ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ಕರೋನಾ ವೈರಸ್ ಹರಡಬಹುದೆಂಬ ಕಾರಣಕ್ಕೆ ಭಾರತದಲ್ಲಿರುವ ಜಿಮ್‌ಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಜಿಮ್ ಗಳನ್ನೇ ನಂಬಿಕೊಂಡಿದ್ದ ಸಾವಿರಾರು ಜಿಮ್ ಮಾಲೀಕರು ಹಾಗೂ ಜಿಮ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ಆದರೆ ಒಬ್ಬರು ಜಿಮ್ ತರಬೇತುದಾರರು ಮಾತ್ರ ಖುಷಿಯಿಂದ ಕುಣಿದಾಡುತ್ತಿದ್ದಾರೆ. ಜಿಮ್ ಗಳ ಪುನರಾರಂಭಕ್ಕೆ ಸರ್ಕಾರವು ಅನುಮತಿ ನೀಡಿರುವುದು ಈ ಖುಷಿಗೆ ಕಾರಣವಲ್ಲ. ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ಪಡೆದಿರುವುದು ಈ ಖುಷಿಗೆ ಕಾರಣವಾಗಿದೆ. ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದವರು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್.

ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ನಟ ಪ್ರಭಾಸ್ ತಮ್ಮ ಜಿಮ್ ಕೋಚ್ ಲಕ್ಷ್ಮಣ್ ರೆಡ್ಡಿ ಅವರಿಗೆ ದುಬಾರಿ ಬೆಲೆಯ ರೇಂಜ್ ರೋವರ್ ವೆಲಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.73.30 ಲಕ್ಷಗಳಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ಈ ಎಸ್‌ಯುವಿಯ ಆನ್-ರೋಡ್ ಬೆಲೆ ರೂ.89 ಲಕ್ಷಗಳಾಗುತ್ತದೆ. ಆನ್-ರೋಡ್ ಬೆಲೆಯು ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಇದು ಭಾರತದ ಯಾವುದೇ ನಟ ಅಥವಾ ನಟಿ ತಮ್ಮ ಜಿಮ್ ತರಬೇತುದಾರರಿಗೆ ನೀಡಿರುವ ದುಬಾರಿ ಕಾರು ಆಗಿರಬಹುದು.

ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ಚಲನಚಿತ್ರ ನಟ, ನಟಿಯರು ತಮ್ಮ ಸಹಾಯಕರಿಗೆ, ಸಿಬ್ಬಂದಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆ ನಟಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ತಮ್ಮ ಮೇಕಪ್ ಮನ್ ಗಳಿಗೆ ಜೀಪ್ ಕಂಪಾಸ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದರು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ರೇಂಜ್ ರೋವರ್ ವೆಲೋರ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಆಡಿ ಕ್ಯೂ 7 ಹಾಗೂ ಮರ್ಸಿಡಿಸ್ ಬೆಂಝ್ ಜಿಎಲ್ಇ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಆಡಿ ಕ್ಯೂ 7 ಎಸ್‌ಯುವಿಯು, 7 ಸೀಟುಗಳನ್ನು ಹೊಂದಿದ್ದರೆ, ವೆಲಾರ್ ಹಾಗೂ ಜಿಎಲ್ಇ ಎಸ್‌ಯುವಿಗಳು 5 ಸೀಟುಗಳನ್ನು ಹೊಂದಿವೆ.

ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ಲ್ಯಾಂಡ್ ರೋವರ್ ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಈ ರೇಂಜ್ ರೋವರ್ ವೆಲೋರ್ ಎಸ್‌ಯುವಿಯಲ್ಲಿ 2 ಲೀಟರಿನ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 247 ಬಿಹೆಚ್‌ಪಿ ಪವರ್ ಹಾಗೂ 365 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ರೇಂಜ್ ರೋವರ್ ವೆಲೋರ್‌ ಎಸ್‌ಯುವಿಯಲ್ಲಿ ಸುರಕ್ಷತತೆಗಾಗಿ 6 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್, ಇಎಸ್ ಟಿ, ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್ ಹಾಗೂ ಕ್ರೂಸ್ ಕಂಟ್ರೋಲ್ ಗಳನ್ನು ಸಹ ನೀಡಲಾಗಿದೆ.

ಜಿಮ್ ತರಬೇತುದಾರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಾಹುಬಲಿ

ಈ ಎಸ್‌ಯುವಿಯ ಡ್ರೈವರ್ ಹಾಗೂ ಮುಂಭಾಗದ ಪ್ರಯಾಣಿಕರ ಸೀಟನ್ನು 14 ರೀತಿಯಲ್ಲಿ ಅಡ್ಜಸ್ಟ್ ಮಾಡಬಹುದು. ರೇಂಜ್ ರೋವರ್ ವೆಲೋರ್ ಎಸ್‌ಯುವಿಯು ಪನೋರಾಮಿಕ್ ಸನ್‌ರೂಫ್, ರೇರ್ ಎಸಿ ವೆಂಟ್ಸ್ ಹಾಗೂ ಪಾರ್ಕಿಂಗ್ ಅಸಿಸ್ಟ್ ಗಳನ್ನು ಹೊಂದಿದೆ. ರೇಂಜ್ ರೋವರ್ ವೆಲೋರ್ ಎಸ್‌ಯುವಿಯನ್ನು 2019ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

Most Read Articles

Kannada
English summary
Bahubali Prabhas gifts his gym trainer Range Rover Velar SUV. Read in Kannada.
Story first published: Monday, September 7, 2020, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X