ವೀಡಿಯೊ ಹೊರಬರದಿದ್ದರೆ, ಯಾರಿಗೂ ಸತ್ಯ ತಿಳಿಯುತ್ತಿರಲಿಲ್ಲ! ಹೀಗೂ ಬಳಸಬಹುದೇ?

ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್ ವಿಭಾಗವು ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ಇಂಧನ ಚಾಲಿತ ಸ್ಕೂಟರ್‌ಗಳು ಒಂದೆಡೆಯಾದ್ರೆ, ಇತ್ತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತೊಂದೆಡೆ ಹೊಸ ಫೀಚರ್ಸ್‌ನೊಂದಿಗೆ ಧೂಳೆಬ್ಬಿಸುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ಹಲವಾರು ವೈಶಿಷ್ಟ್ಯಗಳನ್ನು ಇವಿ ಸ್ಕೂಟರ್‌ಗಳಲ್ಲಿ ನೀಡಲಾಗುತ್ತಿದೆ. ಮುಖ್ಯವಾಗಿ ಇಂಧನ ಚಾಲಿತ ಸ್ಕೂಟರ್‌ಗಳಿಗಿಂತ ಹೆಚ್ಚಿನ ಸ್ಟೋರೇಜ್ ಅನ್ನು ಎಲೆಕ್ಟ್ರಿಕ್ ಸ್ಕೂರ್‌ಗಳಲ್ಲಿ ನೀಡುವ ಮೂಲಕ ಹೆಚ್ಚಿನ ಸರಕುಗಳನ್ನು ಸಾಗಿಸಲು ಅನುವು ಮಾಡಿಕೊಡಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಎಥರ್ ರಿಜ್ಟಾ 34 ಲೀಟರ್ ಶೇಖರಣಾ ಸ್ಥಳವನ್ನು ಹೊಂದಿದೆ.

ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಇದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಅಗ್ಗದ ಬೆಲೆಯ ಬೆಸ್ಟ್ ಫ್ಯಾಮಿಲಿ ಸ್ಕೂಟರ್ ಎಂದು ಜನಪ್ರಿಯತೆ ಪಡೆದುಕೊಂಡಿದೆ. ಅಷ್ಟಕ್ಕೂ ಇದನ್ನು ಫ್ಯಾಮಿಲಿ ಸ್ಕೂಟರ್ ಎಂದು ಏಕೆ ಕರೆಯುತ್ತಾರೆ ಗೊತ್ತಾ? ಬನ್ನಿ ತಿಳಿಯೋಣ...

beer-bottles-in-ather-rizta-electric-scooter-boot-kerala-viral-video

ಸಾಮಾನ್ಯ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಬರೋಬ್ಬರಿ 56 ಲೀಟರ್ ಸ್ಟೋರೇಜ್ ಸ್ಪೇಸ್ ಹೊಂದಿದೆ. ಇದರಲ್ಲಿ ಸೀಟಿನ ಕೆಳಗೆ 34 ಲೀಟರ್ ಮತ್ತು ಮುಂಭಾಗದ ಫ್ರಂಕ್‌ನಲ್ಲಿ 22 ಲೀಟರ್ ಶೇಖರಣಾ ಸ್ಥಳವಿದೆ. ಆದ್ದರಿಂದ ನೀವು ಲ್ಯಾಪ್ ಟಾಪ್, ದಿನಸಿ, ಹೆಲ್ಮೆಟ್, ತರಕಾರಿಗಳಂತಹ ಬಹಳಷ್ಟು ವಸ್ತುಗಳನ್ನು ಇಟ್ಟುಕೊಳ್ಳಬಹುದು. ಹಾಗಾಗಿಯೇ ಇದನ್ನು ಫ್ಯಾಮಿಲಿ ಸ್ಕೂಟರ್ ಎಂದು ಕರೆಯಲಾಗುತ್ತದೆ.

ಆದರೆ ಇತ್ತೀಚೆಗೆ ಇಂತಹ ಸ್ಕೂಟರ್ ಅನ್ನು ವಿಚಿತ್ರವಾಗಿ ಬಳಕೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೀಟಿನ ಕೆಳಗೆ ಬೂಟ್ ಪ್ರದೇಶವನ್ನು ಬಳಸಿದ ರೀತಿಗೆ ಎಲ್ಲರು ಅಚ್ಚರಿಗೊಂಡಿದ್ದಾರೆ. ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ನ ಬೂಟ್ ಭಾಗವನ್ನು ಸಂಪೂರ್ಣ ಬಿಯರ್ ಬಾಟಲಿಗಳನ್ನು ತುಂಬಲಾಗಿದೆ.

beer-bottles-in-ather-rizta-electric-scooter-boot-kerala-viral-video

ಇನ್ನೂ ಅಚ್ಚರಿಗೊಳ್ಳುವ ವಿಷಯವೇನೆಂದರೆ ಈ ಜಾಗದಲ್ಲಿ ಬರೋಬ್ಬರಿ 12 ಬಿಯರ್ ಬಾಟಲಿಗಳನ್ನು ತುಂಬಿದ್ದಾರೆ. ವಿಡಿಯೋದಲ್ಲಿ ನಮಗೆ ಮೇಲ್ನೋಟಕ್ಕೆ ಕಾಣುವುದು ಕೇವಲ 7 ಬಿಯರ್ ಬಾಟಲಿಗಳು ಮಾತ್ರ, ಆದರೆ ವಿಡಿಯೋ ಚಿತ್ರಿಸುವ ವ್ಯಕ್ತಿ 12 ಬಾಟಲಿ ಬಿಯರ್ ಇದೆ ಎಂದು ಹೇಳುವುದನ್ನು ನಾವು ಕೇಳಬಹುದು. ಉಳಿದ ಐದು ಬಿಯರ್ ಬಾಟಲಿಗಳು ಇನ್ನೂ ಕೆಳಗೆ ಇಡಲಾಗಿದೆ ಎಂದು ಭಾವಿಸಲಾಗಿದೆ.

ಬಿಯರ್‌ ಬಾಟಲಿಗಳನ್ನು ತಂಪಾಗಿಡಲು ಸಂಪೂರ್ಣ ಐಸ್ ಕ್ಯೂಬ್‌ಗಳೊಂದಿಗೆ ತುಂಬಲಾಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲವಾದರೂ, ಮಳಯಾಲಂನಲ್ಲಿ ಮಾತನಾಡುವುದನ್ನು ಕಂಡರೆ ಕೇರಳದಲ್ಲಿ ಎಲ್ಲೋ ನಡೆದಿರಬಹುದು ಎನ್ನಿಸುತ್ತಿದೆ. ಸಾಮಾನ್ಯ ಇಂಧನ ಚಾಲಿತ ಸ್ಕೂಟರ್‌ಗಳಾದರೇ ಸೀಟಿನ ಕೆಳಗಿರುವ ಬೂಟ್ ಪ್ರದೇಶವು ತುಂಬಾ ಬಿಸಿಯಾಗಿರುತ್ತದೆ. ಆದ್ರೆ ಈ ಸಮಸ್ಯೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇರುವುದಿಲ್ಲ.

ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ರೂ.1.10 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇಂತಹ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊಬೈಲ್ ಬಾರ್ ಆಗಿ ಪರಿವರ್ತಿಸಲಾಗಿದೆ. ವಾಸ್ತವವಾಗಿ ಎಥರ್ ರಿಜ್ಟಾ ಹೆಚ್ಚಿನ ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಹೆಚ್ಚಿನ 'ಸ್ಟೋರೇಜ್ ಸ್ಪೇಸ್' ಅನ್ನು ಹೊಂದಿದೆ. ಒಂದು ರೀತಿಯಲ್ಲಿ ಈ ವಿಡಿಯೋ ಎಥರ್ ಕಂಪನಿಗೆ ಉಚಿತ ಪ್ರಚಾರವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, November 24, 2024, 10:00 [IST]
English summary
Beer bottles in ather rizta electric scooter boot kerala viral video
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+