ಬೆಂಗಳೂರಿನ ಈ ಜಾಗದಲ್ಲಿ ಕಾರ್ ಪಾರ್ಕ್ ಮಾಡಲು 1000 ರೂ. ವಸೂಲಿ: ಎಲ್ಲಿ ಗೊತ್ತಾ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲವೂ ದುಬಾರಿ ಬಿಡಿ, ಆದ್ರೆ ಅದಕ್ಕೂ ಒಂದು ಮಿತಿ ಇರುತ್ತದೆ ಅಲ್ಲವೇ? ಕಾರನ್ನು ಒಂದು ಗಂಟೆ ಪಾರ್ಕ್ ಮಾಡಲು 1000 ರೂ. ವಸೂಲಿ ಮಾಡುತ್ತಿದ್ದಾರೆ. ಇದು ಪ್ರೀಮಿಯಂ ಕಾರ್ ಪಾರ್ಕಿಂಗ್ ಎಂದು ಹೇಳಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇದನ್ನು ನಡೆಸುಕೊಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಕೆಲ ವರ್ಷಗಳಲ್ಲಿ ವಾರಾಂತ್ಯ ಬಂದರೆ ಸಾಕು ಷಾಪಿಂಗ್ ಮಾಲ್‌ಗಳು, ಸಿನಿಮಾ ಹಾಲ್‌ಗಳು, ರೆಸ್ಟಾರೆಂಟ್‌ಗಳು ತುಂಬಿ ತುಳುಕುತ್ತವೆ. ಒಂದು ಕಾಲದಲ್ಲಿ ಫ್ರೀ ಆಗಿ ವಾಹನಗಳನ್ನು ನಿಲ್ಲಿಸುತ್ತಿದ್ದ ಸಾರ್ವಜನಿಕರಿಗೆ ಈಗ ಬೇರೆ ಆಯ್ಕೆಯಿಲ್ಲದೇ ಮಾಲ್, ಸಿನಿಮಾ ಹಾಲ್‌ಗಳಲ್ಲಿ ಬಲವಂತವಾಗಿ ಪಾರ್ಕ್‌ ಮಾಡುವ ಅನಿವಾರ್ಯತೆ ಎದುರಾಗಿದೆ. ಇದನ್ನು ಅವಕಾಶವಾಗಿಸಿಕೊಂಡು ಪಾರ್ಕಿಂಗ್ ಚಾರ್ಜ್ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ.

bangalore-ub-city-premium-car-parking-pictures-have-gone-viral-on-social-media

ಇದು ಸಾಮಾನ್ಯ ಜನರ ಕಥೆಯಾದ್ರೆ, ಐಷಾರಾಮಿ ಜೀವನ ನಡೆಸುವವರು ಪಂಚತಾರಾ ಹೋಟೆಲ್‌ಗಳು, ದುಬಾರಿ ಮಾಲ್‌ಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇವರ ಬಳಿ ಸುಲಿಗೆ ಮಾಡುವುದು ಇನ್ನೂ ಸುಲಭ ಎಂದು ಪ್ರೀಮಿಯಂ ಪಾರ್ಕಿಂಗ್ ಹೆಸರಿನಲ್ಲಿ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ. ವಿಷಯಕ್ಕೆ ಬಂದರೆ ಯುಬಿ ಸಿಟಿಯಲ್ಲಿ ಒಂದು ಗಂಟೆ ಕಾರ್ ಪಾರ್ಕ್ ಮಾಡಲು ಬರೋಬ್ಬರಿ 1000 ರೂ. ವಸೂಲಿ ಮಾಡುತ್ತಿದ್ದಾರೆ.

ಈ ಕುರಿತ ಫೋಟೋಗಳನ್ನು ಹಲವರು X(ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಗಂಟೆ ಪ್ರೀಮಿಯಂ ಪಾರ್ಕಿಂಗ್‌ಗೆ 1000ರೂ. ಎಂದು ಬರೆದಿರುವ ಸಣ್ಣ ಬೋರ್ಡ್ ಅನ್ನು ಚಿತ್ರಗಳಲ್ಲಿ ಕಾಣಬಹುದು. ಮೊದಲು 2015ರಲ್ಲಿ ಈ ಕುರಿತ ಟ್ವಿಟರ್ ಪೋಸ್ಟ್ ವೈರಲ್ ಆಗಿತ್ತು. ಆಗಲೂ 1000ರೂ. ವಸೂಲಿ ಮಾಡುತ್ತಿದ್ದರು, ಇದೀಗ ಮತ್ತೊಮ್ಮೆ ಯುಬಿ ಸಿಟಿಯ ಇತ್ತೀಚಿಗಿನ ಪಾರ್ಕಿಂಗ್ ವಸೂಲಿ ಕುರಿತ 1000ರೂ. ಬೋರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

bangalore-ub-city-premium-car-parking-pictures-have-gone-viral-on-social-media

ಬೆಂಗಳೂರು ನಗರ ದುಬಾರಿ ಸೂಪರ್ ಕಾರುಗಳ ಯೋಗ್ಯ ಜನಸಂಖ್ಯೆಯನ್ನು ಹೊಂದಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತಹ ದುಬಾರಿ ಕಾರು ಮಾಲೀಕರಿಗೆ ಹಣದ ಬಗ್ಗೆ ಚಿಂತಿಸುವ ಬದಲು ತಮ್ಮ ವಾಹನದ ಸುರಕ್ಷತೆಯ ಬಗ್ಗೆ ಯೋಚಿಸುತ್ತಾರೆ. ಆದ್ರೆ ಸಾಮಾನ್ಯ ಜನರು ತಮ್ಮ ಆಲ್ಟೋ, ವ್ಯಾಗನ್ ಆರ್, ಟಿಯಾಗೋದಂತಹ ಸಣ್ಣ ವಾಹನಗಳನ್ನು ಇಲ್ಲಿಗೆ ಕೊಂಡೊಯ್ದರೆ ಬೇರೆ ಆಯ್ಕೆ ಇಲ್ಲದೇ ಬಲವಂತವಾಗಿ ಪಾರ್ಕ್ ಮಾಡಬೇಕಾಗುತ್ತದೆ.

ಸಾಮಾನ್ಯ ಪಾರ್ಕಿಂಗ್ ಕೂಡ ಲಭ್ಯ: ಯುಬಿ ಸಿಟಿಯು ನಾಲ್ಕು ಚಕ್ರದ ವಾಹನಗಳಿಗೆ ಸಾಮಾನ್ಯ ಪಾರ್ಕಿಂಗ್ ಸೌಲಭ್ಯಗಳನ್ನು ಕೂಡ ಹೊಂದಿದೆ. ಮೊದಲ ನಾಲ್ಕು ಗಂಟೆಗೆ 100ರೂ. ಮತ್ತು ನಾಲ್ಕು ಗಂಟೆ ದಾಟಿದ್ರೆ 200ರೂ. ಶುಲ್ಕವಿರುತ್ತದೆ ಎಂದು ಮಾಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಪ್ರೀಮಿಯಂ ಪಾರ್ಕಿಂಗ್ ಶುಲ್ಕಗಳು ಮಾತ್ರ ಒಂದೇ ಆಗಿರುತ್ತದೆ. ಆದ್ರೆ ಸಾಮಾನ್ಯ ಮತ್ತು ಪ್ರೀಮಿಯಂ ಪಾರ್ಕಿಂಗ್ ನಡುವಿನ ಸೇವೆಯಲ್ಲಿನ ವ್ಯತ್ಯಾಸವನ್ನು ಅವರು ತಿಲಿಸಿಲ್ಲ.

X (ಟ್ವಿಟರ್) ಬಳಕೆದಾರರೊಬ್ಬರು, 2012 ರಿಂದ ಇದು ಹೀಗೆಯೇ ಇದೆ. ಐಷಾರಾಮಿ ವಾಹನಗಳನ್ನು ಹೊಂದಿರುವ ಜನರಿಗೆ ಪಾರ್ಕಿಂಗ್ ಶುಲ್ಕಕ್ಕಾಗಿ ಗಂಟೆಗೆ 1,000 ರೂ. ಖರ್ಚು ಮಾಡುವುದು ಅಷ್ಟೇನೂ ದೊಡ್ಡ ವಿಷಯವಲ್ಲ. ಪ್ರೀಮಿಯಂ ಕಾರ್ ಮಾಲೀಕರಿಗೆ ಪಾರ್ಕಿಂಗ್ ಸ್ಲಾಟ್‌ಗಳನ್ನು ಕಾಯ್ದಿರಿಸಲಾಗುತ್ತದೆ. ಆಲ್ಟೊ, 800, ವ್ಯಾಗನ್ಆರ್, ಇತ್ಯಾದಿಗಳ ಮಾಲೀಕರು ಕಾರುಗಳನ್ನು ಮನೆಯಲ್ಲಿ ಬಿಟ್ಟು ಮೆಟ್ರೋ ಅಥವಾ ಬಸ್‌ನಲ್ಲಿ ಬರಬಹುದು ಎಂದು ಅವರು ಕಮೆಂಟ್ ಮಾಡಿದ್ದಾರೆ.

Article Published On: Friday, March 8, 2024, 11:41 [IST]
English summary
Bangalore ub city premium car parking pictures have gone viral on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+