ಕೊನೆಗೂ ಭಾರೀ ದಂಡಕ್ಕೆ ಹೆದರಿದ ಬೆಂಗಳೂರಿನ ವಾಹನ ಸವಾರರು
ಭಾರತದಲ್ಲಿ ಕೋಟ್ಯಂತರ ವಾಹನಗಳಿದ್ದು, ರಸ್ತೆ ಅಪಘಾತಗಳು ಸಾಮಾನ್ಯವಾಗಿವೆ. ಜನರು ಸಂಚಾರಿ ನಿಯಮಗಳನ್ನು ಪಾಲಿಸದೇ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಭಾರೀ ಪ್ರಮಾಣದ ದಂಡವನ್ನು ವಿಧಿಸಿದರೆ ವಾಹನ ಸವಾರರು ದಂಡಕ್ಕೆ ಹೆದರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಪ್ರಮಾಣವು ಕಡಿಮೆಯಾಗಲಿವೆ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿತು.

ಸಂಸತ್ತಿನಲ್ಲಿ ಅಂಗೀಕಾರವಾದ ಬಳಿಕ ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಜಾರಿಗೊಳಿಸಲಾಯಿತು. ಹೊಸ ಸಂಚಾರಿ ನಿಯಮಗಳು ಜಾರಿಯಾದ ನಂತರ ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.

ವರದಿಗಳ ಪ್ರಕಾರ ಸೆಪ್ಟೆಂಬರ್‍ನಲ್ಲಿ ಈ ಸಂಖ್ಯೆಯು 2.5 ಲಕ್ಷಗಳಷ್ಟು ಇಳಿಕೆಯಾಗಿದೆ. ಸಂಚಾರಿ ನಿಯಮಗಳ ಉಲ್ಲಂಘನೆಯು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೊಸ ಸಂಚಾರಿ ನಿಯಮಗಳ ಅನ್ವಯ ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರ ಪ್ರಕಾರ, ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣವು 30%ನಷ್ಟು ಕಡಿಮೆಯಾಗಿದೆ. ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಬಿ ಆರ್ ರವಿಕಾಂತೇಗೌಡರವರ ಪ್ರಕಾರ ಹೊಸ ಮೋಟಾರು ವಾಹನ ಕಾಯ್ದೆಯು ಸಕಾರಾತ್ಮಕ ಪರಿಣಾಮ ಬೀರಿದೆ.

ಈ ಕುರಿತು ಮಾತನಾಡಿದ ಅವರು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಲಿನಲ್ಲಿ 2.5 ಲಕ್ಷ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆ. ಇದೇ ವೇಳೆ, ಸಂಗ್ರಹಿಸಲಾದ ದಂಡದ ಮೊತ್ತವು ಏರಿಕೆಯಾಗಿದೆ. ದಂಡದ ಮೊತ್ತವನ್ನು ದುಬಾರಿ ಪ್ರಮಾಣದಲ್ಲಿ ಏರಿಸಿರುವುದರಿಂದ ಇದು ಸಾಧ್ಯವಾಗಿದೆ.

ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಧರಿಸದಿರುವುದು, ವಾಹನ ಚಲಾಯಿಸುತ್ತಾ ಮೊಬೈಲ್‍ನಲ್ಲಿ ಮಾತನಾಡುವುದು ಸೇರಿದಂತೆ ಹಲವಾರು ಸಂಚಾರಿ ನಿಯಮಗಳ ಉಲ್ಲಂಘನೆಯು ಗಣನೀಯವಾಗಿ ಕಡಿಮೆಯಾಗಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸಿಗ್ನಲ್ ಜಂಪ್ ಪ್ರಕರಣಗಳೂ ಸಹ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿವೆ ಎಂದು ಅವರು ಹೇಳಿದರು. ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 8.5 ಲಕ್ಷ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗಿತ್ತು.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಸೆಪ್ಟೆಂಬರ್‍ನಲ್ಲಿ ಈ ಸಂಖ್ಯೆಯು 6 ಲಕ್ಷಕ್ಕೆ ಸೀಮಿತವಾಗಿದೆ. ಇದೇ ವೇಳೆ ಆಗಸ್ಟ್ ನಲ್ಲಿ ರೂ.8.8 ಕೋಟಿ ಮೊತ್ತವನ್ನು ದಂಡವನ್ನಾಗಿ ಸಂಗ್ರಹಿಸಲಾಗಿತ್ತು. ಈ ಪ್ರಮಾಣವು ಸೆಪ್ಟೆಂಬರ್‍ನಲ್ಲಿ 21%ನಷ್ಟು ಹೆಚ್ಚಾಗಿ ರೂ.10.7 ಕೋಟಿ ದಂಡ ಸಂಗ್ರಹಿಸಲಾಗಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೇರೆ ರಾಜ್ಯಗಳಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದ್ದರೆ, ಕರ್ನಾಟಕದಲ್ಲಿ ಸೆಪ್ಟೆಂಬರ್ 3ರಿಂದ ಜಾರಿಗೆ ತರಲಾಯಿತು. ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾದ ಕಾರಣಕ್ಕೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.

ಜನರ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರವು ಡ್ರಿಂಕ್ ಅಂಡ್ ಡ್ರೈವ್ ಹೊರತು ಪಡಿಸಿ ಉಳಿದ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ವಿಧಿಸಲಾಗುವ ದಂಡದ ಮೊತ್ತವನ್ನು 50%ನಷ್ಟು ಕಡಿಮೆಗೊಳಿಸಿತು. ಅದರಂತೆ ಹೊಸ ದಂಡದ ನಿಯಮವನ್ನು ಸೆಪ್ಟೆಂಬರ್ 19ರಿಂದ ಜಾರಿಗೆ ತರಲಾಯಿತು.

ಹೊಸ ನಿಯಮದಂತೆ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡಿದರೆ, ರೂ.500 ದಂಡ ವಿಧಿಸಲಾಗುವುದು. ಕೇಂದ್ರ ಸರ್ಕಾರದ ಹೊಸ ಕಾಯ್ದೆಯನ್ವಯ ಈ ಹಿಂದೆ ರೂ.1,000 ದಂಡ ವಿಧಿಸಲಾಗುತ್ತಿತ್ತು.

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಯಾವುದೇ ವಾಹನ ಚಾಲನೆ ಮಾಡಿದರೆ ರೂ.5,000 ದಂಡ ವಿಧಿಸಲಾಗುತ್ತಿತ್ತು. ಕರ್ನಾಟಕ ಸರ್ಕಾರದ ಹೊಸ ಆದೇಶದಂತೆ ಈ ಪ್ರಮಾಣವನ್ನು ದ್ವಿ ಚಕ್ರ ಹಾಗೂ ತ್ರಿ ಚಕ್ರ ವಾಹನಗಳಿಗೆ ರೂ.1,000 ಮತ್ತು ಲಘು ವಾಹನಗಳಿಗೆ ರೂ.2,000ಗಳಿಗೆ ಇಳಿಸಲಾಗಿದೆ.


Click it and Unblock the Notifications








