ಮನೆಯಲ್ಲಿ ಸ್ನಾನ ಕಾಮನ್, ಬೈಕ್‌ನಲ್ಲಿ ಸ್ನಾನ ಡಿಫರೆಂಟ್...ವಿಡಿಯೋ ವೈರಲ್...ಕೊನೆಗೆ ಸೇರಿದ್ರು ಜೈಲ್

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯುವಜನತೆ ಮಾಡುವ ಕೆಲಸಗಳು ಹಲವರಿಗೆ ವಾಕರಿಕೆ ತರಿಸುತ್ತಿವೆ. ಯುವಕರಿಬ್ಬರು ನಡುರಸ್ತೆಯಲ್ಲಿ ಬೈಕ್‌ನಲ್ಲಿ ಚಲಿಸುತ್ತಾ ಸ್ನಾನ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಯುವಕರು ಅರೆಬೆತ್ತಲೆಯಾಗಿ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವುದನ್ನು ನೀವು ಗಮನಿಸಿದರೆ, ಸವಾರಿ ಮಾಡುವಾಗ ಸ್ನಾನವನ್ನೂ ಮಾಡಬಹುದೇ ಎಂದೆನಿಸುತ್ತದೆ.

ಘಟನೆಯಲ್ಲಿ ಗುರ್ತಿಸಿಕೊಂಡವರು ಅಜ್ಮಲ್ ಮತ್ತು ಬಾದುಷಾ ಎಂದು ತಿಳಿದುಬಂದಿದೆ. ಈ ಇಬ್ಬರು ಯುವಕರಲ್ಲಿ ಒಬ್ಬ ರೈಡ್ ಮಾಡುತ್ತಿದ್ದರೆ ಇನ್ನೊಬ್ಬ ಹಿಂದೆ ಕುಳಿತು ಸ್ನಾನ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಬೈಕ್ ಚಾಲನೆಯಲ್ಲಿರುವಾಗಲೇ ದೇಹಕ್ಕೆ ಸಾಬೂನು ಉಜ್ಜಿಕೊಳ್ಳುತ್ತಿರುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಇದು ಪೊಲೀಸರ ಗಮನಕ್ಕೂ ಬಂದಿದ್ದು, ಪೊಲೀಸರು ಇಬ್ಬರೂ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಯುವಕರು ವಿಭಿನ್ನವಾಗಿ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಆ ವೇಳೆ ಯುವಕರು ಮದ್ಯ ಸೇವಿಸಿದ್ದಾರಾ ಎಂಬುದನ್ನೂ ತಿಳಿದುಕೊಳ್ಳಬೇಕಿದ್ದು ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತಿ ವರ್ಷ ಭಾರತದಲ್ಲಿ ಲೆಕ್ಕವಿಲ್ಲದಷ್ಟು ರಸ್ತೆ ಅಪಘಾತಗಳು ನಡೆಯುತ್ತವೆ, ಇದರಲ್ಲಿ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರೇ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನದಿಂದ ದಿನಕ್ಕೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ. ಇದರ ಭಾಗವಾಗಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವನ್ನೂ ಮಾಡಲಾಗಿದೆ.

ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ನಿರ್ಲಕ್ಷ್ಯ ಕೃತ್ಯಗಳನ್ನು ಮಾಡುವುದು ಅವರಿಗೆ ಮಾತ್ರವಲ್ಲದೆ ಸಹ ಪ್ರಯಾಣಿಕರಿಗೂ ಸಾಕಷ್ಟು ಅಪಾಯವನ್ನು ತರುತ್ತದೆ. ಈ ಹಿಂದೆಯೂ ಇಂತಹದ್ದೇ ಘಟನೆ ಬೆಳಕಿಗೆ ಬಂದಾಗ ಆಗಲೂ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಇದೀಗ ಬೆಳಕಿಗೆ ಬಂದಿರುವ ಈ ಘಟನೆಯಲ್ಲಿ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ರೂ. 5 ಸಾವಿರ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರ ತನಿಖೆಯಲ್ಲಿ ಮಳೆ ಬರುತ್ತಿದ್ದರಿಂದ ಮೋಜಿಗಾಗಿ ಯುವಕರು ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಯುವಕರು ಮೋಜಿಗಾಗಿ ಮಾಡುವ ಕೃತ್ಯಗಳು ಜೀವಪಾಯಕ್ಕೆ ಕುತ್ತು ತರುವುದರಿಂದ ಕೇರಳ ಪೊಲೀಸರು ಸದ್ಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಾಂಕ್ ವಿಡಿಯೋಗಳು ಹೆಚ್ಚಾಗುತ್ತಿವೆ. ಇವು ಕೆಲವು ಸಂದರ್ಭಗಳಲ್ಲಿ ಒಳ್ಳೆಯದಾಗಿ ಕಂಡರೂ ಇನ್ನು ಕೆಲವು ಸಂದರ್ಭಗಳಲ್ಲಿ ಅನೇಕ ಅಪಾಯಗಳನ್ನು ತರುತ್ತವೆ. ಇತ್ತೀಚೆಗೆ ಬೆಳಕಿಗೆ ಬಂದ ಘಟನೆಯೂ ಇದೇ ಅಪಾಯ ತಂದಿದೆ. ಸ್ನಾನವನ್ನು ಸ್ನಾನಗೃಹದಲ್ಲಿ ಅಥವಾ ಈಜುಕೊಳದಲ್ಲಿ ಮಾಡಬೇಕೇ ಹೋರತೂ ರಸ್ತೆಗಳಲ್ಲಿ ಮಾಡಿದರೇ ಪೊಲೀಸರ ಅಥಿತಿಯಾಗುವುದಂತೂ ಖಚಿತ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಬೈಕ್ ನಲ್ಲಿ ಶವರ್ ಹೇಗಿದೆ ಎಂದು ಈ ವಿಡಿಯೋಗೆ ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ. ಇದು ನೋಡುಗರಿಗೆ ಮನರಂಜನೆ ನೀಡಿದರೂ ಮಾಡುವವರು ಮಾತ್ರ ಅನಾಹುತಕ್ಕೆ ಆಹ್ವಾನವನ್ನು ಪಡೆದಂತೆ ಎಂಬುದನ್ನು ಮರೆಯಬಾರದು. ಇಂತಹ ಇನ್ನಷ್ಟು ಆಸಕ್ತಿದಾಯಕ ವಿಷಯಗಳನ್ನು ತಿಳಿಯಲು ಮತ್ತು ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಕಾರು ಮತ್ತು ಬೈಕ್‌ಗಳ ಕುರಿತು ಮಾಹಿತಿ ತಿಳಿದುಕೊಳ್ಳಲು ಕನ್ನಡ ಡ್ರೈವ್‌ಸ್ಪಾರ್ಕ್ ಚಾನಲ್‌ಗೆ ಭೇಟಿ ನೀಡಿ.

Most Read Articles

Kannada
English summary
Bathing at home is common bathing on a bike is different video viral finally went jail
Story first published: Wednesday, November 9, 2022, 13:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X