ಬೆಂಗಳೂರು ಮೆಟ್ರೋನಾ, ಮುಂಬೈ ಲೋಕಲ್ ರೈಲಾ...? ನಾರಿಯರಿಂದ ತುಂಬಿದ ಬೋಗಿ, ಚರ್ಚೆಗೆ ಕಾರಣವಾಯ್ತು ವಿಡಿಯೋ!

ಬೆಂಗಳೂರು (Bengaluru) ಸಂಚಾರ ದಟ್ಟಣೆಗೆ (traffic jams) ಸಂಬಂಧಿಸಿದ ಒಂದಿಲ್ಲೊಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ದೇಶದ ಮೂಲೆ ಮೂಲೆಯಿಂದ ಜನರು ತಮ್ಮ ಕನಸುಗಳನ್ನು ಸಹಕಾರಗೊಳಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಅದಕ್ಕೆ ತಕ್ಕಂತೆ ನಗರದಲ್ಲಿ ಜನಸಂದಣಿ ಹೆಚ್ಚುತ್ತಿದ್ದು, ಸಾರ್ವಜನಿಕ ಸಾರಿಗೆ ಮೇಲೆ ಒತ್ತಡವು ಅಧಿಕಗೊಳ್ಳುತ್ತಿದೆ.

ಪೀಕ್ ಅವರ್‌ನಲ್ಲಿ ಬೆಂಗಳೂರು ಮೆಟ್ರೋದಲ್ಲಿ (Bengaluru metro) ಜನದಟ್ಟಣೆ ಹೇಗಿರುತ್ತದೆ ಎಂದು ತೋರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ ಆಗಿದ್ದು, ಸಖತ್ ಹಲ್-ಚಲ್ ಸೃಷ್ಟಿಸಿದೆ. ಹಲವರು, ಇದನ್ನು ಮುಂಬೈ ಲೋಕಲ್ ರೈಲುಗಳಿಗೆ (Mumbai local trains) ಹೋಲಿಕೆ ಮಾಡಿದ್ದಾರೆ. ನೇರಳೆ ಮಾರ್ಗದ ಮೆಟ್ರೋ ರೈಲಿನ ಮುಂಭಾಗ ಮಹಿಳೆಯರಿಗೆ ಮೀಸಲಾಗಿರುವ ಬೋಗಿಯೂ ಅವರಿಂದಲೇ ತುಂಬಿಹೋಗಿದ್ದು, ಹಲವರು ಸರತಿ ಸಾಲಿನಲ್ಲಿ ಹತ್ತುತ್ತಿರುವುದನ್ನು ನೋಡಬಹುದು.

ಬೆಂಗಳೂರು ಮೆಟ್ರೋನಾ, ಮುಂಬೈ ಲೋಕಲ್ ರೈಲಾ...? ನಾರಿಯರಿಂದ ತುಂಬಿದ ಬೋಗಿ, ಚರ್ಚೆಗೆ ಕಾರಣವಾಯ್ತು ವಿಡಿಯೋ!

6 - ಸೆಕೆಂಡುಗಳ ಈ ವಿಡಿಯೋ 70 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದ್ದು, ದೊಡ್ಡಮಟ್ಟದ ವೈರಲ್ ಆಗಿದೆ. ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, 'ಬೆಂಗಳೂರು ಮೆಟ್ರೋದಲ್ಲಿ ಮುಂಬೈ ಸ್ಥಳೀಯರ ವೈಬ್‌ನ್ನು ಆನಂದಿಸಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ವಿಭಿನ್ನವಾಗಿದೆ. ಮುಂಬೈನಲ್ಲಿರುವ ಜನರ ನಡುವೆ ಏನಾದರೂ ವಿಶಿಷ್ಟವಾದ ಬಾಂಧವ್ಯವಿದೆ' ಎಂದು ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರ, 'ಮುಂಬೈ ಮತ್ತು ದೆಹಲಿಗೆ ಹೋಲಿಸಿದರೆ, ಇಲ್ಲಿ ಹೆಚ್ಚು ಶಾಂತವಾದ ವಾತಾವರಣವಿದೆ' ಎಂದು ಬರೆದಿದ್ದಾರೆ. ಇನ್ನೊಬ್ಬ ನೆಟ್ಟಿಗ, 'ಜನರ ವಲಸೆಯಿಂದಾಗಿ ಬೆಂಗಳೂರು ಈ ಸಮಸ್ಯೆಯನ್ನು ಎದುರಿಸುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, 'ಈಗಲೂ ಇದು ಮುಂಬೈ ಲೋಕಲ್‌ ರೈಲಿಗಿಂತ ಸುರಕ್ಷಿತವಾಗಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು, 'ನಿರೀಕ್ಷಿಸಲಾಗಿತ್ತು. 1-1.5 ಕೋಟಿ ಜನಸಂಖ್ಯೆ ಹೊಂದಿರುವ ಯಾವುದೇ ನಗರದಲ್ಲಿ ಇದು ಸಂಭವಿಸುತ್ತದೆ' ಎಂದಿದ್ದಾರೆ.

ಬೆಂಗಳೂರು ಮೆಟ್ರೋನಾ, ಮುಂಬೈ ಲೋಕಲ್ ರೈಲಾ...? ನಾರಿಯರಿಂದ ತುಂಬಿದ ಬೋಗಿ, ಚರ್ಚೆಗೆ ಕಾರಣವಾಯ್ತು ವಿಡಿಯೋ!

ನಮ್ಮ ಮೆಟ್ರೋ ಬಗ್ಗೆ ಹೇಳುವುದಾದರೆ, ದೆಹಲಿ ಮೆಟ್ರೋ ನಂತರ, ದೇಶದಲ್ಲಿ 73.75 ಕಿಲೋಮೀಟರ್‌ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುವ ಎರಡನೇ ಅತಿದೊಡ್ಡ ಜಾಲವಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ಸುರಂಗ ಮೆಟ್ರೋ ಮಾರ್ಗವು ಇದೆ. ಸದ್ಯ, 60ಕ್ಕೂ ಹೆಚ್ಚು ನಿಲ್ದಾಣಗಳಿದ್ದು, ಪ್ರತಿನಿತ್ಯ 710,000ಕ್ಕೂ ಪ್ರಯಾಣಿಕರು ಸಂಚರಿಸುತ್ತಿದ್ದು, ಮತ್ತಷ್ಟು ಕಡೆಗಳಲ್ಲಿಯೂ ಮೆಟ್ರೋ ಮಾರ್ಗಗಳನ್ನು ವಿಸ್ತರಣೆ ಮಾಡಲಾಗುತ್ತಿದೆ.

ಇನ್ನು, ಈ ವರ್ಷದ ಫೆಬ್ರವರಿಯಲ್ಲಿ 2022ರ ಪ್ರಪಂಚದ ಅತ್ಯಂತ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿ ಲಂಡನ್‌ ಮೊದಲ ಸ್ಥಾನದಲ್ಲಿದ್ದರೆ, 'ಸಿಲಿಕಾನ್ ವ್ಯಾಲಿ' ಖ್ಯಾತಿಯ ಬೆಂಗಳೂರು ಎರಡನೇ ಸ್ಥಾನದಲ್ಲಿತ್ತು. ನಗರದ ಹೃದಯ ಭಾಗದಲ್ಲಿ ಪ್ರತಿ 10 ಕಿಮೀ ಪ್ರಯಾಣಕ್ಕೆ 29 ನಿಮಿಷ 10 ಸೆಕೆಂಡ್‌ ಬೇಕಾಗುತ್ತದೆ ಎಂದು ವರದಿ ಹೇಳಿತ್ತು.

ಕೆಲವೇ ದಿನಗಳ ಹಿಂದೆ, ಚಲಿಸುತ್ತಿರುವ ಬೈಕ್‌ನ ಹಿಂಬದಿ ಆಸನದಲ್ಲಿ ಕುಳಿತುಕೊಂಡು ಮಹಿಳೆಯೊಬ್ಬರು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದಕ್ಕೆ ನೆಟ್ಟಿಗರು, ಹಲವು ಕಾಮೆಂಟ್ ಮಾಡಿದ್ದರು. ಬಹುತೇಕರು, ಆ ಮಹಿಳೆಯ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸೋಷಿಯಲ್ ಮೀಡಿಯಾ ಬಳಕೆದಾರನೊಬ್ಬ, 'ಒಂದೇ ಪ್ರೇಮ್ ನಲ್ಲಿ ಡೆಡ್ ಲೈನ್ & ಡೆತ್' ಎಂದು ಬರೆದಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, October 28, 2023, 13:33 [IST]
English summary
Bengaluru metro or mumbai local train video viral social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+