ಸಿಎನ್‌ಜಿ ಬೈಕ್ ಮೊದಲ ಅವಘಡ: ಟ್ಯಾಂಕ್ ತುಂಬುವಾಗ ಸಿಬ್ಬಂದಿ ಮುಖಕ್ಕೆ ಹೊಡೆದ ನಾಜಲ್!

ಬಜಾಜ್ (Bajaj) ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಫ್ರೀಡಂ 125 ಸಿಎನ್‌ಜಿ ಬೈಕ್ ಅವಘಡವೊಂದಕ್ಕೆ ತುತ್ತಾಗಿದ್ದು, ಈ ಕುರಿತ ವಿಡಿಯೋ ಸಖತ್ ವೈರಲ್ ಆಗಿದೆ. ಬಂಕ್‌ನಲ್ಲಿ ಬೈಕ್‌ಗೆ ಸಿಎನ್‌ಜಿ ತುಂಬುವಾಗ ನಾಜಲ್ ಒಡೆದು ಅಲ್ಲಿನ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಈ ಕುರಿತ ದೃಶ್ಯಗಳು ಸಿಎನ್‌ಜಿ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬೈಕ್ ಕುರಿತು ಸಾಕಷ್ಟು ಚರ್ಚೆಗಳು ಶುರುವಾಗಿವೆ. ಸುರಕ್ಷತೆ ಇಲ್ಲದ ಬೈಕ್ ಅನ್ನು ಮಾರುಕಟ್ಟೆಗೆ ತರಲಾಗಿದೆ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಅವಘಡಕ್ಕೆ ಕಾರಣ ಏನಾಗಿರಬಹುದು ಎಂಬುದನ್ನು ಇಲ್ಲಿ ನೋಡೋಣ.

ಬಜಾಜ್ ಕಂಪನಿಯು ಈ ಬೈಕ್ ಅನ್ನು ಹಲವು ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಿಸಿದೆ, ಸಿಎನ್‌ಜಿ ಟ್ಯಾಂಕ್ ಅನ್ನು ತುಂಬಾ ಭದ್ರವಾಗಿ ಬೈಕ್‌ನಲ್ಲಿ ಅಳವಡಿಸಲಾಗಿದೆ. ಸಿಎನ್‌ಜಿ ಟ್ಯಾಂಕ್‌ ಮೇಲೆ ಲಾರಿ ಹತ್ತಿದ್ರು ಕೂಡ ಏನೂ ಆಗದಂತೆ ಅದರ ನಿರ್ಮಾಣವಿದೆ ಎಂದು ವಿಡಿಯೋವನ್ನು ಸಹ ಕಂಪನಿ ಹಂಚಿಕೊಂಡಿತ್ತು. ಹಾಗೆಯೇ ಇತರ ಸಿಎನ್‌ಜಿ ವಾಹನಗಳಂತಲ್ಲದೇ ಈ ಬೈಕ್‌ಗೆ ಸಿಎನ್‌ಜಿ ತುಂಬುವಾಗ ಹೆಚ್ಚುವರಿ ಜಾಗೃತಿ ಅವಶ್ಯವಾಗಿದೆ ಎಂದು ಸಹ ಹೇಳಿತ್ತು.

bajaj-freedom-125-cng-refueling-accident-video

ಆಗಿದ್ದೇನು?: ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಮಾಲೀಕರು ತಮ್ಮ ಬೈಕ್ ಅನ್ನು ಫಿಲ್ಲಿಂಗ್ ಸ್ಟೇಷನ್‌ಗೆ ಕೊಂಡೊಯ್ದಾಗ ಅಲ್ಲಿನ ಉದ್ಯೋಗಿ ಸಿಎನ್‌ಜಿ ಫಿಲ್ಲಿಂಗ್ ನಾಜಿಲ್ ಅನ್ನು ಬೈಕ್‌ಗೆ ಜೋಡಿಸಿದ್ದಾರೆ. ಆದರೆ ನಮ್ಮ ಪ್ರಕಾರ ಆತ ತಪ್ಪಾಗಿ ನಾಜಲ್ ಅನ್ನು ಜೋಡಿಸಿರಬಹುದು, ಇದೇ ಕಾರಣಕ್ಕೆ ಬಟನ್ ಒತ್ತಿದ ಕೆಲವೇ ಕ್ಷಣಗಳಲ್ಲಿ ನಾಜಿಲ್ ಬೈಕಿನ ಸಿಎನ್‌ಜಿ ಫಿಲ್ಲಿಗ್ ರಂಧ್ರದಿಂದ ರಭಸವಾಗಿ ಹೊರಬಂದಿದೆ.

ಈ ವೇಳೆ ಅಲ್ಲೇ ಇದ್ದ ಉದ್ಯೋಗಿಯ ತಲೆಗೆ ನಾಜಲ್ ಹೊಡೆದಿದ್ದು, ಆ ರಭಸಕ್ಕೆ ಪ್ರಜ್ಞಾಹೀನನಾಗಿ ಕೆಳಗುರುಳಿದ್ದಾನೆ. ಘಟನೆಗೆ ಪ್ರಮುಖ ದೋಷವು ಆ ಉದ್ಯೋಗಿಯಿಂದ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆತ ಬೈಕಿಗೆ ನಾಜಿಲ್ ಅನ್ನು ಸರಿಯಾಗಿ ಜೋಡಿಸಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಫ್ರೀಡಂ 125ನ ಭರ್ತಿ ಬಿಂದುವಿನಲ್ಲಿಯೂ ಸಮಸ್ಯೆ ಇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.

bajaj-freedom-125-cng-refueling-accident-video

ಅಭ್ಯಾಸ ಬೇಕಿದೆ: ಏನೇ ಆಗಲಿ ಸಿಎನ್‌ಜಿ ಪಂಪ್ ಉದ್ಯೋಗಿಗಳು ಪ್ರಸ್ತುತ ಬೈಕುಗಳಲ್ಲಿ ಸಿಎನ್‌ಜಿ ತುಂಬಲು ಅಭ್ಯಾಸ ಹೊಂದಿಲ್ಲ, ಸರಿಯಾಗಿ ನಾಜಲ್ ಅಳವಡಿಸುವ ಸಂಪೂರ್ಣ ಜ್ಞಾನವನ್ನು ಪಡೆಯಬೇಕಿದೆ. ಮುಂಬರುವ ವರ್ಷಗಳಲ್ಲಿ ದ್ವಿಚಕ್ರ ಸಿಎನ್‌ಜಿ ವಾಹನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಇರುವುದರಿಂದ ಬಂಕ್ ಸಿಬ್ಬಂದಿ ಅವುಗಳ ನಿರ್ವಹಣೆಯ ಬಗ್ಗೆ ಸಂಪೂರ್ಣವಾಗಿ ತಿಳಿಯುವ ಅನಿವಾರ್ಯತೆ ಇದೆ.

ಬಜಾಜ್ ಫ್ರೀಡಂ CNG ಬೈಕ್ ವಿಶೇಷತೆಗಳು: ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ನ್ನು ಭಾರತದಲ್ಲಿ 95,000 ರೂ.ಗಳ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ವಿಶಿಷ್ಟ ಮೋಟಾರ್ ಸೈಕಲ್ ಡ್ರೈವರ್ ಸೀಟಿನ ಕೆಳಗೆ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿದ್ದು, ಇದು 2 ಕೆ.ಜಿ ಸಿಎನ್‌ಜಿ ಟ್ಯಾಂಕ್ ಸಾಮರ್ಥ್ಯದೊಂದಿಗೆ ಬರುತ್ತದೆ. ಹಾಗೆಯೇ ಇದರಲ್ಲಿ 2-ಲೀಟರ್ ಪೆಟ್ರೋಲ್ ಟ್ಯಾಂಕ್ ಸಹ ಇದೆ.

ಈ ಮೋಟಾರ್‌ಸೈಕಲ್ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9.4 ಬಿಹೆಚ್ ಪವರ್ ಮತ್ತು 9.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಫ್ರೀಡಂ 125 ಬೈಕ್ ಎರಡು ಕೆ.ಜಿ ಸಿಎನ್‌ಜಿ ಹಾಗೂ ಎರಡು ಲೀಟರ್ ಪೆಟ್ರೋಲ್‌ನಲ್ಲಿ (ಎರಡು ಫುಲ್‌ಟ್ಯಾಂಕ್‌ನಲ್ಲಿ) 330 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಬಜಾಜ್ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 16, 2024, 13:30 [IST]
English summary
Bajaj freedom 125 cng refueling accident video
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+