ಕೋವಿಡ್‌ನಿಂದ ಜೀವ ಕಳೆದುಕೊಂಡ ಉದ್ಯೋಗಿಗಳ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ಬಜಾಜ್
ಕೋವಿಡ್ 2ನೇ ಅಲೆ ಹೊಡೆತಕ್ಕೆ ದೇಶಾದ್ಯಂತ ದಿನಂಪ್ರತಿ ಸಾವಿರಾರು ಜನ ಪ್ರಾಣಕಳೆದುಕೊಳ್ಳುತ್ತಿದ್ದು, ದುಡಿಯುವ ಮನೆ ಯಜಮಾನನ್ನು ಕಳೆದಕೊಂಡಿರುವ ಅದೆಷ್ಟು ಕುಟುಂಬಗಳು ಅಕ್ಷರಶಃ ಅನಾಥವಾಗಿವೆ. ಹೀಗಿರುವಾಗ ಬಜಾಜ್ ಆಟೋ ಕಂಪನಿಯು ತನ್ನ ಉದ್ಯೋಗಿಗಳ ಕುಟುಂಬಕ್ಕೆ ನೆರವಿನ ಹಸ್ತ ಚಾಚಲು ಮುಂದಾಗಿದೆ.

ಜೀವ ಮತ್ತು ಜೀವನ ಭದ್ರತೆ ಪ್ರತಿಯೊಬ್ಬರಿಗೂ ಮುಖ್ಯವಾಗಿರುವಾಗ ದುಡಿವ ಸ್ಥಳಗಳಲ್ಲಿ ವೈರಸ್ ಹರಡುವಿಕೆಯಿಂದ ಅದೆಷ್ಟೋ ಜೀವಗಳು ಬಲಿಯಾಗಿದ್ದು, ಬಜಾಜ್ ಸಮೂಹ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಸಾವಿರಾರು ಉದ್ಯೋಗಿಗಳಿಗೂ ಕೋವಿಡ್ ಹರಡಿಕೊಂಡಿತ್ತು. ಕೋವಿಡ್‌ನಿಂದಾಗಿ ಬಹುತೇಕ ಉದ್ಯೋಗಿಗಳು ಗುಣಮುಖರಾದರೂ ಕೆಲವು ಉದ್ಯೋಗಿಗಳು ಪ್ರಾಣಕಳೆದುಕೊಂಡಿದ್ದು, ಮನೆ ಯಜಮಾನನ್ನು ಕಳೆದುಕೊಂಡಿರುವ ಕುಟುಂಬಗಳು ಇದೀಗ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ.

ಇದರಿಂದ ಪ್ರಾಣಕಳೆದುಕೊಂಡಿರುವ ಉದ್ಯೋಗಿಗಳ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿರುವ ಟಿವಿಎಸ್ ಕಂಪನಿಯು ಆರ್ಥಿಕ ಸಂಕಷ್ಟದ ನಡುವೆಯೂ ಮೃತ ಉದ್ಯೋಗಿಗಳ ಸಂಬಳವನ್ನು ನಿಲ್ಲಿಸದೆ ಮುಂದಿನ ಎರಡು ವರ್ಷಗಳ ಕಾಲ ಅವರ ಕುಟುಂಬಗಳಿಗೆ ನೆರವು ನೀಡಲಿದೆ.

ಜೊತೆಗೆ ಮೃತರ ಕುಟಂಬದಲ್ಲಿನ ಮಕ್ಕಳ ಶಿಕ್ಷಣಕ್ಕೂ ಸಹಕಾರ ನೀಡುವುದಾಗಿ ಹೇಳಿಕೊಂಡಿರುವ ಕಂಪನಿಯು ಪ್ರತಿ ವರ್ಷ ಪ್ರತಿ ಮಗುವಿಗೆ ರೂ. 1 ಲಕ್ಷ ನೆರವು ಘೋಷಣೆ ಮಾಡಿದ್ದು, ನೆರವಿನ ಹಸ್ತವನ್ನು ಖಾಯಂ ಉದ್ಯೋಗಿಗಳಿಗೆ ಅನ್ವಯವಾಗುವ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಟಿವಿಎಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಉದ್ಯೋಗೂ ಸಂಕಷ್ಟ ಸಂದರ್ಭದಲ್ಲಿ ಗರಿಷ್ಠ ಪರಿಹಾರ ಒಳಗೊಂಡ ಜೀವ ವಿಮೆ ವಿತರಿಸಿದ್ದು, ಕೋವಿಡ್ ಸೋಂಕು ತಗುಲಿದ ಉದ್ಯೋಗಿಗಳಿಗೆ ಎಲ್ಲಾ ರೀತಿಯ ನೆರವುಗಳನ್ನು ತುರ್ತುಗಾಗಿ ನೀಡಿ ಸಹಕರಿಸುತ್ತಿದೆ. ಇನ್ನು ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ವೈರಸ್ ಹರಡುವಿಕೆಯನ್ನು ತಡೆಯಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್-ಶೀಲ್ಡ್‌ಗಳ ಬಳಕೆಯು ಹೆಚ್ಚಿಸಲಾಗುತ್ತಿದ್ದರೂ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ.
MOST READ: ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಜೈಲು ಶಿಕ್ಷೆ ಫಿಕ್ಸ್

ಹೀಗಾಗಿ ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಯು ಸಾಧ್ಯವಿರುವ ಕಡೆಗಳಲ್ಲಿ ಸರ್ಕಾರದ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಅತಿ ದೊಡ್ದ ವಾಹನ ಉತ್ಪಾದನಾ ಕಂಪನಿಯಾಗಿರುವ ಬಜಾಜ್ ಆಟೋ ಮಾತೃಸಂಸ್ಥೆಯಾದ ಬಜಾಜ್ ಗ್ರೂಪ್ ಕಂಪನಿಯು ಕೂಡಾ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಹಣಾಕಾಸು ನೆರವು ನೀಡಿದೆ.

2020ರಲ್ಲಿ ಕೋವಿಡ್ ಹೆಚ್ಚಳ ಸಂದರ್ಭದಲ್ಲೂ ಸರ್ಕಾರಕ್ಕೆ ಬರೋಬ್ಬರಿ ರೂ.100 ಕೋಟಿ ದೇಣಿಗೆ ನೀಡಿದ್ದ ಬಜಾಜ್ ಗ್ರೂಪ್ ಇದೀಗ 2ನೇ ಅಲೆಯ ಕೋವಿಡ್ ನಿಯಂತ್ರಣಕ್ಕಾಗಿ ರೂ.200 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ಪಿಎಂ ಕೇರ್ಸ್ ಫಂಡ್(ಪ್ರಧಾನ ಮಂತ್ರಿ ಪರಿಹಾರ ನಿಧಿ)ಗೆ ದೇಣಿಗೆ ನೀಡಲಾಗಿದೆ. ದೇಣಿಗೆಯಲ್ಲಿ ಅರ್ಧದಷ್ಟು ಹಣಕಾಸು ನೆರವು ನೀಡಲಿರುವ ಬಜಾಜ್ ಗ್ರೂಪ್ ಇನ್ನುಳಿದ ಹಣದಲ್ಲಿ ವಿವಿಧ ಎನ್‌ಜಿಎಗಳ ಮೂಲಕ ಕೋವಿಡ್ ಸೋಂಕಿತರಿಗೆ ಸಹಾಯ ಮಾಡಲಿದೆ.
MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಎನ್‌ಜಿಓಗಳ ಮೂಲಕ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುವುದು ಮತ್ತು ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ನೆರವು ನೀಡಲು ನಿರ್ಧರಿಸಿದೆ.


Click it and Unblock the Notifications