ನಾಳೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ: ಬೆಂಗಳೂರಿಂದ ಧಾರವಾಡಕ್ಕೆ ಜಸ್ಟ್ 6 ಗಂಟೆ 25 ನಿಮಿಷ

ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವಿನ ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್‌ಗೆ ನಾಳೆ (ಜೂನ್ 27) ಚಾಲನೆ ದೊರೆಯಲಿದೆ. ಈ ಬಗ್ಗೆ ನೈಋತ್ಯ ರೈಲ್ವೆ (SWR) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ರೈಲಿನ ವೇಳಾಪಟ್ಟಿ, ನಿಲುಗಡೆ ನಿಲ್ದಾಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಳೆ ಬೆಳಗ್ಗೆ 10:30ಕ್ಕೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಧಾರವಾಡದಲ್ಲಿ ಚಾಲನೆ ದೊರೆಯಲಿದೆ. ಉದ್ಘಾಟನಾ ವಂದೇ ಭಾರತ್ ವಿಶೇಷ ರೈಲು (07305) 10.35ಕ್ಕೆ ತನ್ನ ಸಂಚಾರನ್ನು ಆರಂಭಿಸಲಿದ್ದು, ಸಂಜೆ 7.05ಕ್ಕೆ ಬೆಂಗಳೂರು ತಲುಪಲಿದೆ. ಈ ರೈಲು ನಾಲ್ಕು ಮೋಟಾರ್ ಕಾರ್, ಎರಡು ಟ್ರೇಲಿಂಗ್ ಕಾರ್ ಹಾಗೂ ಹಲವು ಡ್ರೈವಿಂಗ್ ಟ್ರೈಲರ್ ಕಾರ್ ಗಳನ್ನು ಹೊಂದಿರಲಿದೆ.

ನಾಳೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ: ಬೆಂಗಳೂರಿಂದ ಧಾರವಾಡಕ್ಕೆ ಜಸ್ಟ್ 6 ಗಂಟೆ 25 ನಿಮಿಷ

ಜೂನ್ 28 ರಿಂದ ಇತರೆ ರೈಲುಗಳಂತೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಹ ಕಾರ್ಯಚರಣೆ ನಡೆಸಲಿದೆ ಎಂದು ಮೂಲಗಳು ಹೇಳಿವೆ. ಆದರೆ, ರೈಲ್ವೆ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಧಾರವಾಡ (489 ಕಿಲೋಮೀಟರ್) ತಲುಪಲು ಕೇವಲ 6 ಗಂಟೆ 25 ನಿಮಿಷ ಸಮಯಾವಕಾಶ ತೆಗೆದುಕೊಳ್ಳಲಿದೆ.

ಅದರಲ್ಲೂ ಈ ರೈಲು ಸರಿ ಸುಮಾರು 350 ಕಿಲೋಮೀಟರ್ ವರೆಗೆ 110 kmph ವೇಗದಲ್ಲಿ ಚಲಿಸುತ್ತದೆ. ಬಹುತೇಕ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ ಗಾಡಿ ಸಂಖ್ಯೆ 20661 (ಕೆಎಸ್ಆರ್ ಬೆಂಗಳೂರು - ಧಾರವಾಡ) ಮತ್ತು 20662 (ಧಾರವಾಡ - ಕೆಎಸ್ಆರ್ ಬೆಂಗಳೂರು) ಇರುತ್ತದೆ. ನಾಳೆಯೊಳಗೆ ಈ ಕುರಿತು ಖಚಿತ ವಿವರ ಸಿಗಲಿದೆ.

ಹೊಸದಾಗಿ ಸಂಚಾರ ಶುರು ಮಾಡಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮಂಗಳವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳಲ್ಲಿಯೂ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರು - ಧಾರವಾಡ ನಡುವೆ ಓಡಾಟ ನಡೆಸುವ ಈ ರೈಲು, ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಸಂಚಾರ ಆರಂಭಿಸಿದರೆ, ಯಶವಂತಪುರ, ದಾವಣಗೆರೆ ಹಾಗೂ ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಿ ಧಾರವಾಡ ತಲುಪಲಿದೆ.

ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯನ್ನು ತಿಳಿಯುವುದಾದರೆ, ಈ ರೈಲು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು 12.10ಕ್ಕೆ ಧಾರವಾಡವನ್ನು ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 1.15ಕ್ಕೆ ಸಂಚಾರ ಆರಂಭಿಸಿ, ರಾತ್ರಿ 7.45ಕ್ಕೆ ಬೆಂಗಳೂರಿಗೆ ಬರಲಿದೆ. ಈ ರೈಲಿನ ಸ್ವಚ್ಛತೆ ಹಾಗೂ ನಿರ್ವಹಣೆ ಕಾರ್ಯಗಳು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಮಾಡಲಾಗುತ್ತದೆ.

ಇದು 3+2 ಕಾನ್ಫಿಗರೇಶನ್‌ ಆನಸ ಆಯ್ಕೆಯಿರುವ ಏಳು ಬೋಗಿ ಹಾಗೂ 2+2 ಕಾನ್ಫಿಗರೇಶನ್‌ ಸೀಟ್ ಸೆಟಪ್ ಇರುವ ಒಂದು ಎಕ್ಸಿಕ್ಯೂಟಿವ್ ಬೋಗಿಯನ್ನು ಹೊಂದಿರಲಿದ್ದು, ಪ್ರಯಾಣ ದರವು ಪ್ರತಿ ವ್ಯಕ್ತಿಗೆ ಸುಮಾರು ರೂ.1,000 ಇರಬಹುದು ಎಂದು ಹೇಳಲಾಗಿದೆ. ಆದರೆ, ರೈಲ್ವೆ ಇಲಾಖೆಯಿಂದ ಸದ್ಯಕ್ಕೆ ಯಾವುದೇ ಮಾಹಿತಿಯಿಲ್ಲ ಟಿಕೆಟ್ ದರದಲ್ಲಿ ಕೊಂಚ ವ್ಯತ್ಯಾಸವಾಗಬಹುದು.

ವಂದೇ ಭಾರತ್ ಎಕ್ಸ್‌ಪ್ರೆಸ್‌ ವಿಶೇಷತೆಗಳ ಬಗ್ಗೆ ತಿಳಿಯುವುದಾದರೆ, ಈ ರೈಲು ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುತ್ತದೆ. ಆದರೆ, ಸುರಕ್ಷತೆ ದೃಷ್ಟಿಯಿಂದ ಅದನ್ನು 160 ಕಿಮೀ.ಗೆ ಸೀಮಿತಗೊಳಿಸಲಾಗಿದೆಯಂತೆ. ಈ ರೈಲಿಗೆ ಪ್ರತೇಕ ಎಂಜಿನ್ ಇಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ವೈ-ಫೈ ಸೌಲಭ್ಯವಿದ್ದು, ಸಂಪೂರ್ಣ ಎಸಿಯಿರುವ ಈ ರೈಲಿನ ಸೀಟುಗಳು ಆರಾಮದಾಯವಾಗಿದ್ದು, ಜೈವಿಕ ಶೌಚಾಲಯವನ್ನು ಹೊಂದಿದೆ.

Article Published On: Monday, June 26, 2023, 13:38 [IST]
English summary
Bengaluru dharwad vande bharat express launch june 27 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+