ಟ್ರಾಫಿಕ್ ಅಡಚಣೆಯಿಂದ ಪಾರಾಗಲು ಸುಲಭ ಉಪಾಯ
ಎಲ್ಲೂ ನೋಡಿದರೆ ವಾಹನ ಜಾಮ್! ದಿನನಿತ್ಯ ಇದೇ ಕಿರಿಕಿರಿಯಿಂದ ನೀವೂ ಬಳಲುತ್ತಿರಬಹುದು. ನಗರ ಪ್ರದೇಶದ ವಾಹನ ದಟ್ಟಣೆಯಲ್ಲಂತೂ ವಾಹನ ಮುಂದಕ್ಕೆ ಚಲಿಸುವುದೇ ಇಲ್ಲ.
ಹೀಗಿರುವಾಗ ಟ್ರಾಫಿಕ್ ಪರಿಸ್ಥಿತಿಯನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿ ಬಿಡುತ್ತದೆ. ಸಂಶೋಧಕರ ಪ್ರಕಾರ ಮೊಸ್ಕೋದಲ್ಲಿ ವಾಸಿಸುವ ಜನರೊಬ್ಬರು ಸರಾಸರಿ ಎಂಟು ದಿನಗಳನ್ನು ಟ್ರಾಫಿಕ್‌ನಲ್ಲೇ ಕಳೆಯುತ್ತಾರಂತೆ!
ಅಷ್ಟಕ್ಕೂ ಟ್ರಾಫಿಕ್ ಜಾಮ್ ನಿಭಾಯಿಸುವುದು. ಇದು ತುಂಬಾ ಸರಳ ಬಿಡಿ. ಇದಕ್ಕಾಗಿ ನೀವು ಕೆಳಗಡೆ ಕೊಟ್ಟಿರುವ ವೀಡಿಯೋವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಕಸ್ಟಮೈಸ್ಡ್ ಜೀಪ್ ವ್ರ್ಯಾಂಗ್ಲರ್‌ನಿಂದ ಟ್ರಾಫಿಕ್ ನಿಭಾಯಿಸುವ ಪ್ರಯತ್ನ ಮಾಡಲಾಗುತ್ತದೆ.
ಆದರೆ ಎಚ್ಚರ, ಯಾವುದೇ ಕಾರಣಕ್ಕೆ ಇಂತಹದೊಂದು ಪ್ರಯತ್ನಕ್ಕೆ ನೀವು ಮುಂದಾಗಬಾರದು! ಯಾಕೆ ಅಂತೀರಾ? ಉತ್ತರಕ್ಕಾಗಿ ವೀಡಿಯೋ ವೀಕ್ಷಿಸಿ.


Click it and Unblock the Notifications








