ಖಾಲಿ ರಸ್ತೆಯಲ್ಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ, ಹುಚ್ಚು ಸಾಹಸಕ್ಕೆ ಜೀವತೆತ್ತ ಯುವಕರು

ಭಾರತದ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ನಿಷೇಧಿಸಲಾಗಿದ್ದರೂ ಕೆಲವರು ಈ ನಿಯಮವನ್ನು ಪಾಲಿಸುವುದಿಲ್ಲ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತವೆ. ಬೈಕ್‌ನಲ್ಲಿ ವ್ಹೀಲಿಂಗ್ ಮಾಡಲು ಹೋದ ಯುವಕರು ಅಪಘಾತದಲ್ಲಿ ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಖಾಲಿ ರಸ್ತೆಯಲ್ಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ, ಹುಚ್ಚು ಸಾಹಸಕ್ಕೆ ಜೀವತೆತ್ತ ಯುವಕರು

ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯ ಜಕ್ಕೂರು ಏರ್‌ಫೀಲ್ಡ್ ಬಳಿ ಯುವಕರು ಅತಿ ವೇಗದಲ್ಲಿ ಬೈಕಿನಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ವ್ಹೀಲಿಂಗ್ ಮಾಡುತ್ತಾ ತಮ್ಮ ಮುಂದಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಬೈಕಿನಲ್ಲಿದ್ದ ಯುವಕ ಹಾಗೂ ಸ್ಕೂಟರಿನಲ್ಲಿದ್ದ ಯುವಕ ಸಾವನ್ನಪ್ಪಿದ್ದಾರೆ.

ಖಾಲಿ ರಸ್ತೆಯಲ್ಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ, ಹುಚ್ಚು ಸಾಹಸಕ್ಕೆ ಜೀವತೆತ್ತ ಯುವಕರು

ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಮೂವರೂ ಯಲಹಂಕದಿಂದ ಹೆಬ್ಬಾಳದ ಕಡೆಗೆ ಹೋಗುತ್ತಿದ್ದರು. ಯಮಹಾ ಆರ್‌ಎಕ್ಸ್ ಬೈಕ್ ಹಾಗೂ ಡಿಯೋ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಖಾಲಿ ರಸ್ತೆಯಲ್ಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ, ಹುಚ್ಚು ಸಾಹಸಕ್ಕೆ ಜೀವತೆತ್ತ ಯುವಕರು

ಈ ವಿಷಯದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ಈ ಮೂವರು ತಮ್ಮ ವಾಹನಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಬೈಕಿನಲ್ಲಿದ್ದವನು ನಿಯಂತ್ರಣ ಕಳೆದುಕೊಂಡು ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಲಿ ರಸ್ತೆಯಲ್ಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ, ಹುಚ್ಚು ಸಾಹಸಕ್ಕೆ ಜೀವತೆತ್ತ ಯುವಕರು

ಈ ದುರ್ಘಟನೆಯಲ್ಲಿ ಮೃತಪಟ್ಟ ಯುವಕರನ್ನು ಗೋವಿಂದಪುರದ ನಿವಾಸಿ 16 ವರ್ಷದ ಮೊಹಮ್ಮದ್ ಆದಿ ಅಯಾನ್, ನಾಗವಾರದ ನಿವಾಸಿ 17 ವರ್ಷದ ಮೇಜ್ ಅಹ್ಮದ್ ಖಾನ್ ಹಾಗೂ ಹೆಚ್‌ಬಿಆರ್ ಲೇಔಟ್ ನಿವಾಸಿ 22 ವರ್ಷದ ಸೈಯದ್ ರಿವಾಜ್ ಎಂದು ಗುರುತಿಸಲಾಗಿದೆ. ಅಪಘಾತಕ್ಕೀಡಾದ ಯಮಹಾ ಆರ್‌ಎಕ್ಸ್ ಬೈಕ್ ನಂಬರ್ ಪ್ಲೇಟ್ ಹೊಂದಿರಲಿಲ್ಲ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಖಾಲಿ ರಸ್ತೆಯಲ್ಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ, ಹುಚ್ಚು ಸಾಹಸಕ್ಕೆ ಜೀವತೆತ್ತ ಯುವಕರು

ಈ ವಯಸ್ಸಿನ ಯುವಕರು ಹುಮ್ಮಸ್ಸಿನಲ್ಲಿ ಏನು ಬೇಕಾದರೂ ಮಾಡಬಲ್ಲರು. ಅವರ ಪೋಷಕರು ಇದರತ್ತ ಗಮನ ಹರಿಸುವುದು ಒಳ್ಳೆಯದು. ಈ ವಯಸ್ಸಿನ ಮಕ್ಕಳಿಗೆ ಅತಿ ವೇಗದ ಬೈಕ್‌ಗಳನ್ನು ನೀಡಬಾರದು. ಈ ರೀತಿಯ ದುರ್ಘಟನೆಗಳು ನಡೆದಾಗ ಪೋಷಕರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ.

ರಸ್ತೆ ಸುರಕ್ಷತೆ ಕುರಿತು ದೇಶಾದ್ಯಂತ ನಿರಂತರ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಆದರೂ ಯುವಕರು ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ಸಾವನ್ನಪ್ಪುತ್ತಿದ್ದಾರೆ. ಈ ರೀತಿಯ ಘಟನೆಗಳು ಅಮಾಯಕರ ಜೀವವನ್ನು ಬಲಿ ಪಡೆಯುತ್ತಿವೆ. ಅದರಲ್ಲೂ ಲಾಕ್‌ಡೌನ್ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ರಸ್ತೆಗಳು ಖಾಲಿಯಿದ್ದು, ಯುವಕರು ಜಾಲಿ ರೈಡ್ ಹಾಗೂ ವ್ಹೀಲಿಂಗ್ ಮಾಡಲು ಮುಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಖಾಲಿ ರಸ್ತೆಯಲ್ಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ, ಹುಚ್ಚು ಸಾಹಸಕ್ಕೆ ಜೀವತೆತ್ತ ಯುವಕರು

ಇತ್ತೀಚಿಗಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿರವರು ಭಾರತದಲ್ಲಿ ನಡೆಯುವ ರಸ್ತೆ ಅಪಘಾತಗಳನ್ನು 25%ನಷ್ಟು ಕಡಿಮೆಗೊಳಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು. ಸರ್ಕಾರವು ಎಷ್ಟೇ ಕಾನೂನುಗಳನ್ನು, ನಿಯಮಗಳನ್ನು ಜಾರಿಗೆ ತಂದರೂ ಜನರು ಜಾಗರೂಕತೆಯಿಂದ ವಾಹನಗಳನ್ನು ಚಾಲನೆ ಮಾಡದಿದ್ದರೆ ಈ ರೀತಿಯ ದುರ್ಘಟನೆಗಳು ನಡೆಯುತ್ತಲೇ ಇರುತ್ತವೆ.

Most Read Articles

Kannada
English summary
Bangalore Bike incident video riders die performing motorcycle stunts. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more