ಫುಲ್‌ಟ್ಯಾಂಕ್‌ ಪೆಟ್ರೋಲ್‌ನಲ್ಲಿ 700ಕಿಮೀ ರೇಂಜ್‌: ಇವಿಗೇ ಸೆಡ್ಡು ಹೊಡೆಯುತ್ತಿದೆ ಬಜಾಜ್‌ನ ಈ ಬೈಕ್‌!

ಭಾರತದ ದ್ವಿಚಕ್ರ ವಾಹನ ನಿರ್ಮಾಣ ಕಂಪನಿಗಳಿಗೆ ತಿಂಬಾ ಹೆಸರುವಾಸಿ. ಭಾರತದ ಹೆಮ್ಮೆಯ ಬೈಕ್‌ ನಿರ್ಮಾಣ ಕಂಪನಿಗಳಾದ ಬಜಾಜ್‌, ಹೀರೋ ಮುಂದಾದ ಬ್ರಾಂಡ್‌ಗಳು ಗ್ರಾಹಕರ ಅಭಿರುಚಿಯನ್ನು ತಿಳಿದುಕೊಂಡು, ಬಜೆಟ್‌ ಗಮನದಲ್ಲಿಟ್ಟುಕೊಂಡು ಬೇಕಾದ ರೀತಿಯಲ್ಲಿ ಬೈಕ್‌ಗಳನ್ನು ಗ್ರಾಹಕರಿಗೆ ತಲುಪಿಸಿ, ಗ್ರಾಹಕರ ಒಂದೇ ಮನವನ್ನು ಹಲವು ಬಾರಿ ಗೆಲ್ಲುತ್ತಿದ್ದಾರೆ.

ಗ್ರಾಹಕರ ಮನದಲ್ಲಿ ಈಗಲೂ ಇಷ್ಟವಾಗಿರುವ ಬೈಕ್‌ಗಳಲ್ಲಿ ಬಜಾಜ್‌ನ ಸಿಟಿ 110 ಎಕ್ಸ್‌(Bajaj CT 110X) ಸಹ ಒಂದು. ಅತ್ಯಾಧುನಿಕ ಫೀಚರ್‌ಗಳ ಜೊತೆಗೆ ಈ ಬೈಕ್‌ ಗ್ರಾಹಕರಿಗೆ ಭರ್ಜರಿ ಮೈಲೇಜ್‌ ಅನ್ನು ಸಹ ನೀಡುತ್ತದೆ. ಇದರ ಸ್ಲೀಕ್‌ ಮತ್ತು ಸ್ಟೈಲಿಶ್‌ ಡಿಸೈನ್ ಜೊತೆ ಈ ಬೈಕ್‌ ನೀಡುವ ಮೈಲೇಜ್ ಗ್ರಾಹಕರ ಮನಗೆಲ್ಲುವಲ್ಲಿ ಸಫಲವಾಗಿದೆ. ಹಲವರ ಪ್ರಕಾರ ಇತ್ತೀಚೆಗೆ ಬರುತ್ತಿರುವ ಎಲೆಕ್ಟ್ರಿಕ್‌ ಬೈಕ್‌ಗಳಿಗಿತಂತಲೂ ಬಜಾಜ್‌ನ ಈ ಬೈಕ್ ಬೆಸ್ಟ್ ಎಂದು ಹೇಳುತ್ತಿದ್ದಾರೆ.

Bajaj CT 110X Is Providing 700 KM Mileage In Full Tank

ನೀವೇನಾದರೂ 2024 ರಲ್ಲಿ ಒಂದೊಳ್ಳೆ ಮೈಲೇಜ್‌ ನೀಡುವ ಬೈಕೇನಾದರೂ ಬೇಕು ಎಂದು ಹುಡುಕುತ್ತಿದ್ದರೆ ನಿಮ್ಮ ಹುಡುಕಾಟ ಇಲ್ಲಿಗೆ ಅಂತ್ಯವಾಗಬಲ್ಲದು. ಯಾಕೆಂದರೆ ಸುಮಾರು ೧೧ ಲೀಟರ್‌ ಪೆಟ್ರೋಲ್‌ ಹಿಡಿಸುವ ಟ್ಯಾಂಕ್‌ ಇದರಲ್ಲಿದ್ದು, ನೀವು ಒಮ್ಮೆ ಟ್ಯಾಂಕ್‌‌ ತುಂಬಿದರೆ ಅದರ ಮೇಲೆ ಒಂದು ರೂಪಾಯಿಯೂ ಖರ್ಚು ಮಾಡದೇ ಸುಮಾರು 700 ಕಿಲೋ ಮೀಟರ್‌ ವರೆಗೆ ಈ ವಾಹನವನ್ನು ಚಲಾಯಿಸಬಹುದಾಗಿದೆ.

ಈ ಬೈಕ್‌ನ ಬೆಲೆಯನ್ನು ನೋಡುವುದಾದರೆ ಇದು ಭಾರತದಲ್ಲಿ ಸುಮಾರು 55,494 ರೂ ಎಕ್ಸ್‌ ಶೋ ರೂಮ್‌ ಬೆಲೆಗೆ ದೊರಕುತ್ತಿದ್ದು, ಯಾರಿಗೆ ಬೇಕಾದರೂ ಸಹ ತೆಗೆದುಕೊಳ್ಳಬಹುದಾಗಿದೆ. ಕಡಿಮೆ ಬೆಲೆಗೆ ತಕ್ಕ ಮಟ್ಟಿನ ಪರ್ಫಾಮೆನ್ಸ್‌ ಮತ್ತು ಉತ್ತಮ ಮೈಲೇಜ್‌ ಕೊಡುವ ಈ ಬೈಕ್‌ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. 115 ಸಿಸಿ DTS-I ಎಂಜಿನ್‌ ಸಿಗುತ್ತಿದ್ದು, ಇದು ಸುಮಾರು 8 ಹಾರ್ಸ್‌ ಪವರ್‌ 10 ಎನ್‌ಎಮ್‌ ಟಾರ್ಕ್‌ ಅನ್ನು ಸಹ ಉತ್ಪಾದಿಸುತ್ತದೆ.

Bajaj CT 110X Is Providing 700 KM Mileage In Full Tank

4 ಸ್ಪೀಡ್‌ ಗೇರ್‌ ಟ್ರಾನ್ಸ್ಮಿಷನ್‌ ಹೊಂದಿರುವ ಈ ಬೈಕ್‌ನಲ್ಲಿ ಕಾಂಬಿ ಬ್ರೇಕಿಂಗ್‌ ಸಿಸ್ಟಂ ಬರುತ್ತಿದ್ದು, ಗ್ರಾಹಕರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಈ ಬೈಕ್‌ನ ಮುಂಭಾಗದಲ್ಲಿ ೧೨೫ ಎಂಎಂ ಟೆಲಿಸ್ಕೋಪಿಕ್ ಸಸ್ಪೆನ್ಷನ್‌ ಬರುತ್ತಿದ್ದು, ಹಿಂಭಾಗದಲ್ಲಿ 100 ಎಂಎಂ ನ ಡ್ಯುಯಲ್‌ ಶಾಕ್‌ ಅಬ್ಸಾರ್ಬರ್‌ಗಳು ಬರುತ್ತದೆ. ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಎರಡೂ ಕಡೆ ಟ್ಯೂಬ್‌ಲೆಸ್‌ ಟೈರ್‌ಗಳನ್ನು ಈ ಬೈಕ್‌ ಹೊಂದಿದೆ.

ಹಲವರ ಪ್ರಕಾರ ಬಜಾಜ್‌ನ ಈ ಬಜಾಜ್‌ನ ಸಿಟಿ 110 ಎಕ್ಸ್ ಬೈಕ್‌ ಇತ್ತೀಚೆಗೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿರುವ ಹಲವಾರು ಎಲೆಕ್ಟ್ರಿಕ್‌ ಬೈಕ್‌ಗಳಿಗಿಂತಲೂ ಉತ್ತಮ ಎಂಬ ಅಭಿಪ್ರಾಯವಿದೆ. ಇದಕ್ಕೆ ಕಾರಣ ಈ ಮೇಲೆ ತಿಳಿಸಿರುವಂತಹ ಇದರ ಮೈಲೇಜ್‌. ಒಂದು ಸಲ ಈಗಿನ ಬೆಲೆಗೆ ಈ ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ತುಂಬಿಸಲು ಸುಮಾರು ಒಂದರಿಂದ ಒಂದು ಸಾವಿರದ ನೂರು ರೂಪಾಯಿಗಳಷ್ಟು ಖರ್ಚಾಗುತ್ತದೆ.

Bajaj CT 110X Is Providing 700 KM Mileage In Full Tank

ಒಂದು ಸಲ ಟ್ಯಾಂಕ್‌ ಫುಲ್‌ ಮಾಡಿದರೆ ಯಾವುದೇ ತಲೆಬಿಸಿಯಿಲ್ಲದೆ ಸುಮಾರು ೭೫೦ ಕಿಮೀ ನಷ್ಟು ನೀವು ಈ ಬೈಕ್‌ ಅನ್ನು ಚಲಾಯಿಸಬಹುದಾಗಿದೆ. ಈ ಬೈಕ್‌ನಲ್ಲಿ ಅಡ್ವಾನ್ಸ್ಡ್‌ ಫೀಚರ್‌ಗಳು ಇರುವುದರಿಂದ ನಿಮ್ಮ ಪ್ರಯಾಣವನ್ನು ಇದು ಇನ್ನೂ ಸುಖಕರವಾಗಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಸದ್ಯಕ್ಕೆ ಈ ಬೈಕ್‌ ಕೇವಲ ಎಲೆಕ್ಟ್ರಿಕ್‌ ಬೈಕ್‌ಗಳಿಗೆ ಮಾತ್ರವಲ್ಲದೇ ಭಾರತದ ಮತ್ತೊಂದು ಪ್ರಸಿದ್ದ ಬೈಕ್‌ ಆದ ಹೀರೋ ಸ್ಪ್ಲೆಂಡರ್‌ನ ಪ್ರಮುಖ ಪ್ರತಿಸ್ಪರ್ಧಿಯೂ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, February 17, 2024, 12:10 [IST]
English summary
Bajaj ct 110x is providing 700 km mileage in full tank
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+