Bengaluru । ತಲೆನೋವು ತಂದಿಟ್ಟ ಟ್ರಾಫಿಕ್, ಬೆಂಗಳೂರಿಗರಿಂದ ದಿಢೀರ್ ಹೊಸ ನಿರ್ಧಾರ!
ಸಂಚಾರ ದಟ್ಟಣೆ ಎಂಬುದು ಬೆಂಗಳೂರು (Bengaluru) ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ವಿವಿಧ ಎನ್‌ಜಿಒಗಳು ಬಿಡುಗಡೆಗೊಳಿಸಿದ ಪರ್ಸನಲ್2ಪಬ್ಲಿಕ್ (Personal2Public) ಸಮೀಕ್ಷಾ ವರದಿಯಲ್ಲಿ ಮೆಟ್ರೋಗೆ ಹೋಲಿಸಿದರೆ, ಕಾರುಗಳಲ್ಲಿ ನಿತ್ಯದ ಕೆಲಸಕ್ಕೆ ತೆರಳಲು ಗಂಟೆ ಗಟ್ಟಲೇ ಸಮಯಾವಕಾಶ ಬೇಕಂತೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನದಲ್ಲಿ ಏಕಮುಖ (one way) ಸಂಚಾರಕ್ಕೆ 35 ರಿಂದ 40 ನಿಮಿಷ ಹಿಡಿಯುತ್ತದೆ. ಅದೇ ಕಾರುಗಳಲ್ಲಿ ಕನಿಷ್ಠವೆಂದರೂ 1 ರಿಂದ 1.5 ಗಂಟೆ ಬೇಕಾಗಿದೆ. ಸಾರ್ವಜನಿಕ ಸಾರಿಗೆಯಾದ ಮೆಟ್ರೋದಲ್ಲಿ ಪ್ರಯಾಣಿಸಲು 45 ನಿಮಿಷ ಸಾಕು. ಕಚೇರಿಗೆ ಪ್ರಯಾಣಿಸುವ ಬಹುತೇಕ ಮಂದಿ, ರಸ್ತೆಯಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

ಈ ವರದಿಯಲ್ಲಿ, ಸಾರ್ವಜನಿಕ, ಖಾಸಗಿ ಸೇರಿದಂತೆ ವಿವಿಧ ಸಾರಿಗೆ ವಿಧಾನಗಳಲ್ಲಿ (various modes of transport) ಸರಾಸರಿ ಪ್ರಯಾಣದ ಅಂತರವನ್ನು 10 ಕಿಮೀ ಎಂದು ಪರಿಗಣಿಸಲಾಗಿದೆ. ಕಾರಿನ ಮೂಲಕ ಆ ದೂರವನ್ನು ಕ್ರಮಿಸಲು 1.5 ಗಂಟೆ ಬೇಕಾಗಿತ್ತದೆ. ಮೆಟ್ರೋದಲ್ಲಿ ಪ್ರಯಾಣಿಸುವಾಗ ಸರಾಸರಿ ಪ್ರಯಾಣದ ದೂರ 13 ಕಿಮೀ ಇದ್ದರೂ, ಅದನ್ನು ಕಡಿಮೆ ಸಮಯದಲ್ಲಿ ಕ್ರಮಿಸಬಹುದಾಗಿದೆ.
ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ 3,855 ಬೆಂಗಳೂರಿಗರಲ್ಲಿ, ಶೇಕಡ 95% ಮಂದಿ ತಮ್ಮ ಕಚೇರಿಯ ಕೆಲಸಕ್ಕೆ ತೆರಳಲು ಕಾರುಗಳನ್ನು ಬಳಕೆ ಮಾಡುತ್ತಿದ್ದು, ಆದಷ್ಟು ಬೇಗ ತಮ್ಮ ಪ್ರಯಾಣಕ್ಕಾಗಿ ಮೆಟ್ರೋವನ್ನು ಬಳಸುವುದಾಗಿ ಹೇಳಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ (ಮೆಟ್ರೋ, ಬಿಎಂಟಿಸಿ) ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವವರೂ ಹೊರ ವರ್ತುಲ ರಸ್ತೆ, ವೈಟ್‌ಫೀಲ್ಡ್‌ನಂತಹ ಐಟಿ ಏರಿಯಾಗಳಿಗೆ ತೆರಳುತ್ತಾರೆ. ಇವರೆಲ್ಲರೂ ದಿನನಿತ್ಯ ಪ್ರಯಾಣಿಸುತ್ತಾರೆ.

ಕಾರಿನಲ್ಲಿ ಕಚೇರಿಗೆ ತೆರಳುವವರೂ ಪ್ರಯಾಣಕ್ಕೆ ತಗುಲುವ ವೆಚ್ಚಕ್ಕಿಂತ ಸಮಯವನ್ನು ಉಳಿಸಲು ಬಯಸುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಆದರೆ, ದ್ವಿಚಕ್ರ ವಾಹನ ಸವಾರರ ವಾದವೇ ಬೇರೆ ಇದೆ. ಸಾರ್ವಜನಿಕ ಸಾರಿಗೆ, ಸ್ವಂತ ಬೈಕ್/ ಸ್ಕೂಟರ್ ನಲ್ಲಿ ಪ್ರಯಾಣಿಸುವ ಸಮಯ ಹಾಗೂ ವೆಚ್ಚಗಳು ಒಂದೇ ಆಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದು ತಿಳಿದುಬಂದಿದೆ.
ವರದಿ ಹೇಳುವಂತೆ, ಈ ಸಮಸ್ಯೆ ಬಗೆಹರಿಯಲು ಉತ್ತಮ ಫೀಡರ್ ಬಸ್ ಸೇವೆ ಅಗತ್ಯವಿದೆ. ವಿಶೇಷವಾಗಿ, ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಕಚೇರಿ ಕೆಲಸಕ್ಕೆ ತೆರಳುವ ವೈಟ್‌ಫೀಲ್ಡ್ ಹಾಗೂ ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ಬೇಕಾಗಿದೆ ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ಸರಿ ಸುಮಾರು, ಶೇಕಡ 50% ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಅವಲಂಭಿಸಿದ್ದಾರೆ. ಬಹುತೇಕರು, ತಡೆರಹಿತ ಸಾರಿಗೆ ಸಂಪರ್ಕ ಬೇಕೆಂದು ಹೇಳಿದ್ದಾರೆ.

ಇನ್ನು, ಬೆಂಗಳೂರಿನ ಸಂಚಾರ ದಟ್ಟಣೆಗೆ ಬೇಸತ್ತಿರುವ ಕಾರು ಪ್ರಯಾಣಿಕರು, ತಮ್ಮ ನಿತ್ಯದ ಕೆಲಸಕ್ಕೆ ತೆರಳಲು ಮೆಟ್ರೋ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರವು ಈಗಾಗಲೇ, ಮೆಟ್ರೋ ಸಂಪರ್ಕವನ್ನು ವಿಸ್ತರಿಸಲು ವಿವಿಧೆಡೆ ಕಾಮಗಾರಿಯನ್ನು ನಡೆಸುತ್ತಿದೆ. ಹೀಗೆ, ಒಂದಷ್ಟು ಮಂದಿಯಾದರೂ ಸಾರ್ವಜನಿಕ ಸಾರಿಗೆ ಬಳಕೆ ಮಾಡಿದರೆ, ಟ್ರಾಫಿಕ್ ಕಿರಿ - ಕಿರಿ ತಪ್ಪುತ್ತದೆ. ಜೊತೆಗೆ ಮಾಲಿನ್ಯದ ಪ್ರಮಾಣವು ಕಡಿಮೆಯಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications