Bangalore Pune Expressway: ಬೆಂಗಳೂರು to ಪುಣೆಗೆ ಜಸ್ಟ್ 7 ಗಂಟೆ! ಬಹುಕೋಟಿ ವೆಚ್ಚದಲ್ಲಿ ಹೊಸ ಎಕ್ಸ್‌ಪ್ರೆಸ್‌ವೇ

ಬೆಂಗಳೂರು ಪುಣೆ ನಡುವೆ ಹೊಸ ಎಕ್ಸ್‌ಪ್ರೆಸ್‌ವೇ (Bangalore Pune Expressway) ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭರದ ಸಿದ್ಧತೆಯನ್ನು ನಡೆಸುತ್ತಿದೆ. ಅದಕ್ಕಾಗಿ, ಪರಿಸರ ಹಾಗೂ ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಗೆ ಮನವಿ ಸಲ್ಲಿಸಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಎರಡು ರಾಜ್ಯಗಳ ಪ್ರಮುಖ ನಗರಗಳಾದ ಬೆಂಗಳೂರು ಪುಣೆ ನಡುವೆ ಸಂಪರ್ಕ ಕಲ್ಪಿಸುವ ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿಯನ್ನು ಮಾಡಲು 383 ಎಕರೆ ಅರಣ್ಯ ಭೂಮಿ ಹಾಗೂ 20,000 ಜಮೀನು (green fields) ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ. ಇದರಲ್ಲಿ ಕರ್ನಾಟಕದ 12,355 ಎಕರೆ ಹಾಗೂ ಮಹಾರಾಷ್ಟ್ರದ 7,166 ಎಕರೆಯಷ್ಟು ಜಮೀನು ಸೇರಿದೆ.

Bangalore Pune Expressway: ಬೆಂಗಳೂರು to ಪುಣೆಗೆ ಜಸ್ಟ್ 7 ಗಂಟೆ! ಬಹುಕೋಟಿ ವೆಚ್ಚದಲ್ಲಿ ಹೊಸ ಎಕ್ಸ್‌ಪ್ರೆಸ್‌ವೇ

ಕರ್ನಾಟಕದ 9 ಜಿಲ್ಲೆಗಳು (ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ) ಮತ್ತು ಮಹಾರಾಷ್ಟ್ರದ 3 ಜಿಲ್ಲೆಯಲ್ಲಿ (ಪುಣೆ, ಸತಾರ ಸಾಂಗ್ಲಿ) ಈ ಹೆದ್ದಾರಿ ಹಾದುಹೋಗಲಿದೆ. 719.26 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಇದಾಗಿರಲಿದ್ದು, ದಾಬಸ್ ಪೇಟೆ - ದೊಡ್ಡಬಳ್ಳಾಪುರ ನಡುವೆಯಿರುವ ಹುಲಿಕುಂಟೆ ಸಮೀಪ ಆರಂಭವಾಗಿ, ಮಹಾರಾಷ್ಟ್ರದ ಶಿವರೆ ಬಳಿ ಕೊನೆಗೊಳ್ಳಲಿದೆ.

ಬೆಂಗಳೂರು ಪುಣೆ ಎಕ್ಸ್‌ಪ್ರೆಸ್‌ವೇಯನ್ನು 6 ಪಥದಲ್ಲಿ ಅಭಿವೃದ್ಧಿಪಡಿಸಲು ಹೆದ್ದಾರಿ ಪ್ರಾಧಿಕಾರ ತೀರ್ಮಾನ ಮಾಡಿದೆ. ಆದರೆ, 8 ಪಥದವರೆಗೆ ಮೇಲ್ದರ್ಜೆರಿಸಲು ಹೆಚ್ಚುವರಿ ಸ್ಥಳಾವಕಾಶವಿದೆ. ಈ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸುಮಾರು 25,000 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಶೇಕಡ 60% ಮರಗಳು ಕರ್ನಾಟಕದಲ್ಲಿದ್ದು, ಯೋಜನೆಯ ಪರಿಸರ ಪ್ರಭಾವ ಮೌಲ್ಯಮಾಪನ (Environment Impact Assessment) ಇನ್ನೂ ಅಂತಿಮಗೊಂಡಿಲ್ಲ.

Bangalore Pune Expressway: ಬೆಂಗಳೂರು to ಪುಣೆಗೆ ಜಸ್ಟ್ 7 ಗಂಟೆ! ಬಹುಕೋಟಿ ವೆಚ್ಚದಲ್ಲಿ ಹೊಸ ಎಕ್ಸ್‌ಪ್ರೆಸ್‌ವೇ

ಈ ಹೆದ್ದಾರಿಯು ಯಾವುದೇ ಸಂರಕ್ಷಿತ ಅರಣ್ಯ ಹಾದುಹೋಗುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಆದರೆ, ಮಹಾರಾಷ್ಟ್ರದ ಕೊಯ್ನಾ ಅಭಯಾರಣ್ಯದಿಂದ ಹೊಸದಾಗಿ ನಿರ್ಮಿಸುವ ಎಕ್ಸ್‌ಪ್ರೆಸ್‌ವೇಯು 12 ಕಿಲೋಮೀಟರ್ ದೂರದಲ್ಲಿರುತ್ತದೆ. ರಸ್ತೆಯು ಕರ್ನಾಟಕದ 444 ಜಲ ಮೂಲಗಳು (19 ನದಿ, 53 ಹಳ್ಳಗಳು) ಹಾಗೂ ಮಹಾರಾಷ್ಟ್ರದ 126 ಜಲ ಮೂಲಗಳು (9 ನದಿ ಹಾಗೂ 36 ಹಳ್ಳಗಳು) ಹಾದು ಹೋಗಬೇಕಾಗಿದೆ.

ಅದಕ್ಕೆ ಹಾನಿಯಾಗದಂತೆ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತೀರ್ಮಾನ ಮಾಡಿದ್ದು, ಪರಿಸರ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ಮನವಿ ಸಲ್ಲಿಸಿದೆ. ಅಲ್ಲಿ ಒಪ್ಪಿಗೆ ದೊರೆತ ನಂತರ ಬೆಂಗಳೂರು ಪುಣೆ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಆರಂಭವಾಗಲಿದೆ. ಇದು ಬಹುಕೋಟಿಯ ಕಾಮಗಾರಿಯಾಗಿದ್ದು, ರೂ.55,072.54 ಕೋಟಿ ವೆಚ್ಚವಾಗಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂದಾಜಿಸಿದ್ದಾರೆ.

ಬೆಂಗಳೂರು ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಯಾಗಲಿದ್ದು, ಎರಡು ನಗರಗಳ ನಡುವೆ ಹೀಗಿರುವ ಅಂತರ 95 ಕಿಲೋಮೀಟರ್ ಕಡಿಮೆಯಾಗಲಿದೆ. ಜೊತೆಗೆ ಪ್ರಯಾಣದ ಅವಧಿಯು ಅರ್ಧಕ್ಕಿಂತ ಜಾಸ್ತಿ ಇಳಿಕೆಯಾಗಲಿದ್ದು, ಸದ್ಯ, ಬೆಂಳೂರಿನಿಂದ ಪುಣೆ ತಲುಪಲು 15 ಗಂಟೆ ಹಿಡಿಯುತ್ತದೆ. ಅದು, ಈ ಹೆದ್ದಾರಿ ನಿರ್ಮಾಣವಾದ ಮೇಲೆ 7 ಗಂಟೆಗೆ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

ಈ ಎಕ್ಸ್‌ಪ್ರೆಸ್‌ವೇಯನ್ನು ಪುಣೆ - ಮುಂಬೈ ಎಕ್ಸ್‌ಪ್ರೆಸ್‌ವೇನೊಂದಿಗೆ ಸಂಪರ್ಕ ಕಲ್ಪಿಸಲು ಹೆದ್ದಾರಿ ಪ್ರಾಧಿಕಾರ ಯೋಜಿಸಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, 2028ರಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಮುಂದಿನ ಎರಡು - ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ವಾಹನಗಳು ಚಲಿಸಲು ಸಾಧ್ಯವಾಗುವಂತೆ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, July 25, 2023, 18:31 [IST]
English summary
Bangalore pune expressway plans travel time details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+