Bengaluru-Mysuru Expressway: ದ್ವಿಚಕ್ರ-ತ್ರಿಚಕ್ರ ವಾಹನ ಸವಾರರಿಗೆ ಶುಭಸುದ್ದಿ, ಪರ್ಯಾಯ ವ್ಯವಸ್ಥೆ

ಹಲವಾರು ಅಪಘಾತಗಳು ಮತ್ತು ಸಾವುಗಳಿಂದಾಗಿ Bengaluru-Mysuru Expressway ನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲಾಗಿತ್ತು. ಆದ್ರೆ ಇದೀಗ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಬುಧವಾರ ನಿಧಾನವಾಗಿ ಚಲಿಸುವ ವಾಹನಗಳು ಎರಡೂ ಬದಿಗಳಲ್ಲಿನ ಟೋಲ್ ಫ್ರೀ ಸರ್ವಿಸ್‌ ಲೇನ್‌ಗಳನ್ನು ಬಳಸಬಹುದು ಎಂದು ಘೋಷಿಸಿದೆ.

ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿಗಳ ನಿಯಂತ್ರಣ ಕಾಯಿದೆ 2002' ಅಡಿಯಲ್ಲಿ ಸುರಕ್ಷತೆ ದೃಷ್ಟಿಯಿಂದ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್, ಟ್ರಾಕ್ಟರ್ ಹಾಗೂ ಕ್ವಾಡ್ರಿ ವಾಹನಗಳ ಸಂಚಾರವನ್ನು ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಅದನ್ನು ಸಡಲಿಸಿ ಟೋಲ್ ಫ್ರೀ ಸರ್ವಿಸ್‌ ಲೇನ್‌ಗಳನ್ನು ನೀಡಲಾಗಿದೆ.

Bengaluru-Mysuru Expressway

ಪ್ರಸ್ತುತ ರಾಮನಗರ, ಬಿಡದಿ, ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ರೈಲ್ವೆ ಮೇಲ್ಸೇತುವೆಗಳಿಂದಾಗಿ ಸರ್ವಿಸ್ ರಸ್ತೆಯಲ್ಲಿ ಮೂರು ಅಂತರಗಳಿವೆ, ಈ ಅಂತರಗಳು ಸಿಕ್ಕಾಗ ವಾಹನಗಳು ಹಳೆಯ ಮೈಸೂರು ರಸ್ತೆಯನ್ನು ಬಳಸಬಹುದು ಎಂದು ಹೇಳಿದೆ. ಒಟ್ಟಾರೆ ದ್ವಿಚಕ್ರ ಹಾಗೂ ತ್ರಿಚಕ್ರದ ವಾಹನಗಳು ಸರ್ವೀಸ್ ರಸ್ತೆಗಳಲ್ಲಿ ಬರೋಬ್ಬರಿ 79.6 ಕಿ.ಮೀ ಹಾಗೂ ಹಳೆಯ ಮೈಸೂರು ರಸ್ತೆಯ ಮೂಲಕ 35.4 ಕಿ.ಮೀ ಪ್ರಯಾಣಿಸಬಹುದು ಎಂದು ಸಚಿವಾಲಯ ತಿಳಿಸಿದೆ.

118-ಕಿ.ಮೀ ಉದ್ದದ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಯಲ್ಲಿ ಯಾವುದೇ ಅಂತರವಿಲ್ಲದೇ ನಿರಂತರವಾಗಿ ಸಾಗಲು ಸರ್ವಿಸ್ ರಸ್ತೆಯಲ್ಲಿ ಮೂರು ಆರ್‌ಒಬಿಗಳ ನಿರ್ಮಾಣವನ್ನು ಶೀಘ್ರದಲ್ಲೇ ಮಾಡಲಾಗುವುದು. ಅಲ್ಲಿಯವರೆಗೆ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಪ್ರಯಾಣಿಕರು ಈ ಮೂರು ಪಟ್ಟಣಗಳಿಗೆ ಹೋಗಲು ಬಯಸಿದರೆ, ಸೇವಾ ರಸ್ತೆ ಲಭ್ಯವಿದೆ ಎಂದು ಸಚಿವಾಲಯ ತಿಳಿಸಿದೆ.

bengaluru-mysuru-expressway-service-lane-for-two-three-wheelers

ಬೆಂಗಳೂರು-ಮೈಸೂರು ಪ್ರವೇಶ-ನಿಯಂತ್ರಿತ ಹೆದ್ದಾರಿಯನ್ನು ವಿವಿಧ ಮೋಟಾರು ವಾಹನಗಳಿಗೆ 80-100 ಕಿ.ಮೀ ವೇಗದ ಮಿತಿಗಳೊಂದಿಗೆ ಹೆಚ್ಚಿನ ವೇಗದ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗಿದೆ. ಇದರ ಜೊತೆಗೆ ಹಳೆಯ ಮೈಸೂರು-ಬೆಂಗಳೂರು ರಸ್ತೆಯ ಬೈಪಾಸ್ ಭಾಗವನ್ನು ಸಹ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸುಧಾರಿಸುತ್ತಿರುವುದಾಗಿ ತಿಳಿಸಿದೆ.

ರೂ.8172 ಕೋಟಿ ಖರ್ಚು: ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಸುಮಾರು ರೂ.8,172 ಕೋಟಿ ವೆಚ್ಚದಲ್ಲಿ ಕೈಗಾರಿಕೆ ಹಾಗೂ ಪ್ರವಾಸೋದ್ಯಮದ ಅಭಿವೃದ್ದಿಗಾಗಿ 118 ಕಿ.ಮೀ ಉದ್ದದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿದೆ. ಇದು ದಶಪಥದ ರಸ್ತೆಯಾಗಿದ್ದು, ಆರು ಪಥದ ಎಕ್ಸ್‌ಪ್ರೆಸ್‌ವೇ ಹಾಗೂ ತಲಾ ಎರಡು ಪಥದ ಸರ್ವಿಸ್ ರಸ್ತೆಯಿದೆ.

bengaluru-mysuru-expressway-service-lane-for-two-three-wheelers

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉನ್ನತ ಮಟ್ಟದ ಸಭೆ ನಡೆಸಿ, ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್, ಟ್ರಾಕ್ಟರ್ ಹಾಗೂ ಕ್ವಾಡ್ರಿ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು. ಈ ನಿರ್ಧಾರಕ್ಕೆ ಗೂಡ್ಸ್ ಆಟೋ ಚಾಲಕರು ವಿರೋಧಿಸಿ ಬೇಸರ ವ್ಯಕ್ತಪಡಿಸಿದ್ದರು.

ಇತ್ತ ಪೊಲೀಸರು ಸತತ ಪರಿಶ್ರಮದಿಂದ ಜುಲೈ ತಿಂಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮೃತರ ಸಂಖ್ಯೆ ಕಡಿಮೆಯಾಗಿತ್ತು. ಜುಲೈ 24 ರವರೆಗೆ 30 ಅಪಘಾತ ಪ್ರಕರಣಗಳು ವರದಿಯಾಗಿದ್ದವು. 3 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದರು. ಅದಕ್ಕೂ ಮುನ್ನ ಮಾರ್ಚ್ ನಲ್ಲಿ ಲೋಕಾರ್ಪಣೆಗೊಂಡ ಈ ಹೆದ್ದಾರಿಯಲ್ಲಿ ಜರುಗಿದ ವಿವಿಧ ಆಕ್ಸಿಡೆಂಟ್‌ಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದರು.

bengaluru-mysuru-expressway-service-lane-for-two-three-wheelers

ಇಷ್ಟಾದರೂ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಪ್ರಯಾಣಿಕರ ಸಂಚಾರಕ್ಕೆ ಬಿಡದಿರುವುದು ಅವರಿಗೆ ಬೇಸರ ತರಿಸಿದೆ ಎಂದು ಹೇಳುತ್ತಿದ್ದಾರೆ. ಆದ್ರೆ ಅಂತರಾಷ್ಟ್ರಿಯ ಮಟ್ಟದ ಈ ಹೆದ್ದಾರಿಯಲ್ಲಿ ವೇಗದ ಕಾರುಗಳಿಗೆ ಈ ವಾಹನಗಳಿಂದಾಗುವ ಅಡಚಣೆಯನ್ನು ಅವರು ತಿಳಿಯುತ್ತಿಲ್ಲ. ಒಟ್ಟಾರೆ ಕೊನೆಗೂ ಇವರಿಗೆ ಸರ್ವಿಸ್‌ಲೇನ್ ನೀಡಿರುವುದು ತುಸು ನಿರಾಳವಾಗಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, August 3, 2023, 11:47 [IST]
English summary
Bengaluru mysuru expressway service lane for two three wheelers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+