Bengaluru Chennai Expressway: ಬೆಂಗಳೂರಿನಲ್ಲಿ ಕಾಫಿ ಕುಡಿದು ಬಸ್ ಹತ್ತಿದ್ರೆ, ಚೆನ್ನೈನಲ್ಲಿ ತಿಂಡಿ ತಿನ್ನಬಹುದು!

ನೂತನ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway) ಕಾಮಗಾರಿ ಭರದಿಂದ ಸಾಗುತ್ತಿದೆ. 2024ರ ಮಾರ್ಚ್ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ. ಹೊಸಕೋಟೆ ಮಾಲೂರು ನಡುವೆ ನಿರ್ಮಾಣ ಕಾರ್ಯಗಳು ಚುರುಕುಗೊಂಡಿವೆ. ಈ ಹೆದ್ದಾರಿಯು ಎರಡು ನಗರ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ.

ಬೆಂಗಳೂರು ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ, 262 ಕಿಲೋಮೀಟರ್ ಉದ್ದದ ಈ ಎಕ್ಸ್‌ಪ್ರೆಸ್‌ವೇಯನ್ನು ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿದೆ. ದಕ್ಷಿಣ ಭಾರತದ ಇವೆರೆಡು ಪ್ರಮುಖ ನಗರಗಳ ನಡುವೆ ಪ್ರಯಾಣದ ಅವಧಿ ಸದ್ಯ 5 - 6 ಗಂಟೆಯಿದೆ. ಅದು, 2 ಗಂಟೆ 30 ನಿಮಿಷಗಳಿಗೆ ಕಡಿಮೆಯಾಗುವ ನಿರೀಕ್ಷೆಯಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಈ ಹೆದ್ದಾರಿ ಹಾದುಹೋಗಲಿದೆ.

Bengaluru Chennai Expressway: ಬೆಂಗಳೂರಿನಲ್ಲಿ ಕಾಫಿ ಕುಡಿದು ಬಸ್ ಹತ್ತಿದ್ರೆ, ಚೆನ್ನೈನಲ್ಲಿ ತಿಂಡಿ ತಿನ್ನಬಹುದು!

ಬೆಂಗಳೂರು ಚೆನ್ನೈ ಮಧ್ಯದ ಹೊಸ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ವೇಗಮಿತಿಯನ್ನು 120 kmph ಸೀಮಿತಗೊಳಿಸಬಹುದು ಎಂದು ಹೇಳಲಾಗಿದೆ. ಬೆಂಗಳೂರಿಂದ ಚೆನ್ನೈ ತಲುಪಲು ಈಗಾಗಲೇ ಎರಡು ರಸ್ತೆಗಳಿವೆ. ಮೊದಲನೆಯದು 335 ಕಿಲೋಮೀಟರ್ ಉದ್ದದ ಹಳೆ ಮದ್ರಾಸ್ ರೋಡ್ (ರಾಷ್ಟ್ರೀಯ ಹೆದ್ದಾರಿ - 75). ಇದು, ಹೊಸಕೋಟೆ, ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೂನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗುತ್ತದೆ.

ಎರಡನೆಯದು, 372 ಕಿಲೋಮೀಟರ್ ಉದ್ದದ ಮಾರ್ಗವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೊಸೂರು, ಕೃಷ್ಣಗಿರಿ, ಅಂಬೂರು, ವಾಣಿಯಂಬಾಡಿ, ವಾಲಾಜಪೇಟೆ, ವೆಲ್ಲೂರು, ರಾಣಿಪೇಟೆ, ಕಾಂಚಿಪುರಂ, ಶ್ರೀಪೆರಂಬದೂರು, ಪೂನಮಲ್ಲಿ ಮೂಲಕ ಚೆನ್ನೈ ತಲುಪುತ್ತದೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಈ ಎಕ್ಸ್‌ಪ್ರೆಸ್‌ವೇ ಇವೆರೆಡು ಹೆದ್ದಾರಿಗಳ ಮಧ್ಯ ಹಾದುಹೋಗಲಿದ್ದು, ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ಪ್ರಾರಂಭವಾಗಿ, ಚೆನ್ನೈನ ಹೊರಭಾಗದ ಶ್ರೀಪೆರಂಬದೂರಿನಲ್ಲಿ ಮುಕ್ತಾಯವಾಗಲಿದೆ.

Bengaluru Chennai Expressway: ಬೆಂಗಳೂರಿನಲ್ಲಿ ಕಾಫಿ ಕುಡಿದು ಬಸ್ ಹತ್ತಿದ್ರೆ, ಚೆನ್ನೈನಲ್ಲಿ ತಿಂಡಿ ತಿನ್ನಬಹುದು!

ಮಾಲೂರು, ಬಂಗಾರಪೇಟೆ, ಕೋಲಾರ, ವೆಂಕಟಗಿರಿ ಕೋಟಾ, ಪಲಮನೇರ್, ಬಂಗಾರುಪಾಲೆಂ, ಚಿತ್ತೂರು ಮತ್ತು ರಾಣಿಪೇಟೆ ಮೂಲಕ ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದೆ. 2022ರಲ್ಲಿ ಬೆಂಗಳೂರು ಚೆನ್ನೈ ನಡುವೆ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಅಡಿಗಲ್ಲು ಹಾಕಿದ್ದರು. ಈ ಯೋಜನೆಗೆ ಒಟ್ಟು, ರೂ.17,000 ಕೋಟಿ ವೆಚ್ಚವಾಗಲಿದೆ. ಎಂದು ಅಂದಾಜಿಸಲಾಗಿದೆ.

ಬೆಂಗಳೂರು - ಮಾಲೂರು ನಡುವೆ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಮಾಡಲು ರೂ.1,160 ಕೋಟಿ ಖರ್ಚುಗಲಿದೆ ಎಂದು ಲೆಕ್ಕಾಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮೂರು ಹಂತಗಳಲ್ಲಿ ಈ ಹೆದ್ದಾರಿ ಕಾಮಗಾರಿಯನ್ನು ಮಾಡುತ್ತಿದ್ದು, ಇದೊಂದು, ಪ್ರವೇಶ ನಿಯಂತ್ರಿತ (access-controlled) ಸಿಗ್ನಲ್ ಮುಕ್ತ (signal-free) ಎಲಿವೇಟೆಡ್ ಹೆದ್ದಾರಿಯಾಗಿದ್ದು, 2024ರ ಆಗಸ್ಟ್ ತಿಂಗಳಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು.

ಆದರೆ, ಕಾಮಗಾರಿಯು ವೇಗವನ್ನು ಪಡೆದುಕೊಂಡಿರುವುದರಿಂದ ನಾಲ್ಕು ತಿಂಗಳು ಬೇಗನೇ ಅಂದರೆ, 2024 ಮಾರ್ಚ್ ತಿಂಗಳಲ್ಲಿಯೇ ಪೂರ್ಣ ಗೊಳ್ಳುವ ಸಾಧ್ಯತೆಯಿದೆ. ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಕೈಗಾರಿಕೆಗಳು ಅಭಿವೃದ್ಧಿಯಾಗಲಿವೆ. ಪ್ರಯಾಣದ ಅವಧಿ ತುಂಬಾ ಕಡಿಮೆಯಾಗಿರುವುದರಿಂದ ಸಾರ್ವಜನಿಕರಿಗೂ ದೊಡ್ಡಮಟ್ಟದ ಅನುಕೂಲವಾಗಲಿದೆ. ಈ ಹೆದ್ದಾರಿ ಚೆನ್ನೈ ಬಂದರಿಗೆ ಹತ್ತಿರವಾಗಿರುವುದರಿಂದ ಕರ್ನಾಟಕದಲ್ಲಿ ರಫ್ತು ಚಟುವಟಿಕೆಗಳಿಗೆ ಉತ್ತೇಜನ ದೊರೆಯುತ್ತದೆ.

ಇನ್ನು, ಬೆಂಗಳೂರು ಪುಣೆ ನಡುವೆ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧತೆಯನ್ನು ನಡೆಸುತ್ತಿದೆ. ಅದಕ್ಕಾಗಿ, ವಿವಿಧ ಇಲಾಖೆಗಳ ಅನುಮತಿಗೆ ಮನವಿ ಸಲ್ಲಿಸಿದೆ. 719.26 ಕಿಲೋಮೀಟರ್ ಉದ್ದದ ಈ ರಸ್ತೆಯು ಕರ್ನಾಟಕದ 9 ಜಿಲ್ಲೆಗಳು ಮಹಾರಾಷ್ಟ್ರದ 3 ಜಿಲ್ಲೆಗಳಲ್ಲಿ ಹಾದುಹೋಗಲಿದೆ. ಇದು ಬಹುಕೋಟಿ ವೆಚ್ಚದ ಕಾಮಗಾರಿಯಾಗಿದ್ದು, ರೂ.55,072.54 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, July 29, 2023, 10:27 [IST]
English summary
Bengaluru chennai expressway operational march 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+