ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಸಾಮಾಜಿಕ ಜಾಲತಾಣಗಳು ಇಡೀ ವಿಶ್ವವನ್ನೇ ಒಂದು ಚಿಕ್ಕ ಹಳ್ಳಿಯನ್ನಾಗಿ ಮಾಡಿವೆ. ಕುಳಿತ ಜಾಗದಿಂದ ವಿಶ್ವದ ಮೂಲೆ ಮೂಲೆಯಲ್ಲಿರುವ ಜನರನ್ನು ಕ್ಷಣ ಮಾತ್ರದಲ್ಲಿ ತಲುಪುವಂತೆ ಮಾಡಿವೆ. ಅದರಲ್ಲಿ ಫೇಸ್‍‍ಬುಕ್, ಟ್ವಿಟರ್ ಸೇರಿದಂತೆ ಹಲವು ಜಾಲತಾಣಗಳು ಅಗ್ರ ಸ್ಥಾನದಲ್ಲಿವೆ.

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಈ ಮೊದಲು ಅಧಿಕಾರಿದಲ್ಲಿರುವವರನ್ನು ಮಾತನಾಡಿಸಲು, ಅವರಿಗೆ ನಮ್ಮ ದೂರು ಅಹವಾಲುಗಳನ್ನು ಸಲ್ಲಿಸಲು ಖುದ್ದಾಗಿ ಭೇಟಿಯಾಗ ಬೇಕಿತ್ತು. ಗಂಟೆಗಟ್ಟಲೇ, ಕೆಲವೊಮ್ಮೆ ದಿನಗಟ್ಟಲೇ ಕಾಯಬೇಕಿತ್ತು. ಆದರೆ ಟ್ವಿಟರ್‍‍ನಂತಹ ಜಾಲತಾಣಗಳಿಂದ ಕ್ಷಣಾರ್ಧದಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸಬಹುದು.

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಈ ಹಿಂದೆ ದಿವಂಗತ ಸುಷ್ಮಾ ಸ್ವರಾಜ್‍‍ರವರು ತಮ್ಮ ಟ್ವಿಟರ್ ಖಾತೆಗೆ ಬರುತ್ತಿದ್ದ ದೂರುಗಳಿಗೆ ಸ್ಪಂದಿಸಿ ಅವುಗಳಿಗೆ ಪರಿಹಾರ ಸಿಗುವಂತೆ ನೋಡಿಕೊಳ್ಳುತ್ತಿದ್ದರು. ಈ ಹಿಂದಿನ ರೈಲ್ವೆ ಖಾತೆ ಸಚಿವರು ಸಹ ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತೆ ಟ್ವಿಟರ್‍‍ನಲ್ಲಿ ಬಂದಂತಹ ದೂರುಗಳಿಗೆ ಸ್ಪಂದಿಸಿ ಅವುಗಳನ್ನು ಬಗೆಹರಿಸಿದ್ದರು.

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಕೇಂದ್ರ ಸರ್ಕಾರದಿಂದ, ಹಲವು ರಾಜ್ಯ ಸರ್ಕಾರಗಳವರೆಗೆ ವಿವಿಧ ಇಲಾಖೆಗಳ ಸಚಿವರು ಹಾಗೂ ಮುಖ್ಯಸ್ಥರು ಟ್ವಿಟರ್ ಖಾತೆಗಳನ್ನು ಹೊಂದಿ, ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಬರುವ ದೂರುಗಳಿಗೆ ಸ್ಪಂದಿಸಿ, ಅವುಗಳಿಗೆ ಪರಿಹಾರ ನೀಡಿ, ಜನರಿಗೆ ಹತ್ತಿರವಾಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಇನ್ನು ಕರ್ನಾಟಕದಲ್ಲಿಯೂ ಸಹ ಹಲವಾರು ಇಲಾಖೆಗಳು ಟ್ವಿಟರ್ ಖಾತೆಯನ್ನು ಹೊಂದಿವೆ. ತಮ್ಮ ಇಲಾಖೆಗಳ ವಿವಿಧ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತವೆ. ಈ ಮೂಲಕ ಜನಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿವೆ.

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ನಮ್ಮ ರಾಜ್ಯದ ಪೊಲೀಸ್ ಇಲಾಖೆಯು ಸಹ ಜನರಿಗೆ ಹತ್ತಿರವಾಗುವ ಉದ್ದೇಶದಿಂದ ಟ್ವಿಟರ್ ಖಾತೆಯನ್ನು ತೆರೆದಿದೆ. ಇದರಲ್ಲಿ ಪ್ರಮುಖವಾಗಿರುವುದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಟ್ವಿಟರ್ ಖಾತೆ. ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಅದರ ಬಗ್ಗೆ ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತರಬಹುದು.

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಪೊಲೀಸರೂ ಸಹ ಜನರಿಗೆ ಸರಗಳ್ಳರ ಬಗ್ಗೆ, ಅಪರಾಧವನ್ನು ತಡೆಗಟ್ಟುವ ಬಗ್ಗೆ, ಅಪರಾಧ ಸಪ್ತಾಹದ ಬಗ್ಗೆ, ಹೊಸ ನಿಯಮಗಳ ಬಗ್ಗೆ ಜನರಿಗೆ ಅಪ್‍‍ಡೇಟ್ ನೀಡುತ್ತಿರುತ್ತಾರೆ. ಪೊಲೀಸ್ ಆಯುಕ್ತರ ಟ್ವಿಟರ್ ಖಾತೆಯ ಜೊತೆಗೆ ಆಯಾ ವಿಭಾಗದ ಡಿ‍‍ಸಿಪಿಗಳು ಹಾಗೂ ಎಸಿ‍ಪಿಗಳೂ ಸಹ ಟ್ವಿಟರ್ ಖಾತೆಯನ್ನು ಹೊಂದಿದ್ದು, ಸಂಬಂಧಪಟ್ಟ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತಾರೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಸಾಮಾಜಿಕ ಜಾಲತಾಣಗಳು ಹೆಚ್ಚಿದಂತೆಲ್ಲಾ ಅವುಗಳನ್ನು ಹ್ಯಾಕ್ ಮಾಡುವ ವಿಕೃತ ಮನಸ್ಸುಗಳು ಸಹ ಹೆಚ್ಚುತ್ತಿವೆ. ಜನರನ್ನು ತಲುಪುವ ಉದ್ದೇಶದಿಂದ ಪೊಲೀಸರು ಟ್ವಿಟರ್ ಖಾತೆಗಳನ್ನು ತೆರೆದರೆ, ಈಗ ಅವುಗಳನ್ನೇ ಹ್ಯಾಕ್ ಮಾಡುವ ಕೃತ್ಯಕ್ಕೆ ಕಿಡಿಗೇಡಿಗಳು ಕೈ ಹಾಕಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಹೌದು, ಬೆಂಗಳೂರಿನ ಜಯನಗರದ ಸಂಚಾರಿ ಟ್ರಾಫಿಕ್ ಟ್ವಿಟರ್ ಖಾತೆ ಹಾಗೂ ಆಗ್ನೇಯ ವಿಭಾಗದ ಸಂಚಾರಿ ವಿಭಾಗದ ಎಸಿಪಿರವರ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಈ ಖಾತೆಗಳನ್ನು ಹ್ಯಾಕ್ ಮಾಡಿ ಅಸಂಬದ್ದ ಕಾಮೆಂಟ್ ಹಾಗೂ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಕಿಡಿಗೇಡಿಗಳು, ಆಗ್ನೇಯ ಸಂಚಾರಿ ವಿಭಾಗದ ಎಸಿಪಿರವರ ಟ್ವಿಟರ್ ಖಾತೆಯಲ್ಲಿ ಮೇಕ್ ಮೈ ಟ್ರಿಪ್‍‍ಗೆ ಸಂಬಂಧಪಟ್ಟ ಪೋಸ್ಟ್ ಗಳನ್ನು ಮಾಡಿದ್ದಾರೆ. ಇನ್ನು ಜಯನಗರ ಸಂಚಾರಿ ವಿಭಾಗದ ಪೊಲೀಸರ ಟ್ವಿಟರ್ ಖಾತೆಯಲ್ಲಿ ಫೋನ್ ಪೇಗೆ ಸಂಬಂಧಪಟ್ಟ ಪೋಸ್ಟ್ ಗಳನ್ನು ಮಾಡಿದ್ದಾರೆ.

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಇನ್ನು ಹ್ಯಾಕ್ ಮಾಡಿದವರು ಯಾರು, ಯಾವ ಕಾರಣಕ್ಕಾಗಿ ಈ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಜಯನಗರ ಪೊಲೀಸ್ ಇನ್ಸ್ ಪೆಕ್ಟರ್‍‍ರವರು ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಟ್ರಾಫಿಕ್ ಪೊಲೀಸರನ್ನೂ ಬಿಡಲಿಲ್ಲ ಹ್ಯಾಕ್ ಭೂತ..!

ಹ್ಯಾಕರ್‍‍ಗಳ ಹಾವಳಿಯಿಂದಾಗಿ ಸಾಮಾಜಿಕ ಜಾಲತಾಣಗಳ ಖಾತೆದಾರರು ನಲುಗುವಂತಾಗಿದೆ. ಕೆಲವೊಮ್ಮೆ ಕಿಡಿಗೇಡಿಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿ ದುರ್ಬಳಕೆ ಮಾಡುತ್ತಿದ್ದಾರೆ. ಆದ ಕಾರಣ ಸೈಬರ್ ಸೆಂಟರ್‍‍ಗಳಲ್ಲಿ ಟ್ವಿಟರ್ ಖಾತೆಯನ್ನು ಬಳಸುವವರು ಜಾಗರೂಕತೆ ವಹಿಸುವುದು ಒಳಿತು. ಆಗಾಗ ಪಾಸ್‍‍ವರ್ಡ್‍‍ಗಳನ್ನು ಬದಲಿಸುವುದು ಇನ್ನೂ ಉತ್ತಮ.

Article Published On: Saturday, September 28, 2019, 12:00 [IST]
English summary
Bangalore traffic police twitter account hacked details - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+