ನಮ್ಮ ರಾಜಕಾರಣಿಗಳಿಗೂ ಒಬಾಮ ಬಸ್ ಕೊಡಿಸಿದ್ರೆ?
ಕೆಲವು ತಿಂಗಳುಗಳ ಹಿಂದೆಯಷ್ಟೇ ಬರಾಕ್ ಒಮಾಮ ಅಮೆರಿಕ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು. ಈ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ತಮ್ಮ ಜನಪ್ರಿಯತೆಯನ್ನು ಮಗದೊಮ್ಮೆ ಸಾರಿದ್ದರು.
ತಮ್ಮ ಕಾರ್ಯವೈಖರಿಯಿಂದಲೇ ಇಡೀ ಜಗತ್ತಿನ ಗಮನ ಸೆಳೆದಿರುವ ಬರಾಕ್ ಒಬಾಮ ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದೆ. ಅಧಿಕೃತ ಕಾರ್ಯಕ್ರಮಗಳಿಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುವ ನಿಟ್ಟಿನಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಐಷಾರಾಮಿ ಬಸ್ಸೊಂದನ್ನು ಏರ್ಪಡಿಸಲಾಗಿದೆ.
ಕಳೆದ ಅಮೆರಿಕ ಅಧ್ಯಕ್ಷಗಾದಿ ಚುನಾವಣೆ ಸಂದರ್ಭದಲ್ಲೂ ಒಬಾಮ ಪ್ರಚಾರಕ್ಕಾಗಿ ಈ ಬಸ್ಸನ್ನು ಬಳಸಿದ್ದರೆಂಬ ಮಾಹಿತಿ ಕೂಡಾ ಇದೆ. ಅಮೆರಿಕದ ವಿಶ್ವ ವಾಣಿಜ್ಯ ಮಂಡಳಿಗೆ ಉಗ್ರರ ದಾಳಿ ನಡೆದ ಬಳಿಕವಂತೂ ಅಮೆರಿಕ ಆಂತರಿಕ ಭದ್ರತೆಗಾಗಿ ಹೆಚ್ಚಿನ ಒತ್ತು ನೀಡುತ್ತಿದೆ.
ಅದೇ ರೀತಿ ಸೂಪರ್ ಬಸ್ಸಿನಲ್ಲೂ ಭದ್ರತೆಗೆ ಹೆಚ್ಚು ಮಹತ್ವ ಕೊಡಲಾಗಿದೆ. ಅಂದ ಹಾಗೆ ಒಬಾಮಾ ಸಂಚರಿಸುವ ಬಸ್ಸಿನ ದರ ಸರಿ ಸುಮಾರು 5 ಕೋಟಿ ರುಪಾಯಿಗಳಾಗಿವೆ. ನಮ್ಮ ರಾಜಕಾರಣಿಗಳಂತೂ ಇದನ್ನು ಊಹಿಸಲು ಅಸಾಧ್ಯ!
ಹಾಗಿದ್ದರೆ ನಮ್ಮ ರಾಜಕಾರಿಣಿಗಳಿಗೂ ಒಬಾಮ ಶೈಲಿಯ ಐಷಾರಾಮಿ ಬಸ್ ಸೌಲಭ್ಯ ಕೊಡಿಸಿದ್ರೆ ಹೆಂಗಿರಬಹುದು? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿರಿ...

ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಬಸ್ ಹೊರತಾಗಿಯೂ ಒಬಾಮ ಬಳಿ ಐಷಾರಾಮಿ ಲಿಮೊಸಿನ್ ಕಾರು ಕೂಡಾ ಇದೆ.

ಅಚಾನಕ್ ಎದುರಾಗುವ ದಾಳಿಯಿಂದಲೂ ಪಾರಾಗಲು ವ್ಯವಸ್ಥೆಯಿದೆ. ಏತನ್ಮಧ್ಯೆ ಬಸ್‌ನಲ್ಲಿ ಆಳವಡಿಸಲಾಗಿರುವ ಅತಿ ವಿಶೇಷ ವೈಶಿಷ್ಟ್ಯಗಳ ಬಗ್ಗೆ ವಿವರ ಬಹಿರಂಗಪಡಿಸಲು ಸಿಕ್ರೇಟ್ ಸರ್ವಿಸ್ ನಿರಾಕರಿಸಿದೆ.

ವಿಶೇಷ ಬುಲೆಟ್ ಪ್ರೂಪ್ ಗ್ಲಾಸ್, ಕೆಲ್ವಾರ್ ರೈನ್‌ಫೋರ್ಸಡ್ ಟಯರ್ ಹೊಂದಿದೆ. ಇನ್ನು ಟಯರ್ ರಿಮ್ ವಿಶೇಷ ರೀತಿಯಲ್ಲಿ ಸಿದ್ಧಪಡಿಸಿದ್ದು, ಒಂದು ವೇಳೆ ಟಯರ್ ತಪ್ಪಿದ್ದರೂ ರಿಮ್ ನೆರವಿನಿಂದ ಬಸ್ ಸುಲಲಿತವಾಗಿ ಚಲಿಸಲಿದೆ.

ಬಸ್‌ನಲ್ಲಿ ಮುಂದುವರಿದ ಫೈರ್ ಸಸ್ಪೆಷನ್ ಸಿಸ್ಟಂ ಹಾಗೂ ಓಕ್ಸಿಜನ್ ಟ್ಯಾಂಕ್ ಹೊಂದಿದ್ದು, ರಾಸಾಯನಿಕ ದಾಳಿ ಸೇರಿದಂತೆ ಬಾಂಬ್ ದಾಳಿಯಿಂದಲೂ ಪಾರಾಗಲಿದೆ.

ಒಂದು ವೇಳೆ ತುರ್ತಾಗಿ ರಕ್ತದ ಅಗತ್ಯ ಬಿದ್ದರೆ ಬ್ಲಡ್ ಬ್ಯಾಂಕ್ ಜತೆಯಾಗಿಯೇ ಚಲಿಸಲಿದೆ. ಇದು ತುರ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರಲಿದೆ.

ಬಸ್‌ನಲ್ಲಿ ನೈಟ್ ವಿಷನ್ ಕ್ಯಾಮೆರಾ, ಶಾಟ್ ಗನ್ ಹಾಗೂ ರಿಯರ್ ಗ್ಯಾಸ್ ಕ್ಯಾನನ್ಸ್ ರಕ್ಷಣೆಯನ್ನು ಖಾತ್ರಿಪಡಿಸಲಿದೆ. ಹಾಗೆಯೇ ನೆರವಾಗಿ ಸ್ಯಾಟಲೈಟ್ ಫೋನ್‌ಗೆ ಸಂಪರ್ಕ ಕಲ್ಪಿಸಲಾಗಿದೆ.

ಯಾವತ್ತಿನ ವರೆಗೂ ಸಿಕ್ರೇಜ್ ಸರ್ವಿಸ್ ಬಸ್ ತಂತ್ರಜ್ಞಾನ ವಿಷಯವನ್ನು ಗೌಪ್ಯವಾಗಿಡಲಿದೆಯೋ ಅಲ್ಲಿಯ ವರೆಗೂ ಬಸ್‌ನಲ್ಲಿ ಬಳಸಲಾಗಿರುವ ತಂತ್ರಗಾರಿಕೆಯೂ ರಹಸ್ಯವಾಗಿಯೇ ಉಳಿಯಲಿದೆ.

ಸಂವಹನಕ್ಕೆ ಸ್ಯಾಟ್ ಲೈಟ್ ಆಧರಿತ ಸಿಸ್ಟಮ್ ಗಳಿವೆ. ಒಂದು ಲಿವಿಂಗ್ ರೂಮ್, ಒಂದು ವಿಶ್ರಾಂತಿ ಕೊಠಡಿ, ಆಹಾರ ಸೇವಿಸಲು ಕೊಂಚ ಸ್ಥಳಾವಕಾಶವಿದೆ.

ಒಬಾಮ ಬಸ್ ದರ ಸುಮಾರು 1.1 ಮಿಲಿಯನ್ ಅಂದರೆ 5 ಕೋಟಿ ರು. ಅಂದಾಜಿಸಲಾಗಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಸ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಸ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಸ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಸ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಸ್

ಫುಲ್ ಬಾಡಿ ಸ್ಕ್ಯಾನಿಂಗ್
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಸ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಸ್


Click it and Unblock the Notifications








