ರಾಶಿ ಫೀಚರ್‌ಗಳನ್ನು ಹೊತ್ತು ತಂದ ಹೊಸ ಪಲ್ಸರ್‌ NS 200 : ಹಳೇ ಹವಾ ಮುಂದುವರೆಸುತ್ತಾ ಬಜಾಜ್‌!

ಬಹಳಷ್ಟು ದಿನಗಳಿಂದ ಭಾರತೀಯರು ಕಾಯುತ್ತಿದ್ದ ವಿಷಯಕ್ಕೆ ಇದೀಗ ತಕ್ಕ ಮಟ್ಟಿನ ವಿರಾಮ ಸಿಕ್ಕಿದಂತಿದೆ. ಭಾರತೀಯ ಮೂಲದ ಪ್ರತಿಷ್ಟಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಬಜಾಜ್‌ನ ಹೆಸರಾಂತ NS 200 ಎಂಬ ಬೈಕ್ ಕೆಲವು ಅಪ್‌ಡೇಟ್‌ಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂಬ ಸುದ್ದಿ ಈ ಹಿಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಇದೀಗ ಭಾರತೀಯರ ಕಾಯುವಿಕೆಗೆ ಕೊನೆ ಸಿಕ್ಕಿದ್ದು, ಬಜಾಜ್‌ ತನ್ನ ಹೊಸ ಪಲ್ಸರ್ ಎನ್‌ಎಸ್‌ 200 ಬೈಕ್‌ನ ಟಿವಿ ಕಮರ್ಷಿಯಲ್‌ ಅನ್ನು ಬಿಡುಗಡೆ ಮಾಡಿದ್ದು, ಸಾಕಷ್ಟು ಜನರ ಮನದಲ್ಲಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹೌದು, ಡಿಸೈನ್‌ನಲ್ಲಿ ಕಳೆದ ಬಾರಿಯ ಪಲ್ಸರ್ ಎನ್‌ಎಸ್‌ 200 ಗಿಂತ ಕೊಂಚ ಬದಲಾವಣೆ ಹೆಡ್‌ಲೈಟ್‌ನಲ್ಲಿ ಕಂಡು ಬಂದಿರುವುದು ನಾವು ಟಿವಿಸಿ ಯಲ್ಲಿ ಕಾಣಬಹುದಾಗಿದೆ.

BAJAJ Pulsar NS 200 TVC Is Out Now, Complete Digital Instrument Cluster and More

ಹೊಸ BAJAJ Pulsar NS 200 ನಲ್ಲಿ ಸಂಪೂರ್ಣ ಡಿಜಿಟಲ್‌ ಇನ್ಸ್ಟುಮೆಂಟ್ ಕ್ಲಸ್ಟರ್‌ ಅನ್ನು ನಾವು ಕಾಣಬಹುದಾಗಿದೆ. ಈ ಮೂಲಕ ಹಿಂದಿನಿಂದಲೂ ಬಜಾಜ್‌ ಬಳಸಿಕೊಂಡು ಬರುತ್ತಿದ್ದ ಡಿಜಿಟಲ್‌ ಪ್ಲಸ್‌ ಅನಲಾಗ್‌ ಇನ್ಸ್ಟ್ರುಮೆಂಟ್‌ ಕ್ಲಸ್ಟರ್‌ಗೆ ವಿರಾಮ ನೀಡಿದಂತಾಗಿದೆ. ಮಾಹಿತಿಗಳ ಪ್ರಕಾರ ಈ ಡಿಜಿಟಲ್‌ ಇನ್ಸ್ಟುಮೆಂಟ್ ಕ್ಲಸ್ಟರ್ ನಲ್ಲಿ ಕನೆಕ್ಟೆಡ್‌ ಫೀಚರ್‌ಗಳನ್ನು ಸಹ ಸಿಗಲಿದೆ.

ಇನ್ನುಳಿದಂತೆ ಬಜಾಜ್‌ ಪಲ್ಸರ್‌ NS 200 ತನ್ನ ಎಂಜಿನ್‌ ಮತ್ತು ಸ್ಪೆಸಿಫಿಕೇಶನ್‌ ವಿಭಾಗದಲ್ಲಿ ಕಳೆದ ಬಾರಿಯ ವಿಷಯಗಳನ್ನೇ ಮುಂದುವರೆಸಿಕೊಂಡು ಹೋಗುವ ಲಕ್ಷಣಗಳಿದೆ. ಈಗಿರುವ ಬಜಾಜ್‌ ಎನ್‌ಎಸ್ ಆವೃತ್ತಿಯ NS200 ಜೊತೆಗೆ 160 ಸಿಸಿ ಬೈಕ್‌ಗಳೂ ಸಹ ಇದೆ. ಈ ಬೈಕ್‌ಗಳ ಕುರಿತಾಗಿ ಬಗ್ಗೆ ಮಾತನಾಡುವುದಾದರೆ, ಬಜಾಜ್ ಪಲ್ಸರ್ NS160 & NS200 ಬೈಕ್‌ಗಳು ನವೀಕರಣ ಪಡೆದುಕೊಂಡ ಬಳಿಕ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ, ಬೈಕ್‌ಗಳು ಹೊಸ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡಿದೆ.

BAJAJ Pulsar NS 200 TVC Is Out Now, Complete Digital Instrument Cluster and More

2023ರ ಬಜಾಜ್ ಪಲ್ಸರ್ NS160 ಬೈಕಿನ ಎಂಜಿನ್ 17 bhp ಮತ್ತು 14.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಇನ್ನು NS200 ಬೈಕ್ 24.13 ಬಿಹೆಚ್‌ಪಿ ಪವರ್ ಮತ್ತು 18.74 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಬೈಕ್‌ಗಳ ಎಂಜಿನ್ ಔಟ್‌ಪುಟ್‌ಗಳು ಬದಲಾಗದೆ ಉಳಿದಿವೆ.

ಇಷ್ಟು ಮಾತ್ರವಲ್ಲದೇ ಬಜಾಜ್‌, ಸಿಎನ್‌ಜಿ ಮೂಲಕ ಚಲಿಸುವ ಬೈಕ್‌ ಒಂದನ್ನು ಸಹ ನಿರ್ಮಿಸುತ್ತಿದ್ದು, ಇದನ್ನು ಈ ಬಾರಿಯ ಆರ್ಥಿಕ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಮೂಲಕ ಹೆಚ್ಚು ಇಂಧನ ಕ್ಷಮತೆ ಒದಗಿಸುವ ಬೈಕ್‌ ಒಂದನ್ನು ಗ್ರಾಹಕರಿಗೆ ಒದಗಿಸುವತ್ತ ಬಜಾಜ್‌ ಮುಖ ಮಾಡಿದ್ದು, ಈ ಬೈಕ್‌ ಗ್ರಾಹಕರ ನೆಚ್ಚಿನ ಆಯ್ಕೆಯಾಗಲಿದೆ ಎಂದೂ ಸಹ ಆಟೋಮೊಬೈಲ್‌ ಲೋಕ ಭವಿಷ್ಯ ನುಡಿಯುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, February 18, 2024, 16:00 [IST]
English summary
Bajaj pulsar ns 200 tvc is out now complete digital instrument cluster and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+