Namma Yatri: ನಾಳೆಯಿಂದ ಬೆಂಗಳೂರಿನಲ್ಲಿ 'ನಮ್ಮ ಯಾತ್ರಿ' ಕ್ಯಾಬ್ ಸೇವೆ ಆರಂಭ.. ಹೆಚ್ಚು ಹಣ ಉಳಿಸಬಹುದು!

ಆಟೊರಿಕ್ಷಾ ಅಗ್ರಿಗೇಟರ್ ನಮ್ಮ ಯಾತ್ರಿ (Namma Yatri) ಏಪ್ರಿಲ್ 16 ರಿಂದ ಬೆಂಗಳೂರು ನಗರದಲ್ಲಿ ಕ್ಯಾಬ್ ಸೇವೆ (Cab services) ಯನ್ನು ಪ್ರಾರಂಭಿಸಲಿದೆ ಎಂದು ತಿಳಿದುಬಂದಿದೆ. ಇದರಿಂದ ಕ್ಯಾಬ್ ಚಾಲಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದ್ದು, ಒಂದಷ್ಟು ಹಣ ಗಳಿಸಲು ನೆರವಾಗಲಿದೆ.

ಜಸ್ಪೇ ಟೆಕ್ನಾಲಜೀಸ್ (Juspay Technologies) ಬೆಂಬಲಿತ ನಮ್ಮ ಯಾತ್ರಿ, ಈಗಾಗಲೇ ಕೇರಳದ ಕೊಚ್ಚಿ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕ್ಯಾಬ್ ಸೇವೆಯನ್ನು ಶುರು ಮಾಡಿದೆ. ಇದು ಶೂನ್ಯ ಕಮಿಷನ್ (zero commission) ವ್ಯವಸ್ಥೆಯನ್ನು ಹೊಂದಿದ್ದು, ಅತಿಯಾಗಿ ಕಮಿಷನ್‌ ಹೇರುವ ಜನಪ್ರಿಯ ಕ್ಯಾಬ್ ಅಗ್ರಿಗೇಟರ್‌ಗಳಿಂದ ಚಾಲಕರಿಗೆ ಪರಿಹಾರವನ್ನು ಒದಗಿಸುತ್ತದೆ.

Bengaluru Namma Yatri Cab services Starts Tomorrow

'ಶೂನ್ಯ ಕಮಿಷನ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದ್ದರೂ ಕೂಡ ನಮ್ಮ ಯಾತ್ರಿ ಕ್ಯಾಬ್ ಸೇವೆಗಳು, ಕರ್ನಾಟಕ ಸರ್ಕಾರ (Karnataka Government) ಕ್ಯಾಬ್ ಅಗ್ರಿಗೇಟರ್‌ಗಳಿಗೆ ನಿಗದಿಪಡಿಸಿರುವ ಪರಿಷ್ಕೃತ ದರಗಳಿಗೆ ಅನುಗುಣವಾಗಿದೆ' ಎಂದು ಈ ಮೊದಲೇ ನಮ್ಮ ಯಾತ್ರಿ ತಂಡ ತಿಳಿಸಿತ್ತು. ಅಲ್ಲದೆ, ಆಪ್ ಡೆವಲಪರ್‌ಗಳು ಬೇಡಿಕೆಗೆ ತಕ್ಕಂತೆ ಕ್ಯಾಬ್ ಚಾಲಕರಿಗೆ ಸರಳ ಚಂದಾದಾರಿಕೆ ಶುಲ್ಕವನ್ನು ಸಹ ಪರಿಚಯಿಸಲಿದ್ದಾರೆ.

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ (Kolkata)ದಲ್ಲಿ ನಮ್ಮ ಯಾತ್ರಿ ಕ್ಯಾಬ್ (Namma Yatri) ಸೇವೆಗಳಿಗೆ ಸಾರ್ವಜನಿಕರಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷದ ಜುಲೈನಲ್ಲಿ ಆರಂಭವಾದ ಸೇವೆಯು 23 ಲಕ್ಷಕ್ಕೂ ಹೆಚ್ಚು ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ. ಇದು 18 ಲಕ್ಷಕ್ಕೂ ಅಧಿಕ ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, ಇಲ್ಲಿಯವರೆಗೆ 40,000ಕ್ಕೂ ಹೆಚ್ಚು ಚಾಲಕರು ಸುಮಾರು ರೂ.61 ಕೋಟಿ ಹಣವನ್ನು ಗಳಿಸಿದ್ದಾರೆ.

Bengaluru Namma Yatri Cab services Starts Tomorrow

ಕೇರಳದ ಕೊಚ್ಚಿ (Kochi)ಯಲ್ಲಿಯೂ ನಮ್ಮ ಯಾತ್ರಿ ಕ್ಯಾಬ್ ಹಾಗೂ ಆಟೋ ಸೇವೆಗಳು ಯಶಸ್ಸನ್ನು ಕಂಡಿವೆ. ನವೆಂಬರ್ 2022 ರಲ್ಲಿ ಈ ಅಪ್ಲಿಕೇಶನ್‌‌‌‌ನ್ನು ಪ್ರಾರಂಭಿಸಲಾಯಿತು. ಈ ಆಪ್ 3.3 ಲಕ್ಷಕ್ಕೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. 10,000 ಕ್ಕೂ ಅಧಿಕ ಕ್ಯಾಬ್ ಮತ್ತು ಆಟೋ ಚಾಲಕರು ನೋಂದಾಯಿಸಿಕೊಂಡಿದ್ದು, ಸುಮಾರು ರೂ.11 ಕೋಟಿಯಷ್ಟು ದುಡಿದಿದ್ದಾರೆ.

ಪ್ರಸ್ತುತ ನಮ್ಮ ಯಾತ್ರಿ (Namma Yatri) ಆಪ್ ಮೂಲಕ ಮೂರು ವಿಧದ ಟ್ಯಾಕ್ಸಿಗಳನ್ನು ಒದಗಿಸಲಾಗಿದೆ. ಇಕೋ (ನಾನ್ ಎಸಿ ಹ್ಯಾಚ್‌ಬ್ಯಾಕ್ಸ್), ಕಾಂಫೈ (ಎಸಿ ಸೆಡಾನ್) ಮತ್ತು ಎಸಿ ಎಸ್‌ಯುವಿ ರೈಡ್. ಜನಪ್ರಿಯ ಕ್ಯಾಬ್ ಅಗ್ರಿಗೇಟರ್ ಗಳಿಗೆ ಹೋಲಿಕೆ ಮಾಡಿದರೆ, ನಮ್ಮ ಯಾತ್ರಿ ಕ್ಯಾಬ್ ದರಗಳು ರೂ.10 ರಿಂದ ರೂ.13 ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಸಹಾಯವಾಗಲಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ನಗರಗಳಲ್ಲಿ ನಮ್ಮ ಯಾತ್ರಿ ಆಟೋ ಸೇವೆಯನ್ನು ಒದಗಿಸಲಾಗುತ್ತಿದ್ದರೂ ಸಹ ಅಂದುಕೊಂಡ ಮಟ್ಟಕ್ಕೆ ಯಶಸ್ಸು ದೊರೆತ್ತಿಲ್ಲ ಎಂದು ಮೂಲಗಳು ಹೇಳಿವೆ. ಆದರೂ ಕ್ಯಾಬ್ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಚಾಲಕರು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಂಬಲಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಯಾತ್ರಿ ಸೇವೆಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 15, 2024, 13:20 [IST]
English summary
Bengaluru namma yatri cab services starts tomorrow
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+