ನಿಮ್ಮ ಮನೆಯನ್ನೇ ಹೊತ್ತೊಯ್ಯಬಲ್ಲ ಟ್ರಕ್
ಸಾಮಾನ್ಯ ಟ್ರಕ್‌ವೊಂದು ಎಷ್ಟು ಭಾರ ಹೊತ್ಯೊಯ್ಯಬಲ್ಲದು ಎಂಬುದನ್ನು ಬಲ್ಲೀರಾ? ಆದರೆ ನಾವಿಂದು ಪರಿಚಯಿಸಲಿರುವ ಟ್ರಕ್ ಬರೋಬ್ಬರಿ 450 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿದೆ.
ಹೌದು, ಬೆಲೂರಸ್ ರಾಷ್ಟ್ರದಲ್ಲಿ ಇಂತಹದೊಂದು ವಿಶೇಷ ಟ್ರಕ್ ತಯಾರಿಸಲಾಗಿದೆ. ಅಂದರೆ ಅಡಿಬೇರು ಸಹಿತ ನಿಮ್ಮ ಮನೆಯನ್ನೇ ಹೊರುವ ತಾಕತ್ತನ್ನು ಹೊಂದಿದೆ. BelAZ 75710 ಎಂಬ ಹೆಸರಿನಿಂದ ಅರಿಯಲ್ಪಡುವ ಈ ಹೊರೆಬಂಡಿಯನ್ನು ಅಕ್ಟೋಬರ್ ತಿಂಗಳಾರಂಭದಲ್ಲಿ ಅನಾವರಣಗೊಳಿಸಲಾಗಿತ್ತು. ಪ್ರಸ್ತುತ ಟ್ರಕ್ ವಿಶ್ವದ ಅತಿದೊಡ್ಡ ಟ್ರಕ್ ಪಟ್ಟ ಆಲಂಕರಿಸುವ ಮೂಲಕ ಗಿನ್ನಿಸ್ ಪುಟ ಸೇರ್ಪಡೆಗೊಳ್ಳುವ ತವಕದಲ್ಲಿದೆ.
ಗಣಿಗಾರಿಕೆ ನಡೆಸಲು ಈ ಟ್ರಕ್ ಬಳಸಲಾಗುವುದು. ಅಂದರೆ ಈಗಾಗಲೇ ಯಶಸ್ವಿ ಪರೀಕ್ಷೆ ಹಮ್ಮಿಕೊಂಡಿರುವ ಈ ಟ್ರಕ್ ಮುಂದಿನ ದಿನಗಳಲ್ಲಿ ಜಗತ್ತಿನ ಅತಿದೊಡ್ಡ ಗಣಿಗಾರಿಕೆಗಳಲ್ಲಿ ಕಾರ್ಯನಿರ್ವಹಿಸಲಿದೆ.

ನಾವು ಆರಂಭದಲ್ಲೇ ತಿಳಿಸಿರುವಂತೆಯೇ 450 ಟನ್ ಭಾರವನ್ನು ಹೊರಬಲ್ಲ ಸಾಮರ್ಥ್ಯ ಹೊಂದಿರುವ ಈ BelAZ 75710 ಟ್ರಕ್ ಒಟ್ಟು 810 ಟನ್ ಭಾರವನ್ನು ಹೊಂದಿದೆ.

ಪ್ರಸ್ತುತ ಹೊರಬಂಡಿಯಲ್ಲಿ ವಿಶೇಷವಾಗಿ ತಯಾರಿಸಲಾದ ಎಂಟು ಚಕ್ರಗಳಿವೆ. ಇದು ಸರಾಸರಿ ಮಾನವ ಶರೀರದ ಉದ್ದಕ್ಕಿಂತ ಮೂರು ಪಟ್ಟುಗಳಷ್ಟು ಹೆಚ್ಚಾಗಿದೆ. ಇದರಿಂದಲೇ ಟ್ರಕ್ ಗಾತ್ರವನ್ನು ಅಂದಾಜಿಸಬಹುದಾಗಿದೆ.

ಅಂದರೆ BelAZ 75710 ಗಾಡಿ 26 ಫೀಟ್ ಎತ್ತರ ಹಾಗೂ 67 ಫೀಟ್ ಉದ್ದವನ್ನು ಹೊಂದಿದೆ.

ಬೆಲೂರಸ್ ಮೂಲದ ಕಂಪನಿ ನಿರ್ಮಿಸಿರುವ ಈ ಟ್ರಕ್ಕಿನ ಹಿಂದುಗಡೆ 2.5 ಬೋಯಿಂಗ್ ಪ್ಯಾಸೆಂಜರ್ ಜೆಟ್ ಹೊರುವ ಸಾಮರ್ಥ್ಯ ಹೊಂದಿದೆ.

ಇನ್ನು ಇದರಲ್ಲಿ 16 ಸಿಲಿಂಡರ್ ಫೋರ್ ಸ್ಟ್ರೋಕ್ ಎಂಟಿಯು ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, 4,600 ಅಶ್ವಶಕ್ತಿ ಉತ್ಪಾದಿಸುವ (18,626) ಸಾಮರ್ಥ್ಯ ಹೊಂದಿದೆ.

ಅಷ್ಟೊಂದು ದೊಡ್ಡ ಆಕಾರ ಹಾಗೂ ಭಾರವನ್ನು ಹೊಂದಿರುವ ಹೊರತಾಗಿರುವ ಬೆಲಾಝ್ 75710 ಟ್ರಕ್ ಪ್ರತಿ ಗಂಟೆಗೆ 64 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇನ್ನು 10 ಡಿಗ್ರಿಗಳಷ್ಟು ಬಾಗಿದ ಪ್ರದೇಶದಲ್ಲೂ ಗಂಟೆಗೆ 40 ಕೀ.ಮೀ. ವೇಗತೆ ಕಾಪಾಡುವಲ್ಲಿ ಯಶಸ್ವಿಯಾಗಲಿದೆ.

ಅಷ್ಟೇ ಯಾಕೆ ಪ್ರಸ್ತುತ ಟ್ರಕ್ 20 ಮೀಟರ್ ಟರ್ನಿಂಗ್ ರೇಡಿಯಸ್ ಕೂಡಾ ಹೊಂದಿದ್ದು, ಇದು ಸಹ ಹೆಚ್ಚು ಪ್ರಭಾವಿಶಾಲಿ ಎನಿಸಿಕೊಂಡಿದೆ.

ಹಾಗಿದ್ದರೂ ದೈತ್ಯಕಾರದ ಈ ಟ್ರಕ್‌ನಲ್ಲಿ ಎಂಜಿನ್‌ನಿಂದ ಚಕ್ರಗಳಿಗೆ ಪವರ್ ವರ್ಗಾಯಿಸುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಎಲೆಕ್ಟ್ರೊ ಮೆಕ್ಯಾನಿಕಲ್ ಗೇರ್ ಕಾರ್ಯನಿರ್ವಹಿಸಲಿದೆ. ಇದು ಎಸಿ ಎಲೆಕ್ಟ್ರಿಕ್ ಡ್ರೈವ್ ಸೀಮೆನ್ ಎಂಎಂಟಿ500 ಎಲೆಕ್ಟ್ರೊಮೆಕ್ಯಾನಿಕಲ್ ಟ್ರಾನ್ಸ್‌ಮಿಷನ್ ಜತೆ ಟು ಟ್ರಾಕ್ಷನ್ ಅಲ್ಟರ್ನೇಟರ್ಸ್, ಫೋರ್ ಟ್ರಾಕ್ಷನ್ ಎಲೆಕ್ಟ್ರಿಕ್ ಮೋಟಾರ್, ಮೋಟಾರ್ ವೀಲ್ ರಿಡಕ್ಷನ್ ಗೇರ್, ಆಕ್ಸಿಲಿಯರಿ ಎಲೆಕ್ಟ್ರಿಕ್ ಮೆಷಇನ್, ಹೊಂದಾಣಿಕೆ ಹಾಗೂ ಇತರ ನಿಯಂತ್ರಣ ಸಲಕರಣೆಗಳನ್ನು ಹೊಂದಿರಲಿದೆ.
ವೀಡಿಯೊ ವೀಕ್ಷಿಸಿ


Click it and Unblock the Notifications








