ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

By Manoj Bk

ಡ್ಯಾಶ್‌ಬೋರ್ಡ್ ಕ್ಯಾಮೆರಾಗಳು ಹಲವು ದಿನಗಳಿಂದ ಮಾರುಕಟ್ಟೆಯಲ್ಲಿವೆ. ಆದರೆ ಇತ್ತೀಚೆಗೆ ಹಲವು ಕಾರು ಮಾಲೀಕರು ಡ್ಯಾಶ್‌ಬೋರ್ಡ್ ಕ್ಯಾಮೆರಾ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. ಡ್ಯಾಶ್‌ಬೋರ್ಡ್ ಕ್ಯಾಮೆರಾಗಳನ್ನು ಕಾರಿನ ಡ್ಯಾಶ್‌ಬೋರ್ಡ್ ಅಥವಾ ರೇರ್ ವೀವ್ ಮಿರರ್‌ನಲ್ಲಿ ಅಳವಡಿಸಲಾಗಿರುತ್ತದೆ.

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳನ್ನು ಮಾರಾಟ ಮಾಡಲಾಗುತ್ತದೆ. ಈ ಕ್ಯಾಮೆರಗಳು ವಿಭಿನ್ನ ಫೀಚರ್ ಹಾಗೂ ಸಾಮರ್ಥ್ಯಗಳನ್ನು ಹೊಂದಿರುತ್ತವೆ. ಡ್ಯಾಶ್‌ಬೋರ್ಡ್ ಕ್ಯಾಮೆರಾಗಳನ್ನು ರೂ.2,000 ಪಾವತಿಸಿ ಖರೀದಿಸಬಹುದು. ಸೌಲಭ್ಯ ಹಾಗೂ ಸಾಮರ್ಥ್ಯಗಳ ಆಧಾರದ ಮೇಲೆ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳ ಬೆಲೆ ಬದಲಾಗುತ್ತದೆ.

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ಡ್ಯಾಶ್‌ಬೋರ್ಡ್ ಕ್ಯಾಮೆರಾಗಳನ್ನು ಬಳಸುವುದರಿಂದ ಯಾವ ಯಾವ ಪ್ರಯೋಜನಗಳಿವೆ. ಈ ಕ್ಯಾಮೆರಾಗಳ ಸಹಾಯದಿಂದ ಸಮಸ್ಯೆಗಳಿಂದ ಹೇಗೆ ಪಾರಾಗಬಹುದು ಎಂಬ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ಭಾರತದಲ್ಲಿ ರಸ್ತೆಗಳು ಕಳಪೆಯಾಗಿರುವುದರಿಂದ ಹಾಗೂ ವಾಹನ ಸವಾರರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ಭಾರತದಲ್ಲಿ ಅಪಘಾತಗಳು ಸಾಮಾನ್ಯವಾಗಿವೆ.

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ರಸ್ತೆ ಅಪಘಾತವಾದಾಗ ಹಿಂದೆ ಮುಂದೆ ನೋಡದೇ ದೊಡ್ಡ ವಾಹನಗಳನ್ನು ಚಾಲನೆ ಮಾಡುವವರನ್ನು ದೂಷಿಸುವುದು ಸಾಮಾನ್ಯವಾಗಿದೆ. ಉದಾಹರಣೆಗೆ ದ್ವಿಚಕ್ರ ವಾಹನ ಸವಾರನು ತನ್ನ ತಪ್ಪಿನಿಂದ ಅಪಘಾತಕ್ಕೀಡಾದರೆ ದೊಡ್ಡ ವಾಹನದ ಸವಾರನನ್ನು ದೂಷಿಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ಈ ರೀತಿಯ ಸಂದರ್ಭಗಳಲ್ಲಿ ಕಾರುಗಳಲ್ಲಿರುವ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳು ಕಾರು ಚಾಲಕರನ್ನು ಕಾಪಾಡುತ್ತವೆ. ಘಟನೆಯ ಸಂಪೂರ್ಣ ವೀಡಿಯೊವನ್ನು ಸಾಕ್ಷಿ ಸಮೇತ ಸಾಬೀತು ಪಡಿಸಬಹುದು.

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ಇಷ್ಟು ಮಾತ್ರವಲ್ಲದೇ ಡ್ಯಾಶ್‌ಬೋರ್ಡ್ ಕ್ಯಾಮೆರಾ ಅಳವಡಿಸಿದ್ದರೆ ಬೇರೆ ಯಾವುದಾದರೂ ವಾಹನ ಕಾರಿಗೆ ಗುದ್ದಿದರೆ ಅದಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನು ಸಹ ಸಾಬೀತುಪಡಿಸಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ಭಾರತದಲ್ಲಿ ಕೆಲವು ಪೊಲೀಸರು ವಾಹನ ತಪಾಸಣೆ ವೇಳೆ ವಾಹನಗಳನ್ನು ಅಡ್ಡಗಟ್ಟಿ ಜನರಿಂದ ಹಣ ಸುಲಿಗೆ ಮಾಡಿರುವ ಹಲವಾರು ಘಟನೆಗಳು ವರದಿಯಾಗಿವೆ. ಉದಾಹರಣೆಗೆ ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಧರಿಸಿದ್ದರೂ ಸಹ, ಕೆಲವು ಪೊಲೀಸರು ಸೀಟ್ ಬೆಲ್ಟ್ ಧರಿಸಿಲ್ಲ ಎಂದು ದಂಡ ವಿಧಿಸುತ್ತಾರೆ.

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಅಳವಡಿಸಿದ್ದರೆ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿರುವುದಾಗಿ ಸಾಕ್ಷಿ ಸಮೇತ ಸಾಬೀತು ಪಡಿಸಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ರಸ್ತೆಯಲ್ಲಿ ಪ್ರಯಾಣಿಸುವಾಗ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅಡ್ಡಾ ದಿಡ್ಡಿಯಾಗಿ ವಾಹನ ಚಾಲನೆ ಮಾಡುವವರನ್ನು ಕಾಣಬಹುದು. ನಿಯಮಗಳನ್ನು ಪಾಲಿಸದೆ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವವರು ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಅಪಾಯವನ್ನುಂಟುಮಾಡುತ್ತಾರೆ.

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ಅಂತಹ ಚಾಲಕರು ಸಮಾಜಕ್ಕೆ ಮಾರಕರಾಗಿರುತ್ತಾರೆ. ಡ್ಯಾಶ್‌ಬೋರ್ಡ್ ಕ್ಯಾಮೆರಾ ಅಳವಡಿಸಿದ್ದರೆ ಈ ರೀತಿಯ ಚಾಲಕರ ಸಂಚಾರ ನಿಯಮ ಉಲ್ಲಂಘನೆಗಳ ಬಗ್ಗೆ ಅವರ ವಾಹನ ನೋಂದಣಿ ಸಂಖ್ಯೆಯ ಸಮೇತ ದೂರು ದಾಖಲಿಸಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ಇತ್ತೀಚಿಗೆ ದೆಹಲಿಯ ಕಾರು ಚಾಲಕರೊಬ್ಬರಿಗೆ ಸಂಚಾರ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರು ಎಂಬ ಕಾರಣಕ್ಕೆ ದಂಡ ವಿಧಿಸಲು ಮುಂದಾಗಿದ್ದರು. ಆದರೆ ಅವರ ಕಾರಿನಲ್ಲಿ ಅಳವಡಿಸಿದ್ದ ಡ್ಯಾಶ್‌ಬೋರ್ಡ್ ಕ್ಯಾಮೆರಾದ ದೃಶ್ಯಗಳನ್ನು ತೋರಿಸಿ ದಂಡ ವಿಧಿಸುವುದರಿಂದ ಪಾರಾಗಿದ್ದರು.

Most Read Articles

Kannada
English summary
Benefits of having dashboard cameras in cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X