ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ಭಾರತದ ರಸ್ತೆಗಳಲ್ಲಿ ವಿವಿಧ ಕಂಪನಿಯ ಕಾರುಗಳನ್ನು ಕಾಣಬಹುದು. ಸಾಮಾನ್ಯ ಕಾರುಗಳನ್ನು ಮಾತ್ರವಲ್ಲದೇ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಸಹ ಕಾಣಬಹುದು. ಎಲ್ಲಾ ಕಾರುಗಳಿಗಿಂತ ರೋಲ್ಸ್ ರಾಯ್ಸ್ ಕಾರುಗಳು ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತವೆ.

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ರೋಲ್ಸ್ ರಾಯ್ಸ್ ಕಾರುಗಳು ಒರಟು ರಸ್ತೆಯಿರಲಿ, ಹಳ್ಳ ಗುಂಡಿಗಳಿಂದ ಕೂಡಿರುವ ರಸ್ತೆಯಿರಲಿ ಒಳಗಿರುವವರಿಗೆ ಆರಾಮದಾಯಕ ಅನುಭವವನ್ನು ನೀಡುತ್ತವೆ. ರೋಲ್ಸ್ ರಾಯ್ಸ್ ಕಾರುಗಳಂತೆಯೇ ಐಷಾರಾಮಿ ಪ್ರಯಾಣದ ಅನುಭವವನ್ನು ನೀಡುವ ಸಾಮರ್ಥ್ಯವನ್ನು ಭಾರತೀಯ ರೈಲ್ವೆ ಹೊಂದಿದೆ ಎಂದು ವರದಿಯಾಗಿದೆ.

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ಭಾರತದ ರೈಲ್ವೆ ಇಲಾಖೆಯು ಈ ಬಗ್ಗೆ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ. ಚಲಿಸುತ್ತಿರುವ ರೈಲಿನಲ್ಲಿ ಗಾಜಿನ ಲೋಟವನ್ನು ಇಟ್ಟಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ರೈಲ್ವೆ ಇಲಾಖೆಯು ಬಹಳ ಹೆಮ್ಮೆಯಿಂದ ಈ ವೀಡಿಯೊವನ್ನು ಬಿಡುಗಡೆ ಮಾಡಿದೆ. ರೈಲು ವೇಗವಾಗಿ ಚಲಿಸುವಾಗಲೂ ಪೂರ್ತಿಯಾಗಿ ಭರ್ತಿಯಾಗಿದ್ದ ಗಾಜಿನ ಲೋಟದಿಂದ ಹನಿ ನೀರು ಹೊರ ಬಂದಿಲ್ಲ.

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ಜೊತೆಗೆ ಲೋಟವು ಸ್ವಲ್ಪವು ಅಲುಗಾಡಲಿಲ್ಲ ಎಂದು ಇಲಾಖೆಯು ಈ ವೀಡಿಯೊದಲ್ಲಿ ತಿಳಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಆಕರ್ಷಿಸಲು ರೈಲ್ವೆ ಇಲಾಖೆಯು ಈ ವೀಡಿಯೊವನ್ನು ಬಿಡುಗಡೆಗೊಳಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ರಸ್ತೆ ಪ್ರಯಾಣಕ್ಕಿಂತ ರೈಲು ಪ್ರಯಾಣವು ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿದೆ ಎಂಬುದನ್ನು ಈ ವೀಡಿಯೊ ತೋರಿಸುತ್ತದೆ. ಇದನ್ನು ದೃಢೀಕರಿಸುವ ಸಲುವಾಗಿ ರೈಲಿನ ಕೊನೆಯ ಬೋಗಿಯಲ್ಲಿ ಗಾಜಿನ ಲೋಟದಲ್ಲಿ ನೀರು ತುಂಬಿ ಇಡಲಾಗಿತ್ತು.

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ಈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೊವನ್ನು ಚಿತ್ರಿಕರಿಸಿರುವುದು ಬೆಂಗಳೂರು-ಮೈಸೂರು ರೈಲು ಮಾರ್ಗದಲ್ಲಿ ಎಂಬುದು ವಿಶೇಷ. ಭಾರತೀಯ ರೈಲ್ವೆ ಕಳೆದ ಆರು ತಿಂಗಳಿಂದ ಈ ಮಾರ್ಗವನ್ನು ಮೇಲ್ದರ್ಜೆಗೆ ಏರಿಸುವ ಕೆಲಸವನ್ನು ಮಾಡುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ಬಹುತೇಕ ಪೂರ್ಣಗೊಂಡಿರುವ 130 ಕಿ.ಮೀ ಉದ್ದದ ಈ ಟ್ರ್ಯಾಕ್‌ ಕಾಮಗಾರಿಗಾಗಿ ರೈಲ್ವೆ ಇಲಾಖೆಯು ರೂ.40 ಕೋಟಿ ಖರ್ಚು ಮಾಡಿದೆ. ಮೇಲ್ದರ್ಜೆ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಲು ಈ ವಾಟರ್ ಟಂಬ್ಲರ್ ಪರೀಕ್ಷೆಯನ್ನು ನಡೆಸಲಾಯಿತು.

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ಒಂದು ಹನಿ ನೀರು ಹೊರ ಬರದೇ ಕಾಮಗಾರಿಯು ಗುಣಮಟ್ಟದಲ್ಲಿ ಪೂರ್ತಿಯಾಗಿರುವುದು ಈ ಪರೀಕ್ಷೆಯಿಂದ ಕಂಡು ಬಂದಿದೆ. ಈ ಪರೀಕ್ಷೆಯ ಸಮಯದಲ್ಲಿ ರೈಲು 100 ಕಿ.ಮೀ ವೇಗದಲ್ಲಿ ಚಲಿಸಿದೆ ಎಂದು ವರದಿಯಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾಮಗಾರಿಯಲ್ಲಿ ರಿಡ್ಜ್ ಗ್ರೂವ್ ಗಳನ್ನು ಸರಿಪಡಿಸಿ, ದೋಷಯುಕ್ತ ರೈಲು ಬೇರಿಂಗ್‌ಗಳನ್ನು ತೆಗೆದುಹಾಕಲಾಗಿದೆ. ಈ ಕಾರಣಕ್ಕಾಗಿಯೇ ಅಚ್ಚರಿ ಎನಿಸುವಂತಹ ಫಲಿತಾಂಶ ಕಂಡು ಬಂದಿದೆ.

ಗಾಜಿನ ಲೋಟವೂ ಅಲುಗಾಡಲ್ಲ ಈ ರೈಲ್ವೆ ಟ್ರ್ಯಾಕ್ ನಲ್ಲಿ

ಬೆಂಗಳೂರು-ಮೈಸೂರು ಮಾರ್ಗದಲ್ಲಿ ಇನ್ನೂ ಅನೇಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ರೈಲ್ವೆ ಇಲಾಖೆಯ ಅಧಿಕಾರಿಗಳ ಪ್ರಕಾರ ಈ ಮಾರ್ಗದಲ್ಲಿ ಚಲಿಸುವ ರೈಲುಗಳು ಐಷಾರಾಮಿ ಕಾರುಗಳಂತೆಯೇ ಐಷಾರಾಮಿ ಸೌಲಭ್ಯವನ್ನು ಹೊಂದಿವೆ.

Most Read Articles

Kannada
English summary
Bengaluru Mysuru rail track gives more convenient travel than road journey. Read in Kannada.
Story first published: Wednesday, November 4, 2020, 12:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X