೋ ಮತ್ತು ಜಮ್ಮು ಸೇರಿದಂತೆ ಪ್ರಮುಖ ನಗರಗಳಿಂದ ಅಯೋಧ್ಯೆಗೆ ರೈಲು ಸಂಚಾರ ಪ್ರಾರಂಭವಾಗಬಹುದು ಎಂದು ಮೂಲಗಳು ಹೇಳಿವೆ.

Ayodhya: ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ 1,000ಕ್ಕೂ ಹೆಚ್ಚು ರೈಲುಗಳು, ಕರ್ನಾಟಕದಲ್ಲಿ ಎಲ್ಲಿಂದ?

ಈ ರೈಲುಗಳನ್ನು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ರೈಲ್ವೆ ಇಲಾಖೆ ನಿಯೋಜಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಕಾಲ್ತುಳಿತ ಸೇರಿದಂತೆ ಯಾವುದೇ ಅವಘಡಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆಯ ರೈಲು ನಿಲ್ದಾಣವನ್ನು ನವೀಕರಿಸಲಾಗುತ್ತಿದೆ. ಪ್ರತಿದಿನ 50,000 ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗುವಂತೆ ಮೇಲ್ದರ್ಜೆರಿಸಲಾಗುತ್ತಿದ್ದು, ಜನವರಿ 15 ರೊಳಗೆ ಸಿದ್ಧವಾಗಲಿದೆ.

ದೇಗುಲ ಉದ್ಘಾಟನೆ ಬಳಿಕ, ಅಯೋಧ್ಯೆಗೆ ರಾಮ ಲಲ್ಲಾ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗಾಗಿ 10 - 15 ಕಾಲ ಭೋಜನ ವ್ಯವಸ್ಥೆ ಮಾಡಲು ಇಂಡಿಯನ್ ರೈಲ್ವೆ ಕೇಟರಿಂಗ್ ಟೂರಿಸಂ ಕಾರ್ಪೋರೇಷನ್ (Indian Railway Catering and Tourism Corporation - IRCTC) ಸಜ್ಜಾಗಿದೆ. ಅದಕ್ಕಾಗಿ ಆಹಾರ ಮಳಿಗೆಗಳನ್ನು ಸ್ಥಾಪಿಸುತ್ತಿದೆ ಎಂದು ಮೂಲಗಳು ಹೇಳಿವೆ.

Ayodhya: ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ 1,000ಕ್ಕೂ ಹೆಚ್ಚು ರೈಲುಗಳು, ಕರ್ನಾಟಕದಲ್ಲಿ ಎಲ್ಲಿಂದ?

ಅಯೋಧ್ಯೆಯಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸ್ಥಳೀಯ ಆಡಳಿತ ಕೂಡ ಕಾರ್ಯಪ್ರವೃತ್ತವಾಗಿದೆ. ಯಾತ್ರಿಕರನ್ನು ಸೆಳೆಯಲು ಎಲೆಕ್ಟ್ರಿಕ್ ಕ್ಯಾಟಮರನ್‌ (ಸಣ್ಣ ಹಡಗು) ವ್ಯವಸ್ಥೆಯನ್ನು ಮಾಡುತ್ತಿದ್ದು, ಭಕ್ತರು ಪವಿತ್ರ ಸರಯೂ ನದಿಯಲ್ಲಿ ಸಂಚರಿಸಬಹುದು. ಈ ಕ್ಯಾಟಮರನ್‌ ಏಕಕಾಲದಲ್ಲಿ 100 ಜನರನ್ನು ಸಾಗಿಸಬಲ್ಲದು. ಶೀಘ್ರದಲ್ಲೇ ವಾಟರ್ ಮೆಟ್ರೋ (Water Metro) ಕೂಡ ಈ ನದಿಯಲ್ಲಿ ಓಡಾಟ ನಡೆಸಲಿದೆ.

ಈ ವಾಟರ್ ಮೆಟ್ರೋವನ್ನು ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಾರ್ಪಣೆಗೊಳಿಸಬಹುದು. ಇದು ಸರಯೂ ನದಿಯಲ್ಲಿ ಗುಪ್ತರ್ ಘಾಟ್ ಮತ್ತು ರಾಮ್ ಕಿ ಪೈಡಿ ನಡುವೆ ಸಂಚರಿಸಲಿದ್ದು, 50 ಮಂದಿ ಪ್ರಯಾಣಿಸಬಹುದು. ಸೌರಶಕ್ತಿ (Solar Power) ನೆರವಿನಿಂದ ಈ ವಾಟರ್ ಮೆಟ್ರೋ ಚಲಿಸಲಿದ್ದು, ಪ್ರವಾಸಿಗರಿಂದ ಹೆಚ್ಚಿನ ಬೇಡಿಕೆ ಬಂದರೆ, ವಾಟರ್ ಮೆಟ್ರೋಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಿಸಲು ಸ್ಥಳೀಯಾಡಳಿತ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

Ayodhya: ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ 1,000ಕ್ಕೂ ಹೆಚ್ಚು ರೈಲುಗಳು, ಕರ್ನಾಟಕದಲ್ಲಿ ಎಲ್ಲಿಂದ?

ಅಯೋಧ್ಯೆಗೆ ಯಾತ್ರಿಕರ ವಾಯು ಮಾರ್ಗದಲ್ಲಿ ಬರಲು ವಿಮಾನ ನಿಲ್ದಾಣ (Ayodhya airport) ಸಹ ಸಿದ್ಧವಾಗುತ್ತಿದೆ. ಇದರ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್ 25 (December 25) ರಂದು ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 30 (December 30) ರಂದು ಮೊದಲ ವಿಮಾನ ಸಂಚರಿಸಲಿದೆ ಎಂದು ತಿಳಿದುಬಂದಿದೆ.

ಕೆಲವೇ ದಿನಗಳಲ್ಲಿ ಅಯೋಧ್ಯೆಯಿಂದ ಆನಂದ್ ವಿಹಾರ್‌ಗೆ (ದೆಹಲಿ) ಲಕ್ನೋ ಮಾರ್ಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಹ ಸಂಚಾರ ನಡೆಸಲಿದೆ. ಈ ಸಂಬಂಧ ರೈಲ್ವೆ ಇಲಾಖೆಯು ಕೆಲವೇ ದಿನಗಳಲ್ಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಈ ರೈಲು, 8 ಗಂಟೆಗಳಲ್ಲಿ ಅಯೋಧ್ಯೆಯಿಂದ ಆನಂದ್ ವಿಹಾರ್‌ ತಲುಪುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, December 17, 2023, 9:00 [IST]
English summary
Ayodhya rama mandira inauguration first 100 days operate 1000 trains
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+