ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಇಂದು ಉದ್ಘಾಟನೆ: ವಿಶೇಷತೆಗಳೇನು?
ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಜುಲೈ 17(ಇಂದಿನಿಂದ)ರಿಂದ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಬೆಂಗಳೂರು ಮೆಟ್ರೋದ ಹಳದಿ ಮಾರ್ಗದಲ್ಲಿ (ಆರ್.ವಿ ರಸ್ತೆ-ಬೊಮ್ಮಸಂದ್ರ) ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಟಿ)ವರೆಗೆ 3.3 ಕಿ.ಮೀ ಉದ್ದದ ಫ್ಲೈಓವರ್‌ನ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಫ್ಲೈಓವರ್ ಕೆಲ ದಿನಗಳ ಹಿಂದೆಯೇ ಸಿದ್ಧವಾಗಿದ್ದರೂ, ಅಧಿಕೃತ ಉದ್ಘಾಟನೆ ಬಾಕಿ ಇರುವ ಕಾರಣ ಸಂಚಾರಕ್ಕೆ ಅವಕಾಶವಿರಲಿಲ್ಲ. ಕೊನೆಗೂ ಇಂದು ಮಧ್ಯಾಹ್ನ 3 ಗಂಟೆಗೆ ರಾಗಿಗುಡ್ಡದ ಬಳಿ ಪ್ರಾಯೋಗಿಕ ಸಂಚಾರಕ್ಕಾಗಿ ಮೇಲ್ಸೇತುವೆಯನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ.
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್ ತಪ್ಪಿಸಲು ರಾಗಿಗುಡ್ಡದಿಂದ HSR ಲೇಔಟ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ (ಹೊಸೂರು ರಸ್ತೆ) ಕಡೆಗೆ ಹೋಗುವ ವಾಹನ ಚಾಲಕರಿಗೆ 3 ಕಿ.ಮೀ ರಸ್ತೆ ಫ್ಲೈಓವರ್ ಸಹಾಯ ಮಾಡಲಿದೆ. ಸಿಲ್ಕ್ ಬೋರ್ಡ್ ನಲ್ಲಿ ರ್ಯಾಂಪ್‌ಗಳನ್ನು ತೆರೆಯುವುದರಿಂದ ಬಿಟಿಎಂ ಲೇಔಟ್ ಕಡೆಯಿಂದ ಬರುವ ವಾಹನಗಳಿಗೆ ಸಿಗ್ನಲ್‌ಗಳನ್ನು ತಪ್ಪಿಸಲು ಸಹಾಯವಾಗಲಿದೆ.

ಮೇಲ್ಸೇತುವೆಯ ಕೆಳ ಡೆಕ್ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಿದ್ದು, ಮೇಲಿನ ಡೆಕ್ ಅನ್ನು ನಮ್ಮ ಮೆಟ್ರೋ ಬಳಕೆಗೆ ನಿಯೋಜಿಸಲಾಗಿದೆ. ನೆಲಮಟ್ಟದಿಂದ ಎಂಟು ಮೀಟರ್ ಎತ್ತರದಲ್ಲಿರುವ ಈ ರಸ್ತೆ ಮೇಲ್ಸೇತುವೆಯು ಮೇಲ್ಮೈಯಿಂದ 16 ಮೀಟರ್ ಎತ್ತರದಲ್ಲಿರುವ ಮೆಟ್ರೋ ವಯಾಡಕ್ಟ್‌ಗೆ ಸಮಾನಾಂತರವಾಗಿ ಚಲಿಸುತ್ತದೆ. ಜೈಪುರ, ನಾಗ್ಪುರ ಮತ್ತು ಮುಂಬೈನಂತಹ ನಗರಗಳಲ್ಲಿ ಇದೇ ರೀತಿಯ ರಸ್ತೆ ಮತ್ತು ಮೆಟ್ರೋ ರಚನೆಗಳು ಕಾರ್ಯನಿರ್ವಹಿಸುತ್ತಿವೆ.
ಅಧಿಕಾರಿಗಳು ಫ್ಲೈಓವರ್ ಮೇಲೆ ಕಾರುಗಳು, ಬೈಕುಗಳು ಮತ್ತು ಆಟೋಗಳಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆಯಿದೆ. ಬಸ್ಸುಗಳು ಮತ್ತು ಭಾರಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸುವ ಸಾಧ್ಯತೆಯಿದೆ. ಬಿಎಂಆರ್‌ಸಿಎಲ್ ವೇಗದ ಮಿತಿಯನ್ನು ಗಂಟೆಗೆ 40 ಕಿ.ಮೀಗೆ ಮಿತಿಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಇತ್ತ ಫ್ಲೈಓವರ್ ಜೊತೆಗೆ ಹಾದುಹೋಗುವ ಹಳದಿ ಮಾರ್ಗದ ಮೆಟ್ರೋ ಇನ್ನೂ ಕಾರ್ಯಾರಂಭ ಮಾಡಿಲ್ಲ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಾರ, ಇದು ಈ ವರ್ಷದ ಡಿಸೆಂಬರ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಿಎಸ್‌ಟಿ ಜಂಕ್ಷನ್‌ನಲ್ಲಿ (ಎ, ಬಿ, ಸಿ, ಡಿ ಮತ್ತು ಇ) ಐದು ಲೂಪ್‌ಗಳು ಮತ್ತು ರ್ಯಾಂಪ್‌ಗಳನ್ನು ನಿರ್ಮಿಸುತ್ತಿದೆ.
ಎ, ಬಿ ಮತ್ತು ಸಿ ರ್ಯಾಂಪ್‌ಗಳು ರಾಗಿಗುಡ್ಡ/ ಬಿಟಿಎಂ ಲೇಔಟ್ ಕಡೆಯಿಂದ ಕೆ.ಆರ್.ಪುರಂ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸಿದರೆ, ಡಿ ಮತ್ತು ಇ ರಾಂಪ್ ಗಳು ಕೆ.ಆರ್.ಪುರಂನಿಂದ ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡಕ್ಕೆ ಸಂಪರ್ಕ ಕಲ್ಪಿಸುತ್ತವೆ. ಎ, ಬಿ ಮತ್ತು ಸಿ ರ್ಯಾಂಪ್‌ಗಳು ಈಗ ಪೂರ್ಣಗೊಂಡಿದ್ದು, ರಾಂಪ್ ಡಿ ಮತ್ತು ಇ ಜೂನ್ 2025 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಸಿಎಸ್‌ಟಿ ಎರಡು ಮೆಟ್ರೋ ನಿಲ್ದಾಣಗಳನ್ನು ಹೊಂದಿರುತ್ತದೆ: ಹೊರ ವರ್ತುಲ ರಸ್ತೆಯಲ್ಲಿ ಬ್ಲೂ ಲೈನ್ (ಸಿಎಸ್‌ಟಿ-ಕೆಆರ್ ಪುರಂ) ಮತ್ತು ಹಳದಿ ಲೈನ್ (ಆರ್‌ವಿ ರಸ್ತೆ-ಬೊಮ್ಮಸಂದ್ರ). ಮೂಲತಃ ಏಕೀಕರಣಕ್ಕಾಗಿ ಯೋಜಿಸಲಾಗಿದ್ದ ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ನಿಲ್ದಾಣಗಳ ನಡುವೆ ಅಂತರ-ಮಾರ್ಗ ಪ್ರವೇಶಕ್ಕೆ ಅನುಕೂಲವಾಗುವಂತೆ ಸುಮಾರು 355 ಮೀಟರ್ ಉದ್ದದ ಟ್ರಾವೆಲೇಟರ್ ಅನ್ನು ಕೂಡ ಪ್ರಸ್ತಾಪಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








