ಬೆಳಗಾವಿ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಬಸ್‌ಗಿಂತ ಬೇಗ ಹೋಗುತ್ತದೆ, ಹುಬ್ಬಳ್ಳಿಗೆ 5 ಗಂಟೆ ಸಾಕು!

ಉತ್ತರ ಕರ್ನಾಟಕ ಭಾಗದ ಜನರಿಗೆ ಕಡೆಗೂ ಸಿಹಿಸುದ್ದಿ ಸಿಕ್ಕಿದ್ದು, ಪ್ರಸ್ತುತ, ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವೆ ಸಂಚರಿಸುವ ಸೆಮಿ ಪ್ರೀಮಿಯಂ ಹೈಸ್ವೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲನ್ನು ಬೆಳಗಾವಿ (Belagavi)ವರೆಗೆ ವಿಸ್ತರಿಸಿ, ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಈ ರೈಲು ತಿಂಗಳಾಂತ್ಯದಿಂದ (ನವೆಂಬರ್) ಕಾರ್ಯಾಚರಣೆ ನಡೆಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು, ಜನಪ್ರತಿನಿಧಿಗಳು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದ್ದರು. ಆದರೆ, ಅದು ಸಾಧ್ಯವಾಗಿರಲ್ಲ. ಧಾರವಾಡ - ಬೆಳಗಾವಿ ನಡುವೆ ರೈಲು ಮಾರ್ಗ ದ್ವಿಪಥಗೊಂಡಿರಲಿಲ್ಲ. ಜೊತೆಗೆ ವಿದ್ಯುದ್ದೀಕರಣ ಆಗಿರಲ್ಲ. ಈಗ ಎಲ್ಲ ಅಡೆತಡೆಗಳು ದೂರವಾಗಿವೆ.

ಬೆಳಗಾವಿ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಬಸ್‌ಗಿಂತ ಬೇಗ ಹೋಗುತ್ತದೆ, ಹುಬ್ಬಳ್ಳಿಗೆ 5 ಗಂಟೆ ಸಾಕು!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (Chief Public Relations Officer) ಅನೀಶ್ ಹೆಗಡೆ ಅವರು, 'ಧಾರವಾಡ - ಬೆಳಗಾವಿ ರೈಲು ಮಾರ್ಗವನ್ನು ದ್ವಿಪಥಗೊಳಿಸಲಾಗಿದೆ. ಸಂಪೂರ್ಣ ವಿದ್ಯುದ್ದೀಕರಣ ಮಾಡಲಾಗಿದೆ. ಲೋಂಡಾ - ಮೀರಜ್ ವಿಭಾಗದಲ್ಲಿ ವಿಜಯನಗರ - ಮೀರಜ್ ನಡುವಿನ 8.1 ಕಿ.ಮೀ ಮಾರ್ಗವನ್ನು ದ್ವಿಪಥಗೊಳಿಸಬೇಕಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ' ಎಂದು ಹೇಳಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾಚರಣೆ ಆರಂಭಿಸಿದ ಮೇಲೆ ಕೆಎಸ್ಆರ್ ಬೆಂಗಳೂರಿಂದ ಬೆಳಗಾವಿಯನ್ನು 7 ಗಂಟೆ 45 ನಿಮಿಷಗಳಲ್ಲಿ ತಲುಪುತ್ತದೆ. ಈಗಿರುವ ವೇಗದ ರೈಲುಗಳಿಗಿಂತ ಎರಡು ಗಂಟೆ ಮೊದಲೇ ಹೋಗುತ್ತದೆ. ಬಸ್‌ ವಿಚಾರಕ್ಕೆ ಬರವುದಾದರೆ, ಇವೆರೆಡು ನಗರಗಳ ನಡುವೆ ಓಡಾಡುವ ಕೆಎಸ್‌ಆರ್‌ಟಿಸಿ ಪ್ರೀಮಿಯಂ ಎಸಿ ಸ್ಲೀಪರ್‌ನಲ್ಲಿ ಸುಮಾರು 9 ಗಂಟೆ ಪ್ರಯಾಣಿಸಬೇಕು.

ಬೆಳಗಾವಿ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಬಸ್‌ಗಿಂತ ಬೇಗ ಹೋಗುತ್ತದೆ, ಹುಬ್ಬಳ್ಳಿಗೆ 5 ಗಂಟೆ ಸಾಕು!

ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ವಿಸ್ತರಣೆ ಮಾಡಿರುವುದರಿಂದ ಹುಬ್ಬಳ್ಳಿ - ಧಾರವಾಡ ನಡುವಿನ ಪ್ರಯಾಣದ ಸಮಯವು ಕಡಿಮೆಯಾಗುತ್ತದೆ. ಈ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪಲು ಕೇವಲ 5 ಗಂಟೆ 5 ನಿಮಿಷ, ಧಾರವಾಡಕ್ಕೆ 5 ಗಂಟೆ 35 ನಿಮಿಷ ತೆಗೆದುಕೊಳ್ಳಲಿದೆ. ಅದೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರಲು 5 ಗಂಟೆ 20 ನಿಮಿಷ ಸಾಕು.

ಮುಂದಿನ ವಾರ ಧಾರವಾಡ - ಬೆಳಗಾವಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಹೊಸ ರೇಕ್ (ಕೋಚ್) ಆಗಮಿಸಿದ ಬಳಿಕ, ಪರೀಕ್ಷಾರ್ಥ ಓಡಾಟ ನಡೆಸಲಿದೆ. ಸದ್ಯ, ಬೆಂಗಳೂರು - ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ರೈಲನ್ನು ಪ್ರಾಯೋಗಿಕ ಸಂಚಾರಕ್ಕೆ ಬಳಸುವುದಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು - ಬೆಳಗಾವಿ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಈ ತಿಂಗಳಾಂತ್ಯಕ್ಕೆ ಸಂಚಾರ ನಡೆಸಲಿದ್ದು, 8 ಕೋಚ್‌ಗಳನ್ನು ಒಳಗೊಂಡಿರುತ್ತದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚಿನ ಕೋಚ್‌ ಜೋಡಣೆಗೊಳಿಸಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ಪ್ರಯಾಣ ದರವು ಕೆಲವು ದಿನಗಳಲ್ಲಿ ಘೋಷಣೆಯಾಗುವ ನೀರಿಕ್ಷೆಯಿದ್ದು, ಈ ರೈಲು, ಸಾರ್ವಜನಿಕರಿಗೆ ಖಂಡಿತ ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ ಎಂದು ಹೇಳಬಹುದು.

ಧಾರವಾಡ ಮತ್ತು ಬೆಳಗಾವಿ ನಡುವೆ 79 ಕಿ.ಮೀ ಅಂತರವಿದ್ದು, ಈ ದೂರವನ್ನು ಕ್ರಮಿಸಲು ವಂದೇ ಭಾರತ್‌ ಎಕ್ಸ್‌ಪ್ರೆಸ್ (Vande Bharat Express) ಎರಡು ಗಂಟೆಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಗಡಿ ಜಿಲ್ಲೆ ಬೆಳಗಾವಿಯಿಂದ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸುವವರಿಗೂ ದೊಡ್ಡಮಟ್ಟದ ಅನುಕೂಲವಾಗಲಿದ್ದು, ಪ್ರಯಾಣದ ಅವಧಿ ಕಡಿಮೆಯಾಗುವುದರಿಂದ ಹುಬ್ಬಳ್ಳಿ ಹಾಗೂ ಧಾರವಾಡ ಜನರಿಗೂ ಸಹಾಯವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 16, 2023, 11:40 [IST]
English summary
Belagav bengaluru vande bharat express faster than bus 5 hours to hubli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+