Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ತಮ್ಮ 'ಎಕ್ಸ್' ಖಾತೆಯಲ್ಲಿ ಮುಂಬೈ - ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಯೋಜನೆ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ನಿರ್ಮಿಸುತ್ತಿರುವ 'ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್' ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಬುಲೆಟ್ ರೈಲು ಗಂಟೆಗೆ 320 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಲು ಸಾಧ್ಯವಾಗುವಂತೆ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ (Ballastless Track) ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ವಿಭಿನ್ನವಾದ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಹಳಿಗೆ ಬೇಕಿರುವ ಸ್ಲ್ಯಾಬ್ ನ್ನು ಗುಜರಾತ್‌ನ ವಿವಿಧೆಡೆಯಲ್ಲಿ ತಯಾರಿಸಲಾಗುತ್ತಿದೆ. 295.5 ಕಿ.ಮೀ ಹಳಿ ಅಡಿಪಾಯದ ಸೀಲಿಂಗ್‌ ಕಾಮಗಾರಿಯೂ ಮುಕ್ತಾಯಗೊಂಡಿದ್ದು, 153 ಕಿಲೋಮೀಟರ್ ವಯಡಕ್ಟ್ (ಸೇತುವೆ) ನಿರ್ಮಾಣವು ಪೂರ್ಣಗೊಂಡಿದೆ.

Ballastless Track Use For Bullet Train First Time In India Video

ಈ ಹಿಂದೆಯೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಬುಲೆಟ್ ರೈಲು ನಿರ್ಮಾಣದ ವಿಡಿಯೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ಯೋಜನೆಯ ಕುರಿತು ಸಂಪೂರ್ಣವಾಗಿ ವಿವರಿಸಲಾಗಿತ್ತು. ಇವೆರೆಡು ನಗರಗಳ ನಡುವೆ 508 ಕಿ.ಮೀ ದೂರವನ್ನು ಗರಿಷ್ಠ ವೇಗದಲ್ಲಿ ಸಂಚರಿಸುವ ಬುಲೆಟ್ ರೈಲು (Bullet Train), ಕೇವಲ 2 ಗಂಟೆಗಳಲ್ಲಿ ಕ್ರಮಿಸಲಿದೆ.

ಮುಂಬೈ ಹಾಗೂ ಅಹಮದಾಬಾದ್ ಮಧ್ಯದ ಹೈಸ್ವೀಡ್ ರೈಲು ಮಾರ್ಗವನ್ನು ಹಲವು ನವೀನ ತಂತ್ರಜ್ಞಾನವನ್ನು ಉಪಯೋಗಿಸಿಯೂ ಸಿದ್ಧಪಡಿಸಲಾಗುತ್ತಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಚಪ್ಪಡಿ ಹಳಿ ವ್ಯವಸ್ಥೆ (Slab Track System)ಯನ್ನು ಬಳಕೆ ಮಾಡಲಾಗಿದ್ದು, ಆರಂಭಿಕ ಭೂಕಂಪ ಪತ್ತೆ ವ್ಯವಸ್ಥೆ (Early Earthquake Detection System)ಯನ್ನು ಕೂಡ ಪರಿಚಯಿಸಲಾಗುತ್ತಿದೆ.

Ballastless Track Use For Bullet Train First Time In India Video

ಬುಲೆಟ್ ರೈಲು ಮಾರ್ಗವು 24 ನದಿ ಸೇತುವೆ (River bridges), 28 ಉಕ್ಕಿನ ಸೇತುವೆ (Steel Bridges), 7 ಪರ್ವತ ಸೇತುವೆ (Mountain tunnels), 7 ಕಿ.ಮೀ ಆಳ ಸಮುದ್ರ ಸುರಂಗ (Long Undersea Tunnels) ಮತ್ತು 12 ರೈಲು ನಿಲ್ದಾಣಗಳನ್ನು ಹೊಂದಿದೆ. ಈ ಮುಂಬೈ ಮತ್ತು ಅಹಮದಾಬಾದ್ ಕಾರಿಡಾರ್ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ನವೆಂಬರ್ 2021ರಲ್ಲಿಯೇ ಪ್ರಾರಂಭಿಸಲಾಗಿತ್ತು. ಸದ್ಯ ಭರದಿಂದ ಕೆಲಸಗಳು ನಡೆಯುತ್ತಿದೆ.

ರೈಲ್ವೆ ಇಲಾಖೆಯು ಬುಲೆಟ್ ರೈಲು ಕಾರ್ಯಾಚರಣೆಯನ್ನು ಶುರು ಮಾಡಿದ ಮೇಲೆ ಪ್ರತಿದಿನ 70 ಟ್ರಿಪ್‌ಗಳೊಂದಿಗೆ 35 ರೈಲುಗಳನ್ನು ಓಡಿಸಲಿದೆ. ಈ ಹೈಸ್ವೀಡ್ ರೈಲುಗಳ ಸಂಖ್ಯೆಯನ್ನು 2050ರ ವೇಳೆಗೆ 105ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ ಎಂದು ವರದಿಯಾಗಿದೆ. ಇವು ಸಂಚಾರವನ್ನು ಆರಂಭಿಸಿದ ಬಳಿಕ, ಪ್ರತಿ ವರ್ಷ ಸುಮಾರು 1.6 ಕೋಟಿ ಜನರು ಪ್ರಯಾಣಿಸುವ ನಿರೀಕ್ಷೆಯಿದೆ.

ಮುಂಬೈ (Mumbai) ಮತ್ತು ಅಹಮದಾಬಾದ್ (Ahmedabad) ಬುಲೆಟ್ ರೈಲು ಕಾರಿಡಾರ್ ಕಾಮಗಾರಿ ಮುಗಿಯುವವರೆಗೂ ರೂ.1.08 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ರೂ.10,000 ಕೋಟಿಯನ್ನು ಭರಿಸುತ್ತಿದ್ದು, ಗುಜರಾತ್ ಹಾಗೂ ಮಹಾರಾಷ್ಟ್ರ ಸರ್ಕಾರಗಳು ತಲಾ ರೂ.5,000 ಕೋಟಿಯನ್ನು ಹಣವನ್ನು ನೀಡುತ್ತಿವೆ. ಉಳಿದ ಹಣವನ್ನು ಜಪಾನ್‌ನಿಂದ ಸಾಲದ ಮೂಲಕ ಶೇಕಡ 0.1% ಬಡ್ಡಿದರದಲ್ಲಿ ಪಡೆಯಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 29, 2024, 13:11 [IST]
English summary
Ballastless track use for bullet train first time in india video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+