ಸೋಲಾರ್ ಕಾರಲ್ಲಿ ಕೋಲಾರ ತಾತನ ದಾಖಲೆ ಪಯಣ!
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸಂದೇಶದೊಂದಿಗೆ ಸೌರಶಕ್ತಿ ಎಲೆಕ್ಟ್ರಿಕ್ ನಿಯಂತ್ರಿತ ಕಾರಲ್ಲಿ ಬೆಂಗಳೂರಿನಿಂದ ಪಯಣ ಹೊರಟಿರುವ 63ರ ಹರೆಯದ ತಾತ ಸಯ್ಯದ್ ಸಜ್ಜದ್ ಅಹ್ಮದ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ (ಐಐಎಸ್‌ಎಫ್) ಭಾಗವಹಿಸಲು ತಲುಪಿದ್ದಾರೆ.
ಸರಿ ಸುಮಾರು ಒಂದು ತಿಂಗಳ ಹಿಂದೆ ನಮ್ಮ ಬೆಂಗಳೂರಿನಿಂದ ಪಯಣ ಆರಂಭಿಸಿರುವ ಅಹ್ಮದ್ 3,000 ಕೀ.ಮೀ. ದೂರವನ್ನು ಕ್ರಮಿಸಿ ನವದೆಹಲಿಯನ್ನು ತಲುಪಿದ್ದಾರೆ. ಅಲ್ಲದೆ ಪರಿಸರ ಕಾಳಜಿ ಹಾಗೂ ಸೌರಶಕ್ತಿ ಬಗ್ಗೆ ಜನ ಜಾಗೃತಿ ಮೂಡಿಸುವ ಪಯಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇಡೀ ವಾಹನ ಜಗತ್ತೇ ಪೆಟ್ರೋಲ್ ಹಾಗೂ ಡೀಸೆಲ್ ಪರ್ಯಾಯ ಇಂಧನ ಹುಡುಕುತ್ತಿರುವ ಇದೇ ಹೊತ್ತಿನಲ್ಲಿ ಅಹ್ಮದ್ ನಡೆಸಿರುವ ಸಾಧನೆಯು ವಾಹನ ಜಗತ್ತಿಗೆ ಪ್ರೇರಣೆಯಾಗಿ ಪರಿಣಮಿಸಿದೆ.
Picture credit: Spinning the Green Wheel

ಮೂಲತ: ಬೆಂಗಳೂರು ಗ್ರಾಮಾಂತರ ಕೋಲಾರ ದೇವನಹಳ್ಳಿಯ ವಿಜಯಪುರ ಪಟ್ಟಣದಲ್ಲಿರುವ ಅಹ್ಮದ್, 2004ರ ಇಸವಿಯಲ್ಲೇ ಸೋಲಾರ್ ಕಾರ್ ಅವಿಷ್ಕರಿಸಿದ್ದರು.

63ರ ಹರೆಯದ ಇಳಿ ವಯಸ್ಸಿನಲ್ಲೂ ಉತ್ಸಾಹ ಕುಂದದೇ ಯುವ ಜನಾಂಗಕ್ಕೆ ಪ್ರೇರಣೆಯಾಗಿರುವ ಅಹ್ಮದ್ ತಮ್ಮ ಜೀವನದಲ್ಲಿ ಅನೇಕ ಸವಾಲನ್ನು ಎದುರಿಸಿ ಮುಂದೆ ಬಂದಿದ್ದಾರೆ.

'ಮನಸ್ಸಿದ್ದರೆ ಮಾರ್ಗವಿದೆ' ಎಂಬ ಗಾದೆ ಮಾತನ್ನೇ ಪ್ರೇರಣೆಯಾಗಿಸಿರುವ ಅಹ್ಮದ್ ಅವರ ಸಾಧನೆಯ ಬಗ್ಗೆ ಅರಿತುಕೊಂಡಿರುವ ಹಲವು ವಿಶ್ವವಿದ್ಯಾನಿಲಯವು ತಮ್ಮ ಮಕ್ಕಳಿಗೂ ಇದನ್ನು ವಿವರಿಸಿಕೊಡುವಂತೆ ಕೋರಿಕೊಂಡಿದೆ.
Picture credit: Solar Sound Bangalore
ಕುಟುಂಬದ ಜೀವನೋಪಾಯಕ್ಕಾಗಿ 15ರ ಹರೆಯಲ್ಲೇ ಶಾಲೆ ಬಿಡಬೇಕಾಯಿತು. ಆದರೆ ಮನುಕುಲಕ್ಕಾಗಿ ಏನಾದರೊಂದನ್ನು ಮಾಡಬೇಕೆಂಬ ಹಂಬಲ ಸದಾ ನನ್ನಲ್ಲಿತ್ತು ಎಂದು ಅಹ್ಮದ್ ವಿವರಿಸುತ್ತಾರೆ.
Picture credit: Solar Sound Bangalore
ಪ್ರಾರಂಭದಲ್ಲಿ ವಿದ್ಯುತ್ ಶಕ್ತಿಯಿಂದ ಚಲಿಸುವ ದ್ವಿಚಕ್ರ ಮರು ವಿನ್ಯಾಸಗೊಳಿಸಿದ ಅವರು ಬಳಿಕ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನವನ್ನು ಮಾರ್ಪಾಡುಗೊಳಿಸಿದ್ದಾರೆ.
Picture credit: Solar Sound Bangalore

2006ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಗೌರವಾರ್ಥ ಕರ್ನಾಟಕ ಸರಕಾರದ ಪರಿಸರ ಸಂರಕ್ಷಣೆ ಪ್ರಶಸ್ತಿಯನ್ನು ಸ್ವೀಕರಿಸಿರುವ ಅವರು ತಮ್ಮ ಸೌರಶಕ್ತಿಯ ಕಾರಿನಲ್ಲಿ ಐದು ಸೋಲಾರ್ ಪ್ಯಾನೆಲ್ ಗಳನ್ನು ಆಳವಡಿಸಿದ್ದಾರೆ. ಪ್ರತಿಯೊಂದು 100 ವ್ಯಾಟ್ ವಿದ್ಯುತ್ ಉತ್ಪಾದಿಸುವಷ್ಟು ಸಕ್ಷಮವಾಿಗದೆ. ಇದರಲ್ಲಿ ಎಲೆಕ್ಟ್ರಿಕ್ ನಿಯಂತ್ರಿತ ಆರು ಬ್ಯಾಟರಿಗಳನ್ನು ಆಳವಡಿಸಲಾಗಿದೆ.

ಅನೇಕ ಕಡಿದಾದ ಪರ್ವತಗಳನ್ನು ಅತಿ ಸುಲಭವಾಗಿ ಏರಿ ಬಂದಿರುವ ಈ ಸೋಲಾರ್ ಕಾರು ಈಗಾಗಲೇ ದೇಶದ್ಯಾಂತ 1.1 ಲಕ್ಷ ಕೀ.ಮೀ. ಗಳನ್ನು ಕ್ರಮಿಸಿದೆ ಎಂದು ಅಹ್ಮದ್ ವಿವರಿಸುತ್ತಾರೆ.
Picture credit: Spinning the Green Wheel

Click it and Unblock the Notifications








