ಪವರ್‌ಫುಲ್‌ ಲೀಡರ್ ಡಿಕೆಶಿಗೆ ಅದೃಷ್ಟ ತಂದ ಬೈಕ್‌ ಇದು! ಮೊನ್ನೆ ಸ್ಟೈಲಿಶ್ ರೈಡ್.. ಏನಿದರ ವಿಶೇಷತೆ?

ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿ ಸೋಮವಾರ (ಆಗಸ್ಟ್ 18) ನೂತನವಾಗಿ ನಿರ್ಮಿಸಿರುವ ಫ್ಲೈಓವರ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DCM D.K Shivakumar) ಅವರು ಲೋಕಾರ್ಪಣೆಗೊಳಿಸಿದರು. ಹೊಸ ಫ್ಲೈಓವರ್‌ನಿಂದ ಕೆ.ಆರ್.ಪುರದಿಂದ ಮೇಖ್ರಿ ಸರ್ಕಲ್‍ಗೆ ಕಡೆಗೆ ತೆರಳುವ ವಾಹನ ಸವಾರರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಸಂಚಾರ ದಟ್ಟಣೆ ಸಮಸ್ಯೆಗೂ ಪರಿಹಾರ ದೊರೆಯಲಿದೆ.

ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಕಾಲೇಜು ದಿನಗಳಲ್ಲಿ ಬಳಕೆ ಮಾಡುತ್ತಿದ್ದ ಯೆಜ್ಡೆ ರೋಡ್‌ಕಿಂಗ್ (Yezdi Roadking) ಬೈಕ್‌ನ್ನು ಫ್ಲೈಓವರ್‌ ಮೇಲೆ ಓಡಿಸಿದರು. ಸಿದ್ದರಾಮಯ್ಯ ಅವರು ಹಸಿರು ನಿಶಾನೆಯನ್ನು ತೋರಿಸಿದರು. ಇದನ್ನು ಕಂಡ ಡಿಕೆಶಿ ಅಭಿಮಾನಿಗಳು ಸಂಭ್ರಮಿಸಿದರು.

Bengaluru Flyover Inauguration D k Shivakumar Riding Yezdi Roadking What Are The Bike Specialities

ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಹೆಬ್ಬಾಳ ಜಂಕ್ಷನ್‌ನಲ್ಲಿ ಕೆ.ಆರ್‌.ಪುರ ಕಡೆಯಿಂದ ಮೇಖ್ರಿ ಸರ್ಕಲ್‍ಗೆ ಸಂಚರಿಸಲು ನೂತನ ಫ್ಲೈಓವರ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉದ್ಘಾಟಿಸಲಾಯಿತು. ಸಾರ್ವಜನಿಕ ವಾಹನ ಸಂಚಾರಕ್ಕೂ ಮುಕ್ತವಾಗಿದೆ. ರೂ.80 ಕೋಟಿ ವೆಚ್ಚದಲ್ಲಿ 700 ಮೀಟರ್ ಉದ್ದದ ಈ ಫ್ಲೈಓವರ್ ನಿರ್ಮಾಣದಿಂದ ಸಂಚಾರ ದಟ್ಟಣೆಯು ಶೇಕಡ 30% ನಿವಾರಣೆಯಾಗುವ ನಿರೀಕ್ಷೆಯಿದೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಹೆಬ್ಬಾಳ ಫ್ಲೈಓವರ್‌ನಲ್ಲಿ ನನ್ನ ಯೆಜ್ಡಿ ರೋಡ್‌ಕಿಂಗ್‌ ಬೈಕ್ ಸವಾರಿ ಮಾಡುವ ಮೂಲಕ ಕಾಲೇಜು ದಿನಗಳನ್ನು ಮೆಲುಕು ಹಾಕಿದೆ. ಬೆಂಗಳೂರಿನ ನಾಗರಿಕರೇ, ಜಾಗತಿಕವಾಗಿ ಗುರುತಿಸಿಕೊಂಡಿರುವ ನಮ್ಮ ಮಹಾನಗರಕ್ಕೆ ಹೊಸರೂಪವನ್ನು ನೀಡಲು ನಾವು ಬದ್ಧರಿದ್ದೇವೆ' ಎಂದಿದ್ದಾರೆ.

Bengaluru Flyover Inauguration D k Shivakumar Riding Yezdi Roadking What Are The Bike Specialities

ಕಳೆದ ವರ್ಷ ವಿಂಟೇಜ್ ಬೈಕ್‌ಗಳ ಬಗ್ಗೆ ಆಸಕ್ತಿ ಹೊಂದಿದ್ದ ಸುಪ್ರಿತ್ ಎಂಬುವರು ಈ 'ಯೆಜ್ಡಿ ರೋಡ್‌ಕಿಂಗ್‌' ಮೋಟಾರ್‌ಸೈಕಲ್‌ನ್ನು ಸಂಪೂರ್ಣವಾಗಿ ನವೀಕರಿಸಿ, ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರಿಸಿದ್ದರು. ಇದು ಸಿಎಇ 7684 ನೋಂದಣಿ ಸಂಖ್ಯೆ ಹೊಂದಿದ್ದು, ರೂ.10,400 ಮೊತ್ತಕ್ಕೆ ಡಿಕೆಶಿ ಖರೀದಿ ಮಾಡಿದ್ದರು.

ಈ ಯೆಜ್ಡೆ ರೋಡ್‌ಕಿಂಗ್ ಬೈಕ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ದೀರ್ಘಕಾಲ ಬಾಳಿಕೆ ಹಾಗೂ ಸರಳವಾದ ವಿನ್ಯಾಸಕ್ಕೂ ಹೆಸರುವಾಸಿಯಾಗಿದೆ. ಸದ್ಯ ಮಾರಾಟದಿಂದ ಸ್ಥಗಿತಗೊಳಿಸಿ ದಶಕಗಳಿವೆ. ಇದು 250 ಸಿಸಿ ಸಿಂಗಲ್ ಸಿಲಿಂಡರ್ 2-ಸ್ಟ್ರೋಕ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿತ್ತು. 18 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 24 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತಿತ್ತು. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿತ್ತು.

ಟೊಯೊಟಾ ಕ್ವಾಲಿಸ್ ಮಾಲೀಕರು ಹೌದು:

2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಮ್ಮ ಬಳಿ 'ಟೊಯೊಟಾ ಕ್ವಾಲಿಸ್' ಕಾರಿದೆ ಎಂದು ನಮೂದಿಸಿದ್ದರು. ಇದನ್ನು 2002ರಲ್ಲಿ ಖರೀದಿ ಮಾಡಿದ್ದು, ರೂ.8.35 ಲಕ್ಷ ಬೆಲೆಯನ್ನು ಹೊಂದಿದೆ.

ಟೊಯೊಟಾ ಕ್ವಾಲಿಸ್ (Toyota Qualis) ಫ್ಯಾಮಿಲಿ ಎಸ್‌ಯುವಿಯಾಗಿದೆ. ಈ ಕಾರಿನ ಮಾರಾಟವನ್ನು ನಿಲ್ಲಿಸಿ ವರ್ಷಗಳಾಗಿವೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 7+1, 9 ಹಾಗೂ 10 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿತ್ತು. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣ ಮಾಡಬಹುದಾಗಿತ್ತು.

ಈ ಕಾರು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿತ್ತು. 2.4-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 75 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 151 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತಿತ್ತು. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿತ್ತು. 13.2 ಕಿ.ಮೀ ವರೆಗೆ ಮೈಲೇಜ್ ನೀಡುತ್ತಿತ್ತು.

ಇದು 4425 ಎಂಎಂ ಉದ್ದ, 1620 ಅಗಲ ಹಾಗೂ 1880 ಎಂಎಂ ಎತ್ತರವು ಇತ್ತು. 178 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2500 ಎಂಎಂ ವೀಲ್‌ಬೇಸ್‌ನ್ನು ಹೊಂದಿತ್ತು. ಬೇಸಿಕ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡುಯಲ್ ಸ್ಟೇಜ್ ಏರ್‌ಬ್ಯಾಗ್‌ಗಳು, ಚೈಲ್ಡ್ - ಸೇಫ್ಟಿ ಲಾಕ್‌ಗಳು, ಎಂಜಿನ್ ಇಮೊಬಿಲೈಜರ್ ಹಾಗೂ ಸೆಂಟ್ರಲ್ ಲಾಕಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು.

More from DriveSpark

Article Published On: Wednesday, August 20, 2025, 14:06 [IST]
English summary
Bengaluru flyover inauguration dk shivakumar riding yezdi roadking what are the bike specialities
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+