Bengaluru: ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧ.. ಎಲ್ಲಿ, ಟ್ರಾಫಿಕ್ ಕಿರಿಕಿರಿ ಇರಲ್ಲ!

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ (Bengaluru First Double-Decker Flyover) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್ - BMRCL) ಹೇಳಿದೆ. ವಾಹನ ಸವಾರರಿಗೆ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿದ್ದ ಕಿರಿಕಿರಿಯನ್ನು ತಪ್ಪಿಸುವ ಉದ್ದೇಶದಿಂದ ಈ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. 3.3 ಕಿಮೀ ಉದ್ದದ ನೂತನ ಫ್ಲೈಓವರ್, ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿರುವ (ಆರ್​​ವಿ ರಸ್ತೆ ಹಾಗೂ ಬೊಮ್ಮಸಂದ್ರ) ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಇದ್ದು, ದಕ್ಷಿಣ ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ ಮೇಲ್ಸೇತುವೆ ಕೆಳ ಅಂತಸ್ತು (Lower Deck) ನೆಲಮಟ್ಟದಿಂದ 8-ಮೀಟರ್ ಎತ್ತರದಲ್ಲಿದ್ದು, ಅಲ್ಲಿ ಅಚ್ಚುಕಟ್ಟಾದ ರಸ್ತೆಯಿದೆ. ಬೈಕ್, ಕಾರು ಸೇರಿದಂತೆ ಇನ್ನಿತರೇ ವಾಹನಗಳು ಓಡಾಟವನ್ನು ನಡೆಸಬಹುದು. ಮೇಲಿನ ಅಂತಸ್ತು (Upper Deck) 16-ಮೀಟರ್ ಎತ್ತರದಲ್ಲಿದ್ದು, ಮೆಟ್ರೋ ರೈಲಿನ ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ. ಹಿರಿಯ ಅಧಿಕಾರಿಗಳು ಅಂತಿಮ ತಪಾಸಣೆ ನಡೆಸಬೇಕಾಗಿದ್ದು, ಆ ಬಳಿಕ ಜೂನ್ 15ರಿಂದ ಅಥವಾ ಮುಂಬರುವ ತಿಂಗಳು ಫ್ಲೈಓವರ್‌ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಯಿದೆ.

Bengaluru First Double-Decker Flyover Ready Where What Are The Specialities

ಬಿಎಂಆರ್‌ಸಿಎಲ್ ಹೆಚ್ಚುವರಿಯಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿ ವಿವಿಧ ರಸ್ತೆಗಳನ್ನು ಸಂಪರ್ಕಿಸಲು 5 ರ‍್ಯಾಂಪ್‌ಗಳನ್ನು ನಿರ್ಮಿಸುತ್ತಿದೆ. ಈ ರ‍್ಯಾಂಪ್‌ಗಳನ್ನು ಎ, ಬಿ, ಸಿ, ಡಿ ಮತ್ತು ಇ ಎಂದು ವಿಂಗಡಿಸಲಾಗಿದೆ. ಎ, ಬಿ ಹಾಗೂ ಸಿ ರ‍್ಯಾಂಪ್‌ಗಳು ಕೆಆರ್ ಪುರಂ ಮತ್ತು ಹೊಸೂರು ರಸ್ತೆಯನ್ನು ರಾಗಿಗುಡ್ಡ/ ಬಿಟಿಎಂ ಲೇಔಟ್ ಕಡೆಯಿಂದ ಸಂಪರ್ಕಿಸಿವೆ.

ಡಿ ಹಾಗೂ ಇ ರ‍್ಯಾಂಪ್‌ಗಳು ಕೆಆರ್ ಪುರಂನಿಂದ ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡಕ್ಕೆ ಸಂಪರ್ಕವನ್ನು ಕಲ್ಪಿಸುತ್ತವೆ. ಎ, ಬಿ ಹಾಗೂ ಸಿ ರ‍್ಯಾಂಪ್‌ಗಳು ಈ ತಿಂಗಳು (ಜೂನ್‌) ವಾಹನ ಸಂಚಾರಕ್ಕೆ ತೆರಯಲಿವೆ. ಡಿ ಮತ್ತು ಇ ರ‍್ಯಾಂಪ್‌ಗಳ ಕಾಮಗಾರಿ ಜೂನ್ 2025ರೊಳಗೆ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್ ಯಶವಂತ್ ಚವಾಣ್ ಅವರು ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಈಗಾಗಲೇ ರಾಜಸ್ಥಾನದ ಜೈಪುರ, ಮಹಾರಾಷ್ಟ್ರದ ನಾಗಪುರ ಮತ್ತು ಮುಂಬೈನಂತಹ ದೊಡ್ಡ ನಗರಗಳಲ್ಲಿ ಇದೇ ರೀತಿಯ ರೋಡ್-ಕಮ್-ಮೆಟ್ರೋ ಫ್ಲೈಓವರ್‌ಗಳು ಬಳಕೆಯಲ್ಲಿವೆ. ಈ ಮೇಲ್ಸೇತುವೆಯಿಂದ ರಾಗಿಗುಡ್ಡ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಪೀಕ್ ಅವರ್‌ಗಳಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಫ್ಲೈಓವರ್‌ ಕಾಮಗಾರಿಯು 2021ರ ಅಕ್ಟೋಬರ್ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ನಾನಾ ಕಾರಣಗಳಿಂದಾಗಿ ವಿಳಂಬವಾಗಿದೆ.

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು 18 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಿಸಲು ಬಿವಿಎಂಪಿ ಕೂಡ ಮುಂದಾಗಿದೆ. ಈ ಕಾಮಗಾರಿ ನಡೆಸಲು ಸರಿ ಸುಮಾರು ರೂ.8,100 ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಉದ್ದೇಶಿತ ಸುರಂಗ ರಸ್ತೆಯು ಹೆಬ್ಬಾಳದಲ್ಲಿರುವ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಸಂಪರ್ಕವನ್ನು ಕಲ್ಪಿಸಲಿದೆ.

ಸದ್ಯ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಪ್ರಯಾಣಿಸಲು 1 ಗಂಟೆಗೂ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಸುರಂಗ ರಸ್ತೆ ನಿರ್ಮಾಣದ ನಂತರ, ಅದು 20 ರಿಂದ 25 ನಿಮಿಷಗಳಿಗೆ ಕಡಿಮೆಯಾಗಲಿದೆ. ಈ ಸುರಂಗದ ಎತ್ತರವು 10 ಮೀಟರ್ ಇರಲಿದ್ದು, ವಾಹನಗಳು ಗಂಟೆಗೆ 40 ರಿಂದ 60 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಓಡಾಟ ನಡೆಸಲು ಸಾಧ್ಯವಾಗುವಂತೆ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Money Control

Article Published On: Thursday, June 13, 2024, 19:54 [IST]
English summary
Bengaluru first double decker flyover ready where what are the specialities
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+