Bengaluru: ಬೆಂಗಳೂರಿನ ಈ ಪ್ರಮುಖ ಫ್ಲೈಓವರ್ ಬಂದ್.. ಸಂಚಾರ ಅಸ್ತವ್ಯಸ್ತ, ನೀವು ಈ ದಾರಿಯಲ್ಲಿ ಹೋಗಬೇಡಿ!
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವಿಪರೀತ ಸಂಚಾರ ದಟ್ಟಣೆ ಉಂಟಾಗಿದೆ. ಬಿಎಂಆರ್‌ಸಿಎಲ್ (BMRCL) ಮೆಟ್ರೋ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆ, ಹೆಚ್‌ಎಸ್‌ಆರ್ ಲೇಔಟ್ (HSR Layout) ಸಮೀಪದ ಫ್ಲೈಓವರ್‌ನ್ನು ಬಂದ್ ಮಾಡಲಾಗಿದೆ. ಇದರಿಂದ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು, ಕೆ.ಆರ್.ಪುರಂ, ಮಾರತಹಳ್ಳಿ ಹಾಗೂ ಕಾಡುಬೀಸನಹಳ್ಳಿ ಸೇರಿದಂತೆ ಇತರೆಡೆಗೆ ಕೆಲಸಕ್ಕೆ ತೆರಳುವವರೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಚಾರ ದಟ್ಟಣೆ ಏರ್ಪಟ್ಟ ಕಾರಣ, ಬೆಂಗಳೂರು ನಗರ ಸಂಚಾರಿ ಪೊಲೀಸರು (Bengaluru City Traffic Police), ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕವೂ ಪೊಲೀಸರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

'ಹೆಚ್‌ಎಸ್‌ಆರ್ ಲೇಔಟ್‌ನ 14ನೇ ಮುಖ್ಯರಸ್ತೆಯಲ್ಲಿ ಬಿಎಂಆರ್‌ಸಿಎಲ್ ಮೆಟ್ರೋ ಕಾಮಗಾರಿ ನಡೆಸುತ್ತಿದ್ದು, ಫ್ಲೈಓವರ್‌ನ್ನು ಮುಚ್ಚಲಾಗಿದೆ. ವಾಹನ ಸವಾರರು ಇತರೆ ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡಿರಿ. ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು 19ನೇ ಮುಖ್ಯರಸ್ತೆ ಮೂಲಕ ತಿರುಗಿಸಲಾಗಿದೆ. ದಯವಿಟ್ಟು ಸಹಕರಿಸಿ' ಎಂದು ಬೆಂಗಳೂರು ಪೊಲೀಸರು ಪೋಸ್ಟ್ ಮಾಡಿದ್ದಾರೆ.
ವಾಹನ ಸವಾರರ ಆಕ್ರೋಶ..
ಎಚ್‌ಎಸ್‌ಆರ್ ಲೇಔಟ್ ಫ್ಲೈಓವರ್‌ನ್ನು ಬಂದ್ ಮಾಡಿರುವುದಕ್ಕೆ ವಾಹನ ಸವಾರರು ದೊಡ್ಡ ಮಟ್ಟದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 'ಎಕ್ಸ್' ಖಾತೆ ಬಳಕೆದಾರರೊಬ್ಬರು, 'ಇಂತಹ ವಿಷಯವನ್ನು ಒಂದು ದಿನ ಮುಂಚಿತವಾಗಿ ವಾಹನ ಸವಾರರ ಗಮನಕ್ಕೆ ತರಬೇಕು. ಆಗ ಅವರು, ಪರ್ಯಾಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಜನರ ಪರಿಸ್ಥಿತಿಯನ್ನು ಊಹಿಸಿ' ಎಂದು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರರೊಬ್ಬರು, 'ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ಕಾಮಗಾರಿಯನ್ನು ವಾರಂತ್ಯ ಅಥವಾ ಟ್ರಾಫಿಕ್ ಕಡಿಮೆಯಿರುವ ಸಮಯದಲ್ಲಿ ಮಾಡಬಹುದಿತ್ತು. ಕನಿಷ್ಠ ಶುಕ್ರವಾರದಂದು ಕೈಗೊಳ್ಳಬಹುದಿತ್ತು. ಬುಧವಾರ ಹೊರ ವರ್ತುಲ ರಸ್ತೆಯಿಂದ ಐಟಿಪಿಎಲ್‌ವರೆಗೆ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಈಗ ರಸ್ತೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಮುಂದಿನ ಸಲವಾದರೂ ಅಧಿಕಾರಿಗಳು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ' ಎಂದು ಕಾಮೆಂಟ್ ಮಾಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications