ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ತುಂಬಾ ಬಿಜಿಯಾಗಿರುವ ರಸ್ತೆಯಲ್ಲಿ ಬಸ್ಸೊಂದು ಇದ್ದಕ್ಕಿದ್ದಂತೆ ನಿಲ್ಲುತ್ತದೆ. ಹೀಗೆ ನಿಂತ ಬಸ್ಸಿನೊಳಗೆ ನಾಯಿಯೊಂದು ನಿಧಾನವಾಗಿ ಹತ್ತುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ಈ ಘಟನೆ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆದಿದೆ. ಇತ್ತೀಚೆಗೆ ಬ್ಯಾಂಕಾಕ್‌ನ ಸ್ಥಳೀಯ ರೇಡಿಯೊ ಜನನಿಬಿಡ ರಸ್ತೆಯಲ್ಲಿ ನಾಯಿಯೊಂದು ಅಪಾಯಕಾರಿ ಸ್ಥಿತಿಯಲ್ಲಿ ಅಲೆದಾಡುತ್ತಿರುವ ಬಗ್ಗೆ ವರದಿ ಮಾಡಿತ್ತು. ಈ ನಾಯಿಯನ್ನು ಬ್ಯಾಂಕಾಕ್‌ನ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕರೊಬ್ಬರು ರಕ್ಷಿಸಿದ್ದಾರೆ.

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ದಾರಿ ತಪ್ಪಿ ಜನನಿಬಿಡ ರಸ್ತೆಯಲ್ಲಿ ಅಲೆದಾಡುತ್ತಿದ್ದ ನಾಯಿಯನ್ನು ಅದರ ಮಾಲೀಕರ ಬಳಿ ಸೇರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನಾಯಿಯನ್ನು ಬಸ್‌ನೊಳಗೆ ಹತ್ತಿಸಿಕೊಳ್ಳುವ ಮುನ್ನ ಅವರು ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರ ಒಪ್ಪಿಗೆಯನ್ನು ಪಡೆದಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ಬಸ್ ಚಾಲಕನಿಂದ ರಕ್ಷಿಸಲ್ಪಟ್ಟ ನಾಯಿಯ ಹೆಸರು ಕೂಕಿ ಎಂದು ತಿಳಿದುಬಂದಿದೆ. ಈ ನಾಯಿಯ ಮಾಲೀಕರು ನಿರ್ಮಾಣ ಸ್ಥಳದ ಬಳಿ ತೆರಳಿದ್ದ ವೇಳೆ ಕೂಕಿ ಕಾಣೆಯಾಗಿದೆ. ಮೂರು ದಿನಗಳ ಕಾಲ ನಾಯಿ ನಾಪತ್ತೆಯಾಗಿತ್ತು.

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ಬಸ್ ಚಾಲಕನ ಮಾನವೀಯತೆಯಿಂದಾಗಿ ಕೂಕಿ ಮತ್ತೆ ಮಾಲೀಕರ ಬಳಿಗೆ ತೆರಳಿದೆ. ನಾಯಿಯನ್ನು ಬಸ್ಸಿನೊಳಗೆ ಹತ್ತಿಸಿಕೊಂಡ ನಂತರ ಚಾಲಕ ಅದನ್ನು ಬಸ್ ಡಿಪೋಗೆ ತೆಗೆದುಕೊಂಡು ಹೋಗಿ ಅಲ್ಲಿಯೇ ಇಟ್ಟು ನೀರು, ಆಹಾರವನ್ನು ಒದಗಿಸಿದ್ದ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ನಂತರ ಕೂಕಿಯನ್ನು ಅದರ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಮುದ್ದು ನಾಯಿಯನ್ನು ಹುಡುಕಿ ಕೊಟ್ಟ ಬಸ್ ಚಾಲಕನಿಗೆ ಕೂಕಿಯ ಮಾಲೀಕರು 5 ಸಾವಿರ ಥಾಯ್ ಬಾಹ್ತ್ ನೀಡಿ ಗೌರವಿಸಿದ್ದಾರೆ.

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ಹಣ ಪಡೆಯಲು ನಿರಾಕರಿಸಿದ ಬಸ್ ಚಾಲಕ ಹಣವನ್ನು ಪ್ರಾಣಿ ಕಲ್ಯಾಣ ಇಲಾಖೆಗೆ ನೀಡಬೇಕೆಂದು ಹೇಳಿದ್ದಾನೆ. ಬಸ್ ಚಾಲಕನ ಈ ಕಾರ್ಯವು ಮನುಷ್ಯತ್ವ ಇನ್ನೂ ಸತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ಜನನಿಬಿಡ ರಸ್ತೆಯಲ್ಲಿ ವಾಹನಗಳ ಅಡಿ ಸಿಲುಕಿ ಮೃತಪಡುವ ಸಾಧ್ಯತೆಗಳಿದ್ದ ನಾಯಿಯನ್ನು ರಕ್ಷಿಸಿದ ಬಸ್ ಚಾಲಕ ಹಾಗೂ ಬಸ್ಸಿನ ಆಪರೇಟರ್‌ ಇಬ್ಬರೂ ನಿಜಕ್ಕೂ ಅಭಿನಂದನಾರ್ಹರು.

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ಬ್ಯಾಂಕಾಕ್ ಸಾರಿಗೆ ನಿಗಮದ ಪರವಾಗಿ ಇಬ್ಬರಿಗೂ ಬಹುಮಾನಗಳನ್ನು ಘೋಷಿಸಲಾಗಿದೆ. ನಾಯಿಯನ್ನು ರಕ್ಷಿಸಿದ ಚಾಲಕನ ಹೆಸರು ಡ್ವೇನ್ ಪ್ರಡುಮ್‌ಥಾಂಗ್ ಎಂದು ತಿಳಿದು ಬಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಸ್ ಹತ್ತಿದ ನಂತರ ಕೂಕಿ ಯಾರಿಗೂ ತೊಂದರೆ ನೀಡದಂತೆ ಸದ್ದಿಲ್ಲದೆ ಸೀಟಿನ ಕೆಳಗೆ ಕುಳಿತಿತ್ತು ಎಂದು ಬಸ್‌ನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರು ತಿಳಿಸಿದ್ದಾರೆ. ಕೂಕಿ ಕೆಲವು ದಿನಗಳಿಂದ ಏನನ್ನೂ ತಿನ್ನದ ಕಾರಣ ತೆಳ್ಳಗೆ ಕಾಣುತ್ತಿತ್ತು ಎಂದು ಪ್ರಯಾಣಿಕರು ಹೇಳಿದ್ದಾರೆ.

ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ನಾಯಿಯ ಪಾಲಿಗೆ ಆಪದ್ಬಾಂಧವನಾದ ಬಸ್ ಚಾಲಕ

ಯಾವುದಾದರೂ ನಾಯಿ ಅಡ್ಡ ಬಂದರೆ ಅದರ ಮೇಲೆ ಬಸ್ ಹತ್ತಿಸಿ ವಿಕೃತಿ ಮೆರೆಯುವ ಜನರಿರುವ ಈ ಜಗತ್ತಿನಲ್ಲಿ ನಾಯಿಯನ್ನು ಬಸ್ಸಿನೊಳಗೆ ಹತ್ತಿಸಿಕೊಂಡು, ರಕ್ಷಿಸಿದ ಬಸ್ ಚಾಲಕನ ನಡೆಗೆ ವಿಶ್ವದಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ಚಿತ್ರಕೃಪೆ: ದಿ ನೇಷನ್ ಥೈಲ್ಯಾಂಡ್

Most Read Articles

Kannada
English summary
Bangkok bus driver rescues dog roaming on highway. Read in Kannada.
Story first published: Friday, April 2, 2021, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X