ವಿದೇಶಿ ಕಾರಿಗೆ ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಸ್ವಾಗತ: ಬೆಲೆ 10 ಕೋಟಿ ಇರಲಿ ಪೂಜೆ ಕಡ್ಡಾಯ!
ಭಾರತದಲ್ಲಿ ವಾಹನಗಳನ್ನು ಖರೀದಿಸಿದಾಗ, ಮೊದಲು ದೇವಾಲಯಕ್ಕೆ ಹೋಗುತ್ತಾರೆ. ವಾಹನಕ್ಕೆ ಪೂಜೆ ನೆರವೇರಿಸದ ಬಳಿಕವಷ್ಟೆ ಕುಟುಂಬವೆಲ್ಲ ಓಡಾಡುತ್ತಾರೆ. ಇದು ಹಿಂದೂ ಸಾಂಪ್ರದಾಯವಾಗಿದ್ದು, ಬಹುಕೋಟಿ ಐಷಾರಾಮಿ ಬೆಂಟ್ಲೆ ಎಸ್‌ಯುವಿ ಖರೀದಿಸಿದ ಮಾಲೀಕರೊಬ್ಬರು ಪೂಜೆ ನೆರವೇರಿಸಿ ಇದೀಗ ವೈರಲ್ ಆಗಿದ್ದಾರೆ. ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಬೆಂಟ್ಲಿ ಬೆಂಟೈಗಾ ಎಸ್‌ಯುವಿಯನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದು, ಬೆಂಗಳೂರಿನ ಎಕ್ಸ್ ಶೋರೂಂ ಪ್ರಕಾರ ಇದರ ಬೆಲೆಯು ರೂ. 5 ಕೋಟಿಯಿಂದ ಪ್ರಾರಂಭವಾಗಿ ರೂ. 7 ಕೋಟಿಗಳವರೆಗೆ ಇದೆ. ಇಷ್ಟು ದುಬಾರಿ ಕಾರಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿರುವ ಮಾಲೀಕರಿಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಟ್ಲೆ ಬೆಂಟೈಗಾ ಪೂಜೆಯ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಪೋಸ್ಟ್‌ನ ಶೀರ್ಷಿಕೆಯಲ್ಲಿ, "ವಿಲಕ್ಷಣ ಕಾರು ಡೆಲಿವರಿ ಪಡೆದ ನಂತರ ಸಾಂಪ್ರದಾಯಿಕ ಭಾರತೀಯ ಪೂಜೆಯನ್ನು ಸ್ವೀಕರಿಸುತ್ತಿರುವುದನ್ನು ನೋಡುವುದು ತುಂಬಾ ಒಳ್ಳೆಯದು!" ಎಂದು ಬರೆಯಲಾಗಿದೆ. ಈ ಸಣ್ಣ ವಿಡಿಯೋದಲ್ಲಿ, ಇಬ್ಬರು ಪೂಜಾರಿಗಳು ವಾಹನಕ್ಕೆ ಪೂಜೆ ಮಾಡುತ್ತಿರುವುದನ್ನು ಕಾಣಬಹುದು.
ತಿಳಿಯದವರಿಗೆ: ಹಿಂದೂ ಸಂಪ್ರದಾಯದಲ್ಲಿ ಹೊಸ ವಾಹನಗಳಿಗೆ ಪೂಜೆ ಮಾಡುವುದು ಮೊದಲಿನಿಂದಲೂ ರೂಢಿಯಲ್ಲಿದೆ. ವಾಹನದ ಮೇಲೆ ಅರಿಶಿನ- ಕುಂಕುಮ ಇಟ್ಟು, ಹೂವುಗಳು, ತೆಂಗಿನಕಾಯಿ ಅರ್ಪಿಸಿ ದೇವರಿಗೆ ಕೈಮುಗಿಯಲಾಗುತ್ತದೆ. ವಾಹನ ಮತ್ತು ಅದರ ಪ್ರಯಾಣಿಕರಿಗೆ ದೇವರು ರಕ್ಷಣೆ ನೀಡುತ್ತಾರೆ ಎಂಬುದು ನಂಬಿಕೆಯಾಗಿದೆ. ಸುರಕ್ಷಿತ ಪ್ರಯಾಣ ಮತ್ತು ವಾಹನ ಧೀರ್ಘ ಕಾಲ ತಮ್ಮೊಂದಿಗೆ ಇರಲು ಈ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ಬೆಂಟ್ಲೆ ಬೆಂಟೈಗಾ ವಿಶೇಷತೆಗಳು: ಬೆಂಟ್ಲೆ ಬ್ರಿಟಿಷ್ ಮೂಲದ ಕಾರು ತಯಾರಕ ಕಂಪನಿಯಾಗಿದೆ. ಈ ಎಸ್‌ಯುವಿಯು ಮರ್ಸಿಡಿಸ್ ಮೇಬ್ಯಾಕ್ ಜಿಎಲ್‌ಎಸ್ 600 ಮತ್ತು ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಎಸ್‌ಯುವಿಯನ್ನು ಲಾಂಗ್ ವ್ಹೀಲ್ ಬೇಸ್ ಮತ್ತು ಶಾರ್ಟ್ ವ್ಹೀಲ್ ಬೇಸ್ ಮಾದರಿಗಳು ಸೇರಿದಂತೆ ಅನೇಕ ರೂಪಾಂತರಗಳಲ್ಲಿ ನೀಡಲಾಗುತ್ತದೆ.
ಈ ನಿರ್ದಿಷ್ಟ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಸ್‌ಯುವಿ ಶಾರ್ಟ್ ವ್ಹೀಲ್ ಬೇಸ್ ಮಾದರಿ ಎಂದು ತೋರುತ್ತಿದೆ. ಇದು 4.0 ಲೀ. ವಿ8 ಎಂಜಿನ್ ಹೊಂದಿದೆ. ಇದು 542 ಬಿಹೆಚ್‌ಪಿ ಪವರ್ ಹಾಗೂ 770 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಬೆಂಟ್ಲೆಯಿಂದ ಬಂದ ಮೊದಲ ಎಸ್‌ಯುವಿಯಾಗಿದೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ಲ್ಯಾಂಬೊರ್ಘಿನಿ ಹುರಾಕನ್‌ಗೆ ರಸ್ತೆಬದಿಯಲ್ಲಿ ಪೂಜೆ ಮಾಡಲಾಗಿತ್ತು. ಕೇವಲ ಉದ್ಯಮಿಗಳು ಮಾತ್ರವಲ್ಲ ವಾಹನಗಳಿಗೆ ಇದೇ ರೀತಿಯ ಆಚರಣೆಗಳನ್ನು ಮಾಡುವ ಹಲವರು ಸೆಲಿಬ್ರಿಟಿಗಳು ಕೂಡ ಇದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅವರಿಂದ ಹಿಡಿದು ಚಿಕ್ಕಣನವರೆಗೂ ಪ್ರತಿಯೊಬ್ಬರು ಎಷ್ಟೇ ಐಷಾರಾಮಿ ಕಾರನ್ನು ಕೊಂಡರೂ ಪೂಜೆ ಮಾತ್ರ ಕಡ್ಡಾಯವಾಗಿರುತ್ತದೆ.
ಇನ್ನು ಇತ್ತೀಚೆಗಷ್ಟೆ ಬಾಲಿವುಡ್‌ನ ಕರಣ್ ಜೋಹರ್, ಕಾರ್ತಿಕ್ ಆರ್ಯನ್ ಕೂಡ ತಮ್ಮ ಹೊಸ ಸೂಪರ್ ಕಾರುಗಳಿಗೆ ಪೂಜೆ ನೆರವೇರಿಸಿದ್ದರು. ನಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ದೇಶದ ಕುಬೇರರು ಕೂಡ ಗೌರವಿಸಲೇಬೇಕು, ಅಂಬಾನಿಯಿಂದ ಹಿಡಿದು ಅದಾನಿವರೆಗೆ ತಮ್ಮ ದುಬಾರಿ ಬೆಲೆಯ ಕಾರುಗಳಿಗೆ ಪೂಜೆ ಸಲ್ಲಿಸಲೇಬೇಕು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications