ವಿದೇಶಿ ಬ್ಲಾಗರ್‌ಗೆ ಆಟೋ ಚಾಲಕನಿಂದ ವಂಚನೆ:ಬೆಂಗಳೂರು ಮರ್ಯಾದೆ ಹರಾಜು!

ಶಕ್ತಿ ಯೋಜನೆ ಆರಂಭವಾದ ದಿನದಿಂದಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬಸ್​ಗಳು ಸಹ ತುಂಬಿ ತುಳುಕುತ್ತಿವೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಕಾರಣ ಖಾಸಗಿ ಬಸ್​ ಹಾಗೂ ಆಟೋ ಚಾಲಕರ (Auto Driver) ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ವಿಪಕ್ಷಗಳು ಸೇರಿದಂತೆ ಹಲವರು ಹೇಳಿದ್ದರು.

ಇತ್ತ ಆಟೋ ಚಾಲಕರು ಶಕ್ತಿ ಯೋಜನೆಯಿಂದ ತಮ್ಮ ಕಷ್ಟವನ್ನು ತೋಡಿಕೊಂಡಿದ್ದರು. ಈ ಸಂದರ್ಭದಲ್ಲಿ ಹಲವು ಜನರು ಆಟೋ ಚಾಲಕರ ಬಗ್ಗೆ ಕರುಣೆ ಬಗ್ಗೆ ತೋರಿಸಿದ್ದಾರೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರದಲ್ಲಿ ಕೆಲವು ಆಟೋ ಚಾಲಕರ ಆಟಾಟೋಪ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕೆಲವು ಆಟೋ ಚಾಲಕರು ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಮೊದಲ ಬಾರಿ ಬೆಂಗಳೂರಿಗೆ ಬಂದವರ ಜೊತೆ ದುಪ್ಪಟ್ಟು ಬಾಡಿಗೆ ಕೇಳುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ.

Bengaluru Auto Driver

ಬೆಂಗಳೂರು ಅರಮನೆ ವೀಕ್ಷಣೆಗೆ ಬಂದ ವಿದೇಶಿ ಬ್ಲಾಗರ್‌ಗೆ ವಂಚಿಸಿದ ಪ್ರಕರಣ ಒಂದು ವರದಿಯಾಗಿದೆ. ವಿದೇಶಿ ಬ್ಲಾಗರ್ ಆಟೋ ಚಾಲಕನ ವಂಚನೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನಗರದಲ್ಲಿರುವ ಅರಮನೆ ವೀಕ್ಷಣೆಗೆ ಬಂದಿದ್ದ ವಿದೇಶಿ ಬ್ಲಾಗರ್‌ಗೆ ಆಟೋ ಚಾಲಕರೊಬ್ಬರು ವಂಚಿಸಿದ ಪ್ರಕರಣ ವರದಿಯಾಗಿದೆ. ಬಾಂಗ್ಲಾದೇಶ ವಿದೇಶಿ ಬ್ಲಾಗರ್ ಬೇರೆಡೆ ನೋಡುತ್ತಿರುವ ರೂ.500 ಬಾಡಿಗೆ ಪಡೆದು ರೂ.100 ಕೊಟ್ಟಿದ್ದೀರಿ ಎಂದು ಹೇಳಿ ಮತ್ತಷ್ಟು ಹಣ ವಸೂಲಿ ಮಾಡಿದ್ದಾರೆ.

ಬಾಂಗ್ಲಾದೇಶ ವಿದೇಶಿ ಬ್ಲಾಗರ್ ಮೊಹಮ್ಮದ್ ಫಿಜ್ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಆಟೋದಲ್ಲಿ ಹೋಗದಂತೆ ಸೂಚಿಸಲಾಗಿದೆ. ಬ್ಲಾಗರ್ ರೂ.500 ಪಡೆದು ಅದನ್ನು ಶರ್ಟ್​​ ಕೈ ತೋಳಿನ ಒಳಗೆ ಅಡಗಿಸಿಟ್ಟು ಮತ್ತೊಂದು ಕೈಯಲ್ಲಿದ್ದ ರೂ.100 ತೋರಿಸಿ ಮತ್ತಷ್ಟು ಹಣ ಕೇಳುವುದನ್ನು ನೋಡಬಹುದು. ಭಾರತದ ಕರೆನ್ಸಿ ಬಗ್ಗೆ ಅಷ್ಟಾಗಿ ಅರವಿಲ್ಲದ ವಿದೇಶಿ ಬ್ಲಾಗರ್‌ಗೆ ತಾನು ರೂ.100 ಕೊಟ್ಟಿರಬಹುದು ಎಂದು ತಿಳಿದು ಮತ್ತೆ ಹಣ ನೀಡಿದ್ದಾರೆ.

Bengaluru Auto Driver

ನಂತರದಲ್ಲಿ ವಿದೇಶಿ ಬ್ಲಾಗರ್‌ಗೆ ಆಟೋ ಚಾಲಕರ ಮೋಸ ಮಾಡಿರುವುದು ಅರಿವಾಗಿ ಆ ವೀಡೀಯೊವನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೊ ಸಾಕಷ್ಟು ವೈರಲ್ ಆಗಿದೆ. ಸಾಕಷ್ಟು ಸುದ್ದಿಯಾಗಿದೆ. ಬೆಂಗಳೂರಿನ ಆಟೋ ಚಾಲಕರ ಬಗ್ಗೆ ಮತ್ತೆ ಕೆಟ್ಟ ಹೆಸರನ್ನು ತಂದುಕೊಂಡಿದೆ. ಕೆಲವು ಆಟೋ ಚಾಲಕರು ಹೀಗೆ ಮಾಡುವುದರಿಂದ ಬೆಂಗಳೂರಿನ ಎಲ್ಲಾ ಆಟೋ ಚಾಲಕರಿಗೆ ಕೆಟ್ಟ ಹೆಸರು ಬರುತ್ತದೆ.

ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯಾದ್ಯಂತ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದೆ. ಇದರಿಂದ ನಷ್ಟಕ್ಕೆ ಸಿಲುಕಿರುವ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್‍ಗೆ ಕರೆ ನೀಡಿದೆ. ಆಗಸ್ಟ್ 31 ರೊಳಗೆ ತಮ್ಮ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವನ್ನು ನೀಡಿತ್ತು.

ಆದರೆ, ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆ, ಬೆಂಗಳೂರು ಬಂದ್ ಮಾಡುವ ನಿರ್ಧಾರಕ್ಕೆ ಬಂದಿದೆ. ಆ ದಿನ (ಸೆ.11), ನಗರದಲ್ಲಿ ಆಟೋಗಳು, ಏರ್ಪೋಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌, ಬಸ್‌ ಸೇರಿದಂತೆ ಸರಿ ಸುಮಾರು 9 ಲಕ್ಷ ಖಾಸಗಿ ವಾಹನಗಳು ರಸ್ತೆಗೆ ಇಳಿಯುವುದು ಅನುಮಾನವಾಗಿದೆ. ಬೆಂಗಳೂರು ಬಂದ್ ದಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ತನಕ ಮೆರವಣಿಗೆ ನಡೆಸಲು ಖಾಸಗಿ ಸಾರಿಗೆ ಒಕ್ಕೂಟದ ಸದಸ್ಯರು ತೀರ್ಮಾನ ಮಾಡಿದ್ದಾರೆ.

ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಆಟೋ, 3 ಲಕ್ಷ ಕ್ಯಾಬ್‌ ಮತ್ತು 50,000 ಖಾಸಗಿ ಬಸ್‌ಗಳು ಕಾರ್ಯಚರಣೆ ನಡೆಸುತ್ತಿವೆ. ಇವುಗಳಿಂದ, ಸರ್ಕಾರಕ್ಕೆ ಪ್ರತಿ ವರ್ಷ ನೇರ ತೆರಿಗೆ ರೂಪದಲ್ಲಿ ರೂ.2,000 ಕೋಟಿ ಹೆಚ್ಚು ಸಂಗ್ರಹವಾಗುತ್ತದೆ. ಪರೋಕ್ಷ ತೆರಿಗೆ ರೂಪದಲ್ಲಿ ರೂ.20,000 ಕೋಟಿ ಪಾವತಿಸುತ್ತಿದ್ದಾರೆ. ಆದರೆ, ಶಕ್ತಿ ಯೋಜನೆಯಿಂದ ಕಷ್ಟವಾಗಿದೆ ಎಂದು ಖಾಸಗಿ ಸಾರಿಗೆ ಒಕ್ಕೂಟ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, September 6, 2023, 17:00 [IST]
English summary
Bengaluru auto driver cheats bangladesh youtuber details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+