ಒಂದೊತ್ತು ಊಟಕ್ಕೆ ಜನರ ಪರದಾಟ: ಅಧ್ಯಕ್ಷ ಪರಾರಿ... ಅರಮನೆಗೆ ನುಗ್ಗಿ ದಾಳಿ: ಬೆಚ್ಚಿಬಿದ್ದ ಜನ!
ಕಳೆದ ಹಲವು ವರ್ಷಗಳಿಂದ, ಪಶ್ಚಿಮ ಏಷ್ಯಾದ ಸಿರಿಯನ್ ಪ್ರದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಜನರು ತಮ್ಮ ದೈನಂದಿನ ಆಹಾರಕ್ಕೂ ಪರದಾಡುತ್ತಿದ್ದಾರೆ. ಆರ್ಥಿಕ ಭದ್ರತೆ ಇಲ್ಲದ ಕಾರಣ ಅವರು ಇತರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ನಾಟಕೀಯ ಬೆಳವಣಿಗೆಯಲ್ಲಿ, ಅಸ್ಸಾದ್ ಆಡಳಿತವು ಅನಿರೀಕ್ಷಿತ 11 ದಿನಗಳ ಮುತ್ತಿಗೆಯ ನಂತರ ಹಠಾತ್ ಅಂತ್ಯಕ್ಕೆ ಬಂದಿದೆ. ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಸರ್ಕಾರದ ವಿರುದ್ಧ ಸಾರ್ವಜನಿಕರು ತಿರುಗಿಬಿದ್ದಿದ್ದು, ಸದ್ಯ ಅಲ್ಲಿನ ಬಷರ್ ಅಲ್-ಅಸ್ಸಾದ್ ಸರ್ಕಾರ ಕುಸಿದಿದೆ.
ಬಂಡುಕೋರರು ಆಗಮಿಸುವ ಮೊದಲೇ ಅಧ್ಯಕ್ಷ ರಾಜಧಾನಿ ಡಮಾಸ್ಕಸ್ ನಿಂದ ಸುರಕ್ಷಿತ ಪ್ರದೇಶಕ್ಕೆ ಪರಾರಿಯಾಗಿದ್ದಾರೆ. ಅಧ್ಯಕ್ಷರ ಅರಮನೆ ಪ್ರವೇಶಿಸಿದ ಬಂಡಾಯ ಹೋರಾಟಗಾರರು ಅಲ್ಲಿ ಅವರ ಜೀವನಶೈಲಿ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಅಸ್ಸಾದ್ ಅವರ ಶ್ರೀಮಂತ ಜೀವನ ಮತ್ತು ಸಿರಿಯಾ ನಾಗರಿಕರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ನಡುವಿನ ಅಸಮಾನತೆಯನ್ನು ಇದು ಎತ್ತಿ ತೋರಿಸಿದೆ.

ಮನೆಯ ತುಂಬಾ ಐಷಾರಾಮಿ ವಸ್ತುಗಳು, ದೊಡ್ಡ ಗ್ಯಾರೇಜ್, ಅದರೊಳಗೆ ಸ್ಪೋರ್ಟ್ಸ್ ಕಾರುಗಳಿಂದ ಹಿಡಿದು ಒರಟಾದ ಆಫ್-ರೋಡರ್‌ಗಳವರೆಗೆ ಸೇರಿದಂತೆ ಬೆಚ್ಚಿಬೀಳಿಸುವಂತಹ ಲಕ್ಷುರಿ ಕಾರುಗಳನ್ನು ತೋರಿಸುವ ವಿಡಿಯೋವೊಂದು ಈಗ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ದುಬಾರಿ ಸ್ಪೋರ್ಟ್ಸ್ ಕಾರುಗಳಿಂದ ಹಿಡಿದು ಜಗತ್ತಿನ ನೂರಾರು ಮೌಲ್ಯಯುತ ಕಾರುಗಳಿವೆ. ಸುಮಾರು 100 ಕಾರುಗಳು ಗ್ಯಾರೇಜ್‌ನಲ್ಲಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಗ್ಯಾರೇಜ್ ನಲ್ಲಿ ಕಾರುಗಳು ಒಂದರ ಮೇಲೊಂದು ಸಾಲಾಗಿ ನಿಂತಿದ್ದವು. ಇವುಗಳನ್ನು ಅಸ್ಸಾದ್, ಅವರ ಕುಟುಂಬ ಸದಸ್ಯರು ಮತ್ತು ಆಪ್ತರು ಬಳಸುತ್ತಿದ್ದರು. ಬಂಡುಕೋರ ಪಡೆಗಳು ಡಮಾಸ್ಕಸ್ ಅನ್ನು ವಶಪಡಿಸಿಕೊಂಡಾಗ ಈ ವಿಷಯ ಬೆಳಕಿಗೆ ಬಂದಿದೆ. ಸಿರಿಯಾದಲ್ಲಿ ಅಸ್ಸಾದ್ ಕುಟುಂಬದ ಸುಮಾರು ಐದು ದಶಕಗಳ ಆಡಳಿತವು ಈ ಭಾನುವಾರ ಕೊನೆಗೊಂಡಿದೆ.

ಗೊತ್ತೇ ಇರಲಿಲ್ಲ: ಬಂಡುಕೋರರು ಅರಮನೆಯನ್ನು ಪ್ರವೇಶಿಸಿ ಗ್ಯಾರೇಜ್ ಅನ್ನು ನೋಡುವವರೆಗೂ ಅಸಾದ್ ಅವರ ಜೀವನಶೈಲಿ ಇಷ್ಟು ಐಷಾರಾಮಿಯಾಗಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ಫೆರಾರಿ, ಆಸ್ಟನ್ ಮಾರ್ಟಿನ್, ರೋಲ್ಸ್ ರಾಯ್ಸ್ ಮತ್ತು ಬಿಎಂಡಬ್ಲ್ಯುನಂತಹ ಪ್ರತಿಷ್ಠಿತ ಬ್ರಾಂಡ್‌ಗಳನ್ನು ಒಳಗೊಂಡಿರುವ ವ್ಯಾಪಕ ಶ್ರೇಣಿಯ ವಾಹನಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಸೆರೆಹಿಡಿಯಲ್ಪಟ್ಟಿವೆ.
ಅಸಾದ್ ಜೊತೆಗೆ ಅವರ ಆಪ್ತರ ಬಳಿಯೂ ಕೋಟ್ಯಂತರ ರೂಪಾಯಿ ಮೌಲ್ಯದ ಕಾರುಗಳಿವೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕರು ತೀವ್ರ ಆರ್ಥಿಕ ಸಂಕಷ್ಟಗಳೊಂದಿಗೆ ಪರದಾಡುತ್ತಿದ್ದರೇ ಅಧ್ಯಕ್ಷರು ಮತ್ತು ಅವರ ಸಹವರ್ತಿಗಳು ನೂರಾರು ಕಾರುಗಳೊಂದಿಗೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೋರಾಟಗಾರರು ಹಂಚಿಕೊಂಡ ವೀಡಿಯೊದಲ್ಲಿ ತಿಳಿಸಿದ್ದಾರೆ.
ಇನ್ನು ಲೂಟಿಕೋರರು ಅಸ್ಸಾದ್ ಅವರ ನಿವಾಸವನ್ನು ಲೂಟಿ ಮಾಡಿ, ಡಮಾಸ್ಕಸ್‌ನಲ್ಲಿರುವ ಅಧ್ಯಕ್ಷರ ಅರಮನೆಗೆ ಬೆಂಕಿ ಹಚ್ಚಿದ್ದಾರೆ. ಸಂಪತ್ತಿನ ಈ ವೈಭವೋಪೇತ ಪ್ರದರ್ಶನವು ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರ ಗಮನ ಸೆಳೆದಿದೆ. ಜೊತೆಗೆ ಸಿರಿಯಾದ ಭೀಕರ ಆರ್ಥಿಕ ಬಿಕ್ಕಟ್ಟಿನ ನಡುವೆ ಬಷರ್ ಅಲ್-ಅಸ್ಸಾದ್ ಅವರ ಐಷಾರಾಮಿ ಕಾರು ಸಂಗ್ರಹವು ಟೀಕೆಗೆ ಗುರಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications