ಬಾಲಿವುಡ್ ನಟರಿಗಿಂತ ಕಮ್ಮಿಯಿಲ್ಲ ನಮ್ಮ ದರ್ಶನ್: ಕೋಟಿ ಬೆಲೆಯ ಟೊಯೊಟಾ ಕಾರಿನಲ್ಲಿ ಬಂದ್ರು.. ವಿಶೇಷತೆಗಳೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ನಟನೆಯ ಕಾಟೇರ (Kaatera) ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು, ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಹೊಸ ಸಿನಿಮಾಕ್ಕಾಗಿ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಿನ್ನೆ ಸದ್ದಿಲ್ಲದೇ ಮಹೂರ್ತ ನೆರವೇರಿಸಲಾಗಿದೆ.

ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದು, ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಇರಲಿದೆಯಂತೆ. ಸದ್ಯ, ಸಿನಿಮಾಕ್ಕೆ ತಾತ್ಕಾಲಿಕವಾಗಿ 'ಡಿ-57' ಎಂಬ ಹೆಸರಿಡಲಾಗಿದೆ. ಇದು ಪಕ್ಕಾ ಮಾಸ್ ಎಂಟರ್‌ಟೈನರ್‌ ಆಗಿರಲಿದೆ ಎಂಬ ಮಾತು ಕೇಳಿಬರುತ್ತಿವೆ. ಚಿತ್ರದ ಮಹೂರ್ತಕ್ಕಾಗಿ ನಟ ದರ್ಶನ್, ದುಬಾರಿ ಬೆಲೆಯ ಐಷಾರಾಮಿ ಟೊಯೊಟಾ ವೆಲ್‌ಫೈರ್ (Toyota Vellfire) ಕಾರಿನಲ್ಲಿ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ.

ಬಾಲಿವುಡ್ ನಟರಿಗಿಂತ ಕಮ್ಮಿಯಿಲ್ಲ ನಮ್ಮ ದರ್ಶನ್: ಕೋಟಿ ಬೆಲೆಯ ಟೊಯೊಟಾ ಕಾರಿನಲ್ಲಿ ಬಂದ್ರು.. ವಿಶೇಷತೆಗಳೇನು?

ದರ್ಶನ್ ಅವರು, ಈ ಟೊಯೊಟಾ ವೆಲ್‌ಫೈರ್ ಕಾರನ್ನು ಒಂದೆರಡು ವರ್ಷದ ಹಿಂದೆಯೇ ಖರೀದಿಸಿದ್ದಾರೆ. ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಇದೇ ಕಾರು, ರೂ.1.20 ರಿಂದ ರೂ.1.30 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 7 ಆಸನ ಆಯ್ಕೆಯನ್ನು ಹೊಂದಿದ್ದು, ಹೆಚ್ಐ ಮತ್ತು ವಿಐಪಿ ಎಕ್ಸಿಕ್ಯುಟಿವ್ ಲೌಂಜ್ ರೂಪಾಂತರದ ಆಯ್ಕೆಯಲ್ಲಿ ದೊರೆಯುತ್ತದೆ. ಜೊತೆಗೆ ಬ್ಲ್ಯಾಕ್, ಪ್ಲಾಟಿನಂ ವೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.

ಟೊಯೊಟಾ ವೆಲ್‌ಫೈರ್ ಎಂಪಿವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 2.5 - ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. 193 PS ಗರಿಷ್ಠ ಪವರ್ ಹಾಗೂ 240 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, ಇ-ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

ಬಾಲಿವುಡ್ ನಟರಿಗಿಂತ ಕಮ್ಮಿಯಿಲ್ಲ ನಮ್ಮ ದರ್ಶನ್: ಕೋಟಿ ಬೆಲೆಯ ಟೊಯೊಟಾ ಕಾರಿನಲ್ಲಿ ಬಂದ್ರು.. ವಿಶೇಷತೆಗಳೇನು?

ಈ ಕಾರು, ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. 14 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 14 - ಕಲರ್ ಆಂಬಿಯೆಂಟ್ ಲೈಟಿಂಗ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8 - ವೇ ಚಾಲಿತ ಡ್ರೈವರ್ ಸೀಟ್.15 - ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ಡ್ಯುಯಲ್ - ಪ್ಯಾನಲ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಹೊಂದಿದೆ.

ಟೊಯೊಟಾ ವೆಲ್‌ಫೈರ್ ಎಂಪಿವಿ ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಆಲ್ - ವೀಲ್ ಡಿಸ್ಕ್ ಬ್ರೇಕ್‌ಗ, ಲೇನ್ - ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಹೊಂದಿದೆ. ಮರ್ಸಿಡಿಸ್-ಬೆಂಝ್ ವಿ ಕ್ಲಾಸ್ ಪ್ರಬಲ ಪ್ರತಿಸ್ಪರ್ಧಿಯಾಗಿದೆ.

ಇನ್ನು, ನಟ ದರ್ಶನ್ ಅವರ ಬಳಿ ಟೊಯೊಟಾ ವೆಲ್‌ಫೈರ್ ಮಾತ್ರವಲ್ಲದೇ ದುಬಾರಿ ಬೆಲೆಯ ಹಲವು ಕಾರುಗಳ ದೊಡ್ಡ ಸಂಗ್ರಹವೇ ಇದೆ. ಲ್ಯಾಂಡ್ ರೋವರ್ ಡಿಫೆಂಡರ್, ಜಾಗ್ವಾರ್, ಪೋರ್ಶೆ, ಆಡಿ ಕ್ಯೂ 7, ರೇಂಜ್ ರೋವರ್, ಮಿನಿ ಕೂಪರ್, ಹಮ್ಮರ್, ಲಂಬೋರ್ಗಿನಿ, ಫಾರ್ಚೂನರ್ , ಜೀಪ್ ಮತ್ತು ಬಿಎಂಡಬ್ಲ್ಯೂ ಕಾರುಗಳನ್ನು ಹೊಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 3, 2023, 9:51 [IST]
English summary
Bengaluru challenging star darshan spotted in toyota vellfire mpv new film pooja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+