ಸ್ಟಾರ್ ನಟರೇ ಮನಸೋತಿದ್ದ ಕಾರು: ಯುವತಿಯ ಬ್ಯೂಟಿಗೆ ತಕ್ಕಂತೆ ಮಾಡಿಫೈ... ಫುಲ್ ಫಿದಾ!

ಪ್ರತಿಯೊಬ್ಬರು ಬಾಲ್ಯದಲ್ಲಿ ಅದೆಷ್ಟೋ ಕನಸುಗಳೊಂದಿಗೆ ಬೆಳೆದು ದೊಡ್ಡವರಾದ ಮೇಲೆ ನನಸಾಗಿಸಿಕೊಳ್ಳುವ ಬಯಕೆಯಲ್ಲಿರುತ್ತಾರೆ. ಕಾರುಗಳು, ವಿಮಾನ ಹಾರಾಟ, ಬಂಗಲೆಗಳನ್ನು ಹೊಂದುವ ಹಲವು ಕನಸುಗಳು ನಿಮ್ಮಲ್ಲಿಯೂ ಹಲವರಿಗಿರುತ್ತದೆ. ಅಂತೆಯೇ ಮುಂದೊಂದು ದಿನ ನಮ್ಮ ಕನಸು ನನಸಾದಾಗ ಆ ಖುಷಿ ಕೋಟಿ ಕೊಟ್ಟರು ಸಿಗುವುದಿಲ್ಲ. ಅಂತಹ ಖುಷಿಯನ್ನೆ ಬೆಂಗಳೂರಿನ ಯುವತಿಯೊಬ್ಬರು ತನ್ನದಾಗಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ತಮ್ಮ ಕನಸಿನ ಕಾರನ್ನು ಖರೀದಿಸಿ ಫುಲ್ ಖುಷಿಯಲ್ಲಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫುಲ್ ವೈರಲ್ ಆಗಿದ್ದಾರೆ.

ರಚನಾ ಮಹಾದಿಮನೆ ಈ ಲೇಖನದ ಮುಖ್ಯ ವ್ಯಕ್ತಿಯಾಗಿದ್ದು, ಇವರು ಎಲ್ಲರಂತೆ ತಮ್ಮ ಬಾಲ್ಯದ ಕನಸಿನ ಕಾರನ್ನು ಹೊಳೆಯುವ, ದುಬಾರಿ ಸ್ಪೋರ್ಟ್ಸ ವಾಹನಗಳನ್ನಲ್ಲದೇ ವಿಂಟೇಜ್ 'ಪದ್ಮಿನಿ ಕ್ಲಾಸಿಕ್' ಕಾರನ್ನು ಹೊಂದುವ ಕನಸನ್ನು ಹೊತ್ತಿದ್ದರು. ಈ ಕಾರು ಅವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಹೇಳಿಕೊಂಡಿದ್ದು, ಕೊನೆಗೂ ಅದನ್ನು ಖರೀದಿಸಿ ಖುಷಿ ಹಂಚಿಕೊಂಡಿದ್ದಾರೆ.

bangalore-girl-bought-his-childhood-dream-car-premier-padmini

ಈ ವಿಂಟೇಜ್ ಪ್ರೀಮಿಯರ್ ಪದ್ಮಿನಿಯನ್ನು ಫಿಯೆಟ್‌ನ ಪರವಾನಗಿ ಅಡಿಯಲ್ಲಿ ಭಾರತದಲ್ಲಿ ತಯಾರಿಸಲಾಯಿತು. ಅದರ ಜನಪ್ರಿಯತೆ 1970 ಮತ್ತು 80 ರ ದಶಕದಲ್ಲಿ ಉತ್ತುಂಗಕ್ಕೇರಿ ಅಂದಿನ ಕಾಲದ ಸ್ಟಾರ್ ನಟರಾದ ರಜನಿಕಾಂತ್, ಮಮ್ಮುಟ್ಟಿ ಮತ್ತು ಅಮೀರ್ ಖಾನ್ ಅವರಂತಹ ಪ್ರಸಿದ್ಧ ಸೆಲೆಬ್ರಿಟಿಗಳು ಈ ಕಾರನ್ನು ಖರೀದಿಸಿದ್ದರು. ಇವರ ಖರೀದಿಯ ಬಳಿಕ ಕಾರಿನ ಜನಪ್ರಿಯತೆ ಮತ್ತೊಂದು ಹಂತಕ್ಕೆ ತಲುಪಿತು.

ಮಾರುತಿ ಸುಜುಕಿಯಿಂದ ಬಿಡುಗಡೆಯಾದ ಹೆಚ್ಚು ಆಧುನಿಕ ಮತ್ತು ಹೆಚ್ಚು ಮೈಲೇಜ್ ಹೊಂದಿರುವ ಕಾರುಗಳು ನಿಧಾನವಾಗಿ ನೆಚ್ಚಿನವುಗಳಾಗುವುದರೊಂದಿಗೆ, ಪದ್ಮಿನಿಯ ಜನಪ್ರಿಯತೆ ನಿಧಾನವಾಗಿ ಕುಸಿಯಿತು. ಆದರೂ ಇಂದಿಗೂ ಪದ್ಮಿನಿ ಕಾರುಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವರು ಮಾಡಿಫೈಗೊಳಿಸಿ ಇಂದಿಗೂ ಬಳಸುತ್ತಿದ್ದಾರೆ. ಇದೀಗ ರಚನಾ ಮಹಾದಿಮನೆ ಕಾರಿಗೆ ಹೊಸ ರೂಪ ನೀಡಿ ಬಳಸಲು ಸಿದ್ದರಾಗಿದ್ದಾರೆ.

bangalore-girl-bought-his-childhood-dream-car-premier-padmini

"ನಾನು ನನ್ನನ್ನು ಕಿವುಚಿಕೊಳ್ಳುತ್ತಿದ್ದೇನೆ. ನನ್ನ ಹುಟ್ಟುಹಬ್ಬಕ್ಕೆ ನಾನು ಕಾರನ್ನು ಖರೀದಿಸಿದ್ದೇನೆ, ಅದು ಕೂಡ ನನ್ನ ಕನಸಿನ ಕಾರು. ನಾನ್ನ ಬಾಲ್ಯದಿಂದಲೂ ಈ ಕಾರಿನ ಬಗ್ಗೆ ಕನಸು ಕಾಣುತ್ತಿದ್ದೆ" ಎಂದು ಮಹಾದಿಮನೆ ಇನ್ಸ್ಟಾಗ್ರಾಂನಲ್ಲಿ ವೀಡಿಯೊ ಹಂಚಿಕೊಂಡು ಈ ಸಾಲುಗಳನ್ನು ಬರೆದುಕೊಂಡಿದ್ದಾರೆ. ಆದರೆ ಕಾರು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ರಚನಾ ಮಹಾದಿಮನೆ ಹೇಳಿದ್ದಾರೆ.

ಆದರೂ ಪಟ್ಟು ಬಿಡದೇ ಕೆಲವು ತಿಂಗಳುಗಳ ಕಾಲ ದುರಸ್ತಿ ಕೆಲಸ ಹಾಗೂ ಹೊಸ ಬಣ್ಣದ ಲೇಪನದ ನಂತರ ತಮ್ಮ ಕನಸಿನ ಕಾರು ನೀಲಿ ಬಣ್ಣದಲ್ಲಿ ಜೀವ ಪಡೆಯಿತು. ಈ ಹಿಂದೆ ನನ್ನ ಸುತ್ತ ಪದ್ಮಿನಿ ಕಾರುಗಳನ್ನು ನೋಡುತ್ತಿದ್ದೆ. ಅವುಗಳನ್ನು ಚಿತ್ರಿಸಿ ಬಣ್ಣ ಹಚ್ಚಿದ್ದೇನೆ, ನನ್ನ ನೆರೆಹೊರೆಯಲ್ಲಿ ಈ ಕಾರನ್ನು ನೋಡಿದಾಗಲೆಲ್ಲಾ ಖರೀದಿಸುವ ಕುತೂಹಲ ಹೆಚ್ಚಾಗುತ್ತಲೇ ಇತ್ತು. ಕೊನೆಗೂ ನಾನು ಇಂದು ಓಡಿಸುತ್ತಿದ್ದೇನೆ ಎಂದಿದ್ದಾರೆ.

ವಿಂಟೇಜ್ ಕಾರನ್ನು ಮತ್ತೆ ಪ್ರೀತಿಸುವುದನ್ನು ನೋಡಿ ತುಂಬಾ ಖುಷಿಯಾಗಿದೆ. ಅಲಂಕಾರಿಕ ಐಷಾರಾಮಿ ಕಾರುಗಳ ಹಿಂದೆ ಓಡುವ ಜಗತ್ತಿನಲ್ಲಿ, ಹಳೆಯ ವಿಂಟೇಜ್ ಕಾರನ್ನು ಹೊಂದಲು ಬಯಸಿದ ನಿಮ್ಮ ಇಷ್ಟಕ್ಕೆ ಗೌರವಿಸುತ್ತೇವೆ. ಇಂತಹ ಹಳೆಯ ಕಾರುಗಳಿಗೆ ಜೀವ ತುಂಬಿ ರಸ್ತೆಗಿಳಿಸಿದ ನಿಮಗೆ ಧನ್ಯವಾದ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 7, 2025, 12:01 [IST]
English summary
Bangalore girl bought his childhood dream car premier padmini
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+