ಕೇಂಬ್ರಿಡ್ಜ್ ವಿದ್ಯಾರ್ಥಿಗಳ ಪರಿಸರ ಸ್ನೇಹಿ ಸೋಲಾರ್ ಕಾರು
ಕಳೆದ ದಿನವಷ್ಟೇ ಸೋಲಾರ್ ಪ್ಯಾನೆಲ್‌ನಿಂದ ಚೈತನ್ಯ ತುಂಬುವ ವೋಲ್ವೋ ಕಾರಿನ ಬಗ್ಗೆ ಮಾಹಿತಿ ನೀಡಿದ್ದೆವು. ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ವರದಿಯಾಗಿದ್ದು, ಬ್ರಿಟನ್‌ನ ಕೇಂಬ್ರಿಡ್ಜ್ ವಿದ್ಯಾರ್ಥಿಗಳು ಸೂರ್ಯ ಶಾಖದಿಂದ ನಿಯಂತ್ರಿಸಲ್ಪಡುವ ನೂತನ ಇಕೊ ರೇಸಿಂಗ್ ವಾಹನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ಭವಿಷ್ಯದ ಸಂಚಾರ ವಾಹಕ ಕಂಡು ಹಿಡಿಯುವುದರಲ್ಲಿ ಗಮನ ಕೇಂದ್ರಿತವಾಗಿರುವ ವಾಹನೋದ್ಯಮವು ನವ ನವೀನ ವಾಹನಗಳ ಆವಿಷ್ಕಾರ ಮಾಡುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆಯೆಂಬಂತೆ ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವಮಹಾವಿದ್ಯಾಲಯದ ಇಕೊ ರೇಸಿಂಗ್ (ಸಿಯುಇಆರ್) ತಂಡದ ವಿದ್ಯಾರ್ಥಿಗಳು ನೂತನ ಸೋಲಾರ್ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ.

ರೆಸೊಲ್ಯೂಷನ್
2013 ವಿಶ್ವ ಸೋಲಾರ್ ಚಾಲೆಂಜ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ 'ರೆಸೊಲ್ಯೂಷನ್' (Resolution) ಎಂಬ ಹೆಸರಿನ ಸೋಲಾರ್ ಕಾರಿನ ಮೊದಲ ಮಾದರಿಯನ್ನು ಅನಾವರಣಗೊಳಿಸಲಾಗಿದೆ.

ಸೋಲಾರ್ ಪ್ಯಾನೆಲ್
ಇತರ ಸೋಲಾರ್ ವಾಹನಗಳಿಗಿಂತಲೂ ವಿಭಿನ್ನವಾಗಿ ಇದರ ಸೋಲಾರ್ ಪ್ಯಾನೆಲ್‌ಗಳನ್ನು ಒಳಗಡೆ ಲಗತ್ತಿಸಲಾಗಿದೆ. ಹಾಗೆಯೇ ಸೂರ್ಯನ ಕಿರಣಗಳನ್ನು ನಿರೀಕ್ಷಿಸುವಷ್ಟು ಶಕ್ತಿ ಹೊಂದಿದೆ.

ನಾಲ್ಕು ಚಕ್ರ
ನಾಲ್ಕು ಚಕ್ರಗಳ ರೆಸೊಲ್ಯೂಷನ್ ಇಕೊ ರೇಸಿಂಗ್ ವಾಹನ 16.4 ಫೀಟ್ ಉದ್ದ, 2.6 ಫೀಟ್ ಅಗಲ ಹಾಗೂ 3.6 ಫೀಟ್ ಎತ್ತರ ಹೊಂದಿದೆ.

ವೇಗ
ಕೇಂಬ್ರಿಡ್ಜ್ ವಿದ್ಯಾರ್ಥಿಗಳ ಪ್ರಕಾರ ಈ ಸೋಲಾರ್ ಕಾರು ಪ್ರತಿ ಗಂಟೆಗೆ 140 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ಅಗತ್ಯ ಮಾಹಿತಿ
ಇನ್ನು ಚಾಲಕನಿಗೆ ಬೇಕಾದ ವಾತಾವರಣ ಮುಂತಾದ ಅಗತ್ಯ ಮಾಹಿತಿಗಳನ್ನು ನೀಡುವ ಇಂಟೆಲಿಜೆಟ್ ಕ್ರೂಸ್ ಕಂಟ್ರೋಲ್ ಇದರಲ್ಲಿದೆ.

ವಿಶ್ವ ಸೋಲಾರ್ ಚಾಲೆಂಜ್
2013 ವಿಶ್ವ ಸೋಲಾರ್ ಚಾಲೆಂಜ್ ಅಕ್ಟೋಬರ್ 6ರಿಂದ 13ರ ವರೆಗೆ ಸಾಗಲಿದೆ. ಉತ್ತರ ಆಸ್ಟ್ರೇಲಿಯಾದಿಂದ ಆರಂಭವಾಗಲಿರುವ ವಿಶ್ವ ಸೋಲಾರ್ ಚಾಲೆಂಜ್ 3,000 ಕೀ.ಮೀ ಕ್ರಮಿಸುತ್ತಾ ದಕ್ಷಿಣ ತೀರವಾದ ಆಡಿಲೇಡ್ ತಲುಪಲಿದೆ.
ರೆಸೊಲ್ಯೂಷನ್
ವೀಡಿಯೋ ವೀಕ್ಷಿಸಿ


Click it and Unblock the Notifications








