ಒಂದು ಕೋಟಿ ಕೊಟ್ಟು ಹೊಸ ಮರ್ಸಿಡಿಸ್ ಕಾರನ್ನು ತೆಗೆದುಕೊಂಡ 42ರ ಬ್ಯೂಟಿಫುಲ್ ನಟಿ!

ಬಾಲಿವುಡ್ ನಟಿ ಮೋನಾ ಸಿಂಗ್ (Mona Singh) 42ರ ವಯಸ್ಸಿನಲ್ಲಿ ಕೂಡ 18ರ ಯುವತಿಯಂತೆ ಕಾಣುತ್ತಾರೆ. ಲಾಲ್ ಸಿಂಗ್ ಚಡ್ಡಾ, 3 ಈಡಿಯಟ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ, ದುಬಾರಿ ಬೆಲೆಯ ಹೊಚ್ಚ ಹೊಸ ಮರ್ಸಿಡಿಸ್ ಕಾರನ್ನು ಮನೆಗೆ ತಂದಿದ್ದಾರೆ.

ಈ ಕುರಿತು ಆಟೋ ಹ್ಯಾಂಗರ್ ಮರ್ಸಿಡಿಸ್ ಬೆಂಜ್ ಡೀಲರ್‌ಶಿಪ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ನಟಿ ಮೋನಾ ಸಿಂಗ್ ಕುಟುಂಬದೊಂದಿಗೆ ನೂತನ ಕಾರನ್ನು ವಿತರಣೆ ಪಡೆಯುತ್ತಿರುವುದನ್ನು ಕಾಣಬಹುದು. ಹಲವು ಸೆಲೆಬ್ರಿಟಿಗಳು ಸೇರಿದಂತೆ ಫ್ಯಾನ್ಸ್‌ಗಳು ಸಹ ಶುಭಾಶಯವನ್ನು ಕೋರುತ್ತಿದ್ದಾರೆ. ಮೋನಾ ಸಿಂಗ್ ಕೊಂಡುಕೊಂಡಿರುವ ಮರ್ಸಿಡಿಸ್ ಬೆಂಜ್ ಜಿಎಲ್ಇ ಎಸ್‌ಯುವಿಯು ಬಹುತೇಕ ಸಿನಿತಾರೆಯರ ಆಯ್ಕೆಯ ವಾಹನವಾಗಿದೆ ಎಂದು ಹೇಳಬಹುದು.

Beautiful Actress Mona Singh Brings Home To New Mercedes Benz GLE Car

ನಟಿ ಮೋನಾ ಸಿಂಗ್ ಅವರು ಮರ್ಸಿಡಿಸ್ ಬೆಂಜ್ ಜಿಎಲ್ಇ (Mercedes-Benz GLE) ಕಾರಿನ ಯಾವ ರೂಪಾಂತರ (ವೇರಿಯೆಂಟ್)ವನ್ನು ಖರೀದಿಸಿದ್ದಾರೆ ಎಂಬುದರ ಕುರಿತು ಹೆಚ್ಚಿನ ವಿವರಗಳಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಈ ಎಸ್‌ಯುವಿ ರೂ.96.40 ಲಕ್ಷದಿಂದ ರೂ.1.15 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಅತ್ಯಾಧುನಿಕ ವಿನ್ಯಾಸವನ್ನು ಹೊಂದಿರುವ ಈ ಕಾರು, ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಇದರೊಳಗೆ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಈ ಮರ್ಸಿಡಿಸ್ ಬೆಂಜ್ ಜಿಎಲ್ಇ ಮಾದರಿಯು 3 ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 2-ಲೀಟರ್, 4-ಸಿಲಿಂಡರ್ ಡೀಸೆಲ್ ಎಂಜಿನ್ 269 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 550 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 3-ಲೀಟರ್ 6-ಸಿಲಿಂಡರ್ ಡೀಸೆಲ್ ಎಂಜಿನ್ 367 ಪಿಎಸ್ ಪವರ್ ಹಾಗೂ 750 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

Beautiful Actress Mona Singh Brings Home To New Mercedes Benz GLE Car

ಮತ್ತೊಂದು 3-ಲೀಟರ್, 6-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 381 ಪಿಎಸ್ ಪವರ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಎಲ್ಲ ರೂಪಾಂತರಗಳು 9-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿವೆ. ಜೊತೆಗೆ 9.70 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತವೆ.

ಈ ಕಾರು ಬೆಲೆಗೆ ತಕ್ಕಂತೆ ಸಾಕಷ್ಟು ಐಷಾರಾಮಿ ವೈಶಿಷ್ಟ್ಯಗಳನ್ನು ಪಡೆದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ 12.3-ಇಂಚಿನ ಡಿಸ್ಪ್ಲೇಗಳು, 4-ಜೋನ್ ಕ್ಲೇಮೇಟ್ ಕಂಟ್ರೋಲ್, ಹೆಡ್ಸ್ - ಅಪ್ ಡಿಸ್‌ಪ್ಲೇ, 590ಡಬ್ಲ್ಯೂ 13-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

Beautiful Actress Mona Singh Brings Home To New Mercedes Benz GLE Car

ಮರ್ಸಿಡಿಸ್ ಬೆಂಜ್ ಜಿಎಲ್ಇ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, 9 ಏರ್‌ಬ್ಯಾಗ್‌ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಟ್ರಾಕ್ಷನ್ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ನಂತಹ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರಿಗೆ ಬಿಎಂಡಬ್ಲ್ಯೂ ಎಕ್ಸ್5, ಆಡಿ ಕ್ಯೂ7 ಹಾಗೂ ವೋಲ್ವೊ ಎಸ್‌ಯುವಿಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 4, 2024, 16:40 [IST]
English summary
Beautiful actress mona singh brings home to new mercedes benz gle car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+