Bengaluru: ನಂದಿಬೆಟ್ಟಕ್ಕೆ ಹೋಗುವವರಿಗೆ ಸಿಹಿಸುದ್ದಿ.. ಮೊದಲ ಬಾರಿಗೆ ಡಿ.11ರಿಂದ ಚಲಿಸಲಿವೆ ಎಲೆಕ್ಟ್ರಿಕ್ ರೈಲುಗಳು
ಬೆಂಗಳೂರಿನಿಂದ (Bengaluru) ವಾರಾಂತ್ಯದಲ್ಲಿ ನಂದಿ ಬೆಟ್ಟಕ್ಕೆ (Nandi Hills) ಪ್ರವಾಸಕ್ಕೆ ತೆರಳುವವರಿಗೆ ಇಲ್ಲಿದೆ ಸಿಹಿಸುದ್ದಿ. ಡಿಸೆಂಬರ್ 11 (December 11)ರಿಂದ ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ಮೆಮು (Memu) ರೈಲುಗಳು ಸಂಚರಿಸಲಿವೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ನೈಋತ್ಯ ರೈಲ್ವೆ (ಎಸ್‌ಡಬ್ಲ್ಯೂಆರ್), ಡಿಸೆಂಬರ್ 11ರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಕಾರ್ಯಚರಣೆ ನಡೆಸುವ ಮೆಮು (ವಿದ್ಯುತ್ ಚಾಲಿತ) ರೈಲುಗಳನ್ನು ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ (Devanahalli - Chikkaballapur) ವಿಸ್ತರಿಸಲು ತೀರ್ಮಾನಿದೆ. ಇನ್ಮುಂದೆ, ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್ (06531/06532), ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ (06535/06583), ಮತ್ತು ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ (06593/06594) ರೈಲುಗಳು ಓಡಾಟ ನಡೆಸಲಿದ್ದು, ನಂದಿ ಹಾಲ್ಟ್ ನಿಲ್ದಾಣದಲ್ಲಿಯೂ ನಿಲುಗಡೆಯಾಗುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಯಲಹಂಕ ಮತ್ತು ಚಿಕ್ಕಬಳ್ಳಾಪುರ (Yelahanka - Chikkaballapur) ಮಧ್ಯೆ ವಿದ್ಯುದ್ದೀಕರಣ ಕಾಮಗಾರಿ 2022ರ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಈ ಮಾರ್ಗದಲ್ಲಿ ನಾನಾ ಕಾರಣಗಳಿಗೆ (ಎಲೆಕ್ಟ್ರಿಕ್) ಮೆಮೊ ರೈಲು ಪರಿಚಯಸುವುದು ತಡವಾಗಿದೆ. ಪ್ರಸ್ತುತ, ಇಲ್ಲಿ ಕೆಎಸ್ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ (06387/06388), ಕೋಲಾರ-ಕೆಎಸ್ಆರ್ ಬೆಂಗಳೂರು ಡೆಮು (ಡೀಸೆಲ್) ರೈಲುಗಳು ಕಾರ್ಯಚರಣೆ ನಡೆಸುತ್ತಿದ್ದು, ನಂದಿ ಹಾಲ್ಟ್ ನಿಲ್ದಾಣದಲ್ಲಿ ನಿಲ್ಲುತ್ತಿವೆ.
ಈ ಬಗ್ಗೆ ಮಾತನಾಡಿರುವ ಪ್ರವಾಸಿಗರೊಬ್ಬರು, 'ನಂದಿ ಹಾಲ್ಟ್ ರೈಲು ನಿಲ್ದಾಣದಿಂದ ಬೆಟ್ಟದ ತಪ್ಪಲಿನಲ್ಲಿರುವ ಭೋಗನಂದೀಶ್ವರ ದೇವಸ್ಥಾನಕ್ಕೆ ಸುಮಾರು 1.4 ಕಿ.ಮೀ ದೂರವಿದೆ. ಸ್ಟೇಷನ್ ನಿಂದ ಬೆಟ್ಟದ ತುದಿ ತಲುಪಲು 15-18 ಕಿಮೀ ಅಗಲಿದ್ದು, ರೈಲು ನಿಲ್ದಾಣದಿಂದ ಬೆಟ್ಟಕ್ಕೆ ಹೋಗಲು ಬಸ್ ಅಥವಾ ಆಟೋ ವ್ಯವಸ್ಥೆಯೂ ಇಲ್ಲ. ಅವೆಲ್ಲ ಸುಧಾರಣೆಗೊಂಡರೆ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗುತ್ತದೆ' ಎಂದು ಹೇಳಿದ್ದಾರೆ.

ಮತ್ತೊಬ್ಬ ಪ್ರವಾಸಿಗ ಮಾತನಾಡಿ, 'ಬೆಳಗ್ಗೆ 6:37ರ ಸುಮಾರಿಗೆ ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ಕಣ್ತುಂಬಿಕೊಳ್ಳುವುದು ಒಂದು ರೀತಿಯ ಆನಂದ. ಈ ರೈಲು ಅಲ್ಲಿಗೆ ಕೊಂಚ ತಡವಾಗಿ ಚಲಿಸುವುದರಿಂದ ಅದ್ಬುತ ದೃಶ್ಯಗಳನ್ನು ನೋಡಲಾಗುವುದಿಲ್ಲ. ಆದರೂ ಚಿಕ್ಕಬಳ್ಳಾಪುರದ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಗೆ ಭೇಟಿ ನೀಡುವವರಿಗೆ ಹೆಚ್ಚಿನ ಸಹಾಯವಾಗಲಿದೆ' ಎಂದು ಹೇಳಿದ್ದಾರೆ.
ಎಸ್‌ಡಬ್ಲ್ಯೂಆರ್ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ಎಸ್‌ಡಬ್ಲ್ಯೂಆರ್ & ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಸಹಯೋಗದಲ್ಲಿ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎರಡು ತಿಂಗಳಲ್ಲಿ ನಂದಿ ಹಾಲ್ಟ್ ನಿಲ್ದಾಣಯೂ ಎಲ್ಲ ಕಾಮಗಾರಿಗಳು ಮುಕ್ತಾಯಗೊಳಲಿದ್ದು, ಅದು ಪೂರ್ಣಗೊಂಡ ಬಳಕ, ಬೇಗನೆ ರೈಲುಗಳನ್ನು ಓಡಿಸುತ್ತೇವೆ. ಆ ಮೇಲೆ ಪ್ರವಾಸಿಗರು ಸೂರ್ಯೋದಯವನ್ನು ವೀಕ್ಷಿಸಬಹುದು' ಎಂದು ಹೇಳಿದ್ದಾರೆ.
ಇನ್ನು, ನಂದಿ ಹಾಲ್ಟ್ (Nandi Halt) ರೈಲು ನಿಲ್ದಾಣದಲ್ಲಿ ಮೆಮೊ ರೈಲುಗಳು ನಿಲುಗಡೆಯಾಗುವುದರಿಂದ ವಾರಾಂತ್ಯದಲ್ಲಿ ಬೆಂಗಳೂರಿನಿಂದ ಬೆಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ತುಂಬಾ ಅನುಕೂಲವಾಗಲಿದೆ. ಜೊತೆಗೆ ಚಿಕ್ಕಬಳ್ಳಾಪುರವರೆಗೂ ರೈಲು ಸಂಚರಿಸುವುದರಿಂದ ಅಲ್ಲಿನ ಪ್ರಯಾಣಿಕರಿಗೆ ಹೆಚ್ಚಿನ ಸಹಾಯವಾಗಲಿದ್ದು, ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆಗಳು ಬೆಳವಣಿಗೆಯಾಗಲಿದೆ. ಕಾಲೇಜು ವಿದ್ಯಾಥಿಗಳಿಗೂ ಹೆಚ್ಚಿನ ನೆರವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications