'ಕಿಲಾಡಿ' ಐಡಿಯಾ: ಪುಟ್ಟ ಎಂಜಿ ಕಾಮೆಟ್ ಕಮಲ್, ಕನ್ನಡ ಸಿನಿಮಾ ಪ್ರಚಾರಕ್ಕೆ ಬೆಂಗಳೂರು ತುಂಬೆಲ್ಲ ಓಡಾಟ!
ಭಾರತದಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ಅದ್ದೂರಿಯಾಗಿ 2 ಡೋರ್ ಆಯ್ಕೆಯ ಎಂಜಿ ಕಾಮೆಟ್ ಇವಿ (MG Comet EV) ಬಿಡುಗಡೆಯಾಗಿತ್ತು. ಈ ಮೂಲಕ ದೇಶೀಯ ಗ್ರಾಹಕರಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿತ್ತು. ಇತ್ತೀಚೆಗೆ, ಕನ್ನಡ ಸಿನಿಮಾವೊಂದರ ಪೋಸ್ಟರ್ ಅಂಟಿಸಿಕೊಂಡು ಈ ಕಾರು, ಬೆಂಗಳೂರು ನಗರ ತುಂಬೆಲ್ಲ ಸಂಚರಿಸುತ್ತಿರವುದನ್ನು ಬಹುತೇಕರು ನೋಡಿರಬಹುದು.
ಅಂದಹಾಗೆ, ನಟಿ ಮೇಘನಾ ರಾಜ್ 'ತತ್ಸಮ ತದ್ಭವ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡುತ್ತಿದ್ದು, ಚಿತ್ರದ ಪ್ರಕಾರಕ್ಕಾಗಿ ಎಂಜಿ ಕಾಮೆಟ್ ಇವಿಯನ್ನು ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ವತಃ ಮೇಘನಾ, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 'ಥ್ರಿಲ್ಲರ್ ತನಿಖೆಯ ಕಥಾಹಂದರವಿರುವ ತತ್ಸಮ ತದ್ಭವ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಮ್ಮೊಂದಿಗೆ ಸೂಪರ್ ಇವಿ, ಎಂಜಿ ಕಾಮೆಟ್ ಪಾಲುದಾರಿಗೆ ಹೊಂದಿದೆ' ಎಂದಿದ್ದಾರೆ.

ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತತ್ಸಮ ತದ್ಭವ ಸಿನಿಮಾ ಇದೇ 15ರಂದು ಆದ್ದೂರಿಯಾಗಿ ರಿಲೀಸ್ ಆಗಲಿದೆ. ವಿಶಾಲ್ ಆತ್ರೇಯ ಆಕ್ಷನ್ ಕಟ್ ಹೇಳಿದ್ದು, ಹ್ಯಾಪಿ ನ್ಯೂ ಇಯರ್, ಪ್ರೆಂಚ್ ಬಿರಿಯಾನಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಪನ್ನಗಭರಣ ಬಂಡವಾಳ ಹೂಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತವಿದೆ. ಮೇಘನಾ ಪಾತ್ರದ ಗಂಡನ ನಿಗೂಢ ಕಣ್ಮರೆ ಸುತ್ತ ಈ ಕಥೆ ನಡೆಯುತ್ತದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ದೊರೆಯುವ ಎಂಜಿ ಕಾಮೆಟ್ ಇವಿ, ರೂ.7.98 ಲಕ್ಷದಿಂದ ರೂ.9.98 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಹೊಂದಿದೆ. ಪೇಸ್, ಪ್ಲೇ ಹಾಗೂ ಪ್ಲಶ್ ಎಂಬ ರೂಪಾಂತರಗಳ ಸಿಗುತ್ತದೆ. 4 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, 2 ಡೋರ್ ಮಾತ್ರ ಒಳಗೊಂಡಿದೆ. 2 ಡ್ಯೂಯಲ್ ಟೋನ್ ಹಾಗೂ 3 ಮೊನೊಟೊನ್ ಬಣ್ಣಗಳಲ್ಲಿ ಲಭ್ಯವಿದೆ.

ಈ ಕಾರು, 17.3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 42 PS ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಪಡೆದಿದೆ.
ಎಂಜಿ ಕಾಮೆಟ್ ಇವಿ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ. ಮನೆಯ ವಿದ್ಯುತ್ ಬಳಕೆಯ 3.3 kW ಚಾರ್ಜರ್ ನೊಂದಿಗೆ ಈ ಕಾರಿನ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗಲು ಏನಿಲ್ಲ ಅಂದರೂ ಏಳು ಗಂಟೆ ಹಿಡಿಯಲಿದೆ. ಇದು, ಪುಟ್ಟ ಗ್ರಾತ್ರದ ಕಾರಾಗಿರುವುದರಿಂದ ನಗರ ಸಂಚಾರಕ್ಕೆ ಹೆಚ್ಚು ಸೂಕ್ತವಾಗಿದ್ದು, ಪಾರ್ಕಿಂಗ್ ಮಾಡಲು ಹೆಚ್ಚು ಸ್ಥಳಾವಕಾಶ ಅಗತ್ಯವಿಲ್ಲ.
ಈ ಕಾರು, ಗ್ರಾಹಕರನ್ನು ಆಕರ್ಷಿಸುವ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ಪ್ರಮುಖವಾಗಿ ಎಲ್ಇಡಿ ಹೆಡ್‌ಲೈಟ್ಸ್, ಟೈಲ್‌ಲೈಟ್ಸ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 55ಕ್ಕೂ ಹೆಚ್ಚು ಕನೆಕ್ಟ್ದ್ ಕಾರ್ ಫೀಚರ್ಸ್, ಕೀ ಲೆಸ್ ಎಂಟ್ರಿ, ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ 10.25 - ಇಂಚಿನ ಡಿಜಿಟಲ್ ಡಿಸ್ಪ್ಲೇಯನ್ನು ಒಳಗೊಂಡಿದೆ.
ಕಾಮೆಟ್ ಇವಿ ಪಡೆದಿರುವ ಸುರಕ್ಷಿತ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಕಾರು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ISOFIX ಚೈಲ್ಡ್ ಸೀಟ್ ಆಂಕರ್ಸ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಮತ್ತು ರೇರ್ ಪಾರ್ಕಿಂಗ್ ಸೇನಾರ್ಸ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಎಂಜಿ ಕಾಮೆಟ್ ಇವಿಗೆ ಟಾಟಾ ಟಿಯಾಗೊ ಇವಿ, ಸಿಟ್ರಸ್ ಇಸಿ3 ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications