Train: ಬೆಂಗಳೂರು-ಚೆನ್ನೈ, ರೈಲಿನಲ್ಲಿ ಇನ್ನೂ 4 ಗಂಟೆಯಷ್ಟೇ.. ಒಂದೇ ದಿನದಲ್ಲಿ ಸಮುದ್ರ ನೋಡಿಬರಬಹುದು!

ಬೆಂಗಳೂರು - ಚೆನ್ನೈ (Bengaluru - Chennai) ಸೇರಿದಂತೆ ಈ ಮಾರ್ಗದಲ್ಲಿ ರೈಲಿನಲ್ಲಿ (Train) ಸಂಚರಿಸುವವರಿಗೆ ರೈಲ್ವೆ ಇಲಾಖೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಶೀಘ್ರದಲ್ಲಿಯೇ ಇವೆರೆಡು ನಗರಗಳ ನಡುವಿನ ಪ್ರಯಾಣದ ಅವಧಿಯು 20 ನಿಮಿಷ ಕಡಿಮೆಯಾಗಲಿದೆ ಎಂದು ವರದಿಯಾಗಿದೆ. ಇಲ್ಲಿದೆ ಮಾಹಿತಿ.

ಅರಕ್ಕೋಣಂ ಮತ್ತು ಜೋಲಾರ್‌ಪೇಟೆ ನಡುವಿನ 144 ಕಿಮೀ ರೈಲ್ವೆ ಮಾರ್ಗದಲ್ಲಿ ರೈಲುಗಳ ವೇಗವನ್ನು ಗಂಟೆಗೆ 110 ಕಿಮೀ ಯಿಂದ 130 ಕಿಮೀಗೆ ಹೆಚ್ಚಿಸಲು ಇಲಾಖೆಯು ಒಪ್ಪಿಗೆ ಸೂಚಿಸಿದ್ದು, ಟ್ರ್ಯಾಕ್‌ ಮತ್ತು ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸಿದ ನಂತರ ಈ ಮಾರ್ಗದಲ್ಲಿ ರೈಲುಗಳು ವೇಗವಾಗಿ ಚಲಿಸಲಿವೆ. ಈಗಾಗಲೇ, ಚೆನ್ನೈ - ಅರಕ್ಕೋಣಂ ಮಾರ್ಗವನ್ನು ರೈಲುಗಳ ಸ್ವೀಡ್ ಹೆಚ್ಚಿಸಲು ನವೀಕರಿಸಲಾಗಿದೆ.

Train: ಬೆಂಗಳೂರು-ಚೆನ್ನೈ, ರೈಲಿನಲ್ಲಿ ಇನ್ನೂ 4 ಗಂಟೆಯಷ್ಟೇ.. ಒಂದೇ ದಿನದಲ್ಲಿ ಸಮುದ್ರ ನೋಡಿಬರಬಹುದು!

ಸದ್ಯ, ಬೆಂಗಳೂರು ಚೆನ್ನೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 4 ಗಂಟೆ 25 ನಿಮಿಷಗಳ ಪ್ರಯಾಣದ ಅವಧಿಯನ್ನು ಹೊಂದಿದೆ. ಅದು ಮುಂಬರುವ ದಿನಗಳಲ್ಲಿ 4 ಗಂಟೆಗೆ ಇಳಿಯಲಿದೆ. ಅದೇ ರೀತಿಯಲ್ಲಿ ಶತಾಬ್ದಿ ಹಾಗೂ ಬೃಂದಾವನ ಎಕ್ಸ್‌ಪ್ರೆಸ್‌ ರೈಲುಗಳ ಸಮಯವು ಕಡಿತಗೊಳ್ಳಲಿದ್ದು, ಈ ಕುರಿತಂತೆ ಸಂಬಂಧಪಟ್ಟ ರೈಲ್ವೆ ವಿಭಾಗ ಹಾಗೂ ಲೋಕೋ ಪೈಲಟ್‌ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಬಹುತೇಕ, ,ಟ್ರ್ಯಾಕ್‌ ಮತ್ತು ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸಿರುವ ಕಾಮಗಾರಿ ಮುಕ್ತಾಯಗೊಂಡಿದ್ದು, ಮುಂದಿನ ವಾರದಿಂದ ಅರಕ್ಕೋಣಂ ಹಾಗೂ ಜೋಲಾರ್‌ಪೇಟೆ ಮಾರ್ಗದಲ್ಲಿ ಗಂಟೆಗೆ 130 ಕಿಮೀ ವೇಗದಲ್ಲಿ ಸಂಚರಿಸಲು ಎಲ್‌ಎಚ್‌ಬಿ ಕೋಚ್‌ಗಳನ್ನು (ಕೆಂಪು ಬಣ್ಣ) ಹೊಂದಿರುವ 124 ರೈಲುಗಳಿಗೆ ಅನುಮತಿಸಲಾಗಿದೆ. ಆದರೆ, ಐಸಿಎಫ್ ಡಿಸೈನ್ ಕೋಚ್‌ (ನೀಲಿ ಬಣ್ಣ) ಹೊಂದಿರುವ ರೈಲುಗಳ ವೇಗವನ್ನು 110 ಕಿಮೀ ಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

Train: ಬೆಂಗಳೂರು-ಚೆನ್ನೈ, ರೈಲಿನಲ್ಲಿ ಇನ್ನೂ 4 ಗಂಟೆಯಷ್ಟೇ.. ಒಂದೇ ದಿನದಲ್ಲಿ ಸಮುದ್ರ ನೋಡಿಬರಬಹುದು!

ಕೆಲವೇ ದಿನಗಳಲ್ಲಿ ಬೆಂಗಳೂರು, ಕೊಯಮತ್ತೂರು, ತಿರುವನಂತಪುರಂ, ಕೊಚ್ಚಿ, ಕೋಝಿಕ್ಕೋಡ್, ಮಂಗಳೂರು ಹಾಗೂ ಮುಂಬೈ ಸೇರಿದಂತೆ ಇತರೆ, ರೈಲು ಮಾರ್ಗಗಳ ಪ್ರಯಾಣದ ಅವಧಿಯು ಕಡಿಮೆಯಾಗಲಿದೆ. ಇದಕ್ಕೆ ಕಾರಣವು ಇದ್ದು, ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳು ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿವೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಹಾಗೂ ಕೊಯಮತ್ತೂರಿಗೆ ತೆರಳುವ ವಂದೇ ಭಾರತ್ ರೈಲುಗಳು, ಈಗಾಗಲೇ ಚೆನ್ನೈ ಮತ್ತು ಅರಕ್ಕೋಣಂ ಮಾರ್ಗದಲ್ಲಿ ಗಂಟೆಗೆ 130 ಕಿಮೀ ವೇಗದಲ್ಲಿ ಸಂಚರಿಸುತ್ತಿವೆ. ಸದ್ಯ, ಟ್ರ್ಯಾಕ್‌ ಮತ್ತು ಸಿಗ್ನಲ್‌ಗಳನ್ನು ಜೋಲಾರ್‌ಪೇಟೆವರೆಗೆ ಮೇಲ್ದರ್ಜೆಗೇರಿಸುರುವುದರಿಂದ ವಂದೇ ಭಾರತ್ ಮಾತ್ರವಲ್ಲದೆ, ಇತರೆ ರೈಲುಗಳ ವೇಗ ಇನ್ನಷ್ಟು ಅಧಿಕಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಹೇಳಿವೆ.

ಕಳೆದ ವರ್ಷ, ಚೆನ್ನೈ-ರೇಣಿಗುಂಟಾ, ಚೆನ್ನೈ-ಗುಡೂರು ವಿಭಾಗದಲ್ಲಿ ರೈಲು ಹಳಿಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, 2,000 ಕಿಮೀ ಮಾರ್ಗದಲ್ಲಿ ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ. ಅದರಲ್ಲೂ 44 ರೈಲುಗಳನ್ನು ಗರಿಷ್ಠ ಸ್ವೀಡ್ ನಲ್ಲಿ ಚಲಿಸಲು ಅನುಮತಿಲಾಗಿದೆ. ರೈಲ್ವೆ ಇಲಾಖೆ, ರೈಲುಗಳ ವೇಗವನ್ನು ಹೆಚ್ಚಿಸುವುದರಿಂದ ಎರಡು ನಗರಗಳ ನಡುವೆ ಪ್ರಯಾಣದ ಅವಧಿ ಕಡಿಮೆಯಾಗಲಿದ್ದು, ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಬೆಳವಣಿಗೆಯಾಗುತ್ತದೆ.

ಇನ್ನು, ಬೆಂಗಳೂರು ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ, 262 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇಯನ್ನು ಭಾರತಮಾಲಾ ಯೋಜನೆಯಡಿ ಇವೆರೆಡು ನಗರಗಳ ನಡುವೆ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿದ್ದು, ಲೋಕಸಭಾ ಚುನಾವಣಾ ವೇಳೆಗೆ ಲೋಕಾರ್ಪಣೆಗೊಳ್ಳಬಹುದು. ಇದರಿಂದ ಈಗಿರುವ 5 - 6 ಗಂಟೆ ಪ್ರಯಾಣದ ಅವಧಿಯು 2 ಗಂಟೆ 30 ನಿಮಿಷಗಳಿಗೆ ಇಳಿಕೆಯಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, August 18, 2023, 14:39 [IST]
English summary
Bengaluru chennai will take 4 hours train soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+