ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳುತ್ತೆ ಭಾರೀ ಪ್ರಮಾಣದ ದಂಡ..

ಸೈಕ್ಲಿಂಗ್ ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದು. ಬೆಳಗಿನ ಜಾವ ಮಾಡುವ ಸೈಕ್ಲಿಂಗ್ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಈ ಕಾರಣಕ್ಕಾಗಿಯೇ ವೈದ್ಯರು ನಿಯಮಿತವಾಗಿ ಸೈಕ್ಲಿಂಗ್ ಮಾಡುವಂತೆ ರೋಗಿಗಳಿಗೆ ಸಲಹೆ ನೀಡುತ್ತಾರೆ.

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಸೈಕ್ಲಿಂಗ್ ರೋಗಿಗಳಿಗೆ ಮಾತ್ರವಲ್ಲದೇ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುವವರಿಗೆ ಒಳ್ಳೆಯ ವ್ಯಾಯಾಮವಾಗಿದೆ. ಇದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸೈಕ್ಲಿಂಗ್ ಅಭ್ಯಾಸವು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದಾಗಿಯೂ ಕೆಲವರು ಸೈಕಲ್‌ಗಳನ್ನು ಬಳಸಲು ಆರಂಭಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಅಂಗಡಿಗಳಿಗೆ ತೆರಳಲು ಸೈಕಲ್‌ ಬಳಸುತ್ತಿದ್ದಾರೆ.

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಕಾರಿನ ಹಿಂಭಾಗದಲ್ಲಿ ಸೈಕಲ್ ಕೊಂಡೊಯ್ಯುತ್ತಿದ್ದ ವ್ಯಕ್ತಿಗೆ ಪೊಲೀಸರು ಭಾರೀ ಪ್ರಮಾಣದ ದಂಡ ವಿಧಿಸಿದ್ದಾರೆ. ಕಾರಿನ ಹಿಂಭಾಗದಲ್ಲಿ ಸೈಕಲ್ ಕೊಂಡೊಯ್ಯಲು ಆರ್‌ಟಿಒದಿಂದ ಸರ್ಟಿಫಿಕೇಟ್ ಪಡೆದಿಲ್ಲ ಎಂಬ ಕಾರಣಕ್ಕೆ ರೂ.5,000ಗಳ ದಂಡ ವಿಧಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಈ ಘಟನೆ ನಡೆದಿರುವುದು ನಮ್ಮ ಬೆಂಗಳೂರಿನಲ್ಲಿ. ಈ ಘಟನೆಯು ಸೈಕ್ಲಿಂಗ್ ಉತ್ಸಾಹಿಗಳಿಗೆ ಆಘಾತವನ್ನುಂಟು ಮಾಡಿದೆ. ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪ್ರಶಾಂತ್ ಸುಕುಮಾರನ್ ಎಂಬುವವರೇ ರೂ.5,000 ದಂಡ ಪಾವತಿಸಿದವರು.

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಸುಕುಮಾರನ್‌ರವರ 8 ವರ್ಷದ ಪುತ್ರ ಧನುಷ್ ಅನೇಕ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾನೆ. ಈ ಕಾರಣಕ್ಕೆ ಸುಕುಮಾರನ್ ಹಾಗೂ ಧನುಷ್ ಯಾವಾಗಲೂ ಸೈಕ್ಲಿಂಗ್ ತರಬೇತಿಯಲ್ಲಿ ತೊಡಗುತ್ತಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ರಜಾದಿನಗಳಲ್ಲಿ ಅವರಿಬ್ಬರು ಅವಡಿ ಹಿಲ್ಸ್/ಅವಲಹಳ್ಳಿಯಲ್ಲಿ ಸೈಕ್ಲಿಂಗ್‌ ಅಭ್ಯಾಸ ಮಾಡುತ್ತಾರೆ. ಕಳೆದ ಭಾನುವಾರ ಸೈಕ್ಲಿಂಗ್ ತರಬೇತಿ ಮುಗಿಸಿ ಇವರಿಬ್ಬರು ತಮ್ಮ ಎರಡು ಸೈಕಲ್‌ಗಳನ್ನು ಕಾರಿನ ಹಿಂಭಾಗದಲ್ಲಿರುವ ಸ್ಟ್ಯಾಂಡ್‌ಗೆ ಅಳವಡಿಸಿಕೊಂಡು ಅವಡಿ ಹಿಲ್ಸ್ ನಿಂದ ಮರಳುತ್ತಿದ್ದರು.

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಈ ವೇಳೆ ಅವರ ಕಾರನ್ನು ಅಡ್ಡಗಟ್ಟಿದ ಹೆಬ್ಬಾಳ ಪೊಲೀಸರು ಅವರಿಗೆ ದಂಡ ವಿಧಿಸಿದ್ದಾರೆ. ಈ ಬಗ್ಗೆ ಸುಕುಮಾರನ್ ಪೊಲೀಸರನ್ನು ವಿಚಾರಿಸಿದಾರ, ಕಾರಿನಲ್ಲಿ ಕೇವಲ ಒಂದು ಸೈಕಲ್ ಕೊಂಡೊಯ್ಯಲು ಮಾತ್ರ ಅನುಮತಿ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಆದರೆ ಈ ಕಾರಿನಲ್ಲಿ ಎರಡು ಸೈಕಲ್‌ಗಳನ್ನು ಕೊಂಡೊಯ್ಯಲಾಗುತ್ತಿದೆ. ಈ ಕಾರಣಕ್ಕೆ ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಸುಕುಮಾರನ್ ಮಾತ್ರವಲ್ಲದೆ ಹಲವು ಸೈಕ್ಲಿಂಗ್ ಉತ್ಸಾಹಿಗಳಿಗೆ ಆಘಾತವನ್ನುಂಟು ಮಾಡಿದೆ.

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಬೈಸಿಕಲ್ ಮೇಯರ್ ಸತ್ಯ ಶಂಕರನ್, ಇದೊಂದು ವಿಲಕ್ಷಣ ಘಟನೆಯಾಗಿದೆ. ಇಂತಹ ಘಟನೆಯ ಬಗ್ಗೆ ನಾನು ಈ ಹಿಂದೆ ಕೇಳಿರಲಿಲ್ಲ. ನಾನು ಹಲವಾರು ವರ್ಷಗಳಿಂದ ಸೈಕಲ್ ಗಳನ್ನು ಇದೇ ರೀತಿಯಲ್ಲಿ ಕೊಂಡೊಯ್ಯುತ್ತಿದ್ದರೂ ಯಾರೂ ದಂಡ ವಿಧಿಸಿರಲಿಲ್ಲವೆಂದು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಕೇಂದ್ರ ಮೋಟಾರು ವಾಹನ ಕಾಯ್ದೆ ಸೆಕ್ಷನ್ 52 (1)ರ ಪ್ರಕಾರ ಕಾರುಗಳಲ್ಲಿ ರಾಕ್ ಗಳನ್ನು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಹೊಂದಲು ಯಾವುದೇ ಅವಕಾಶವಿಲ್ಲ. ಕಾರುಗಳಲ್ಲಿರುವ ರಾಕ್ ಗಳು ಕೇವಲ ತಾತ್ಕಾಲಿಕ ಫೀಚರ್ ಗಳಾಗಿರುತ್ತವೆ.

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಪೊಲೀಸರು ಕಾರಿನಲ್ಲಿ ಬೈಸಿಕಲ್ ಸಾಗಿಸುವುದನ್ನು ಅಪರಾಧವೆಂದು ಪರಿಗಣಿಸುವುದಿಲ್ಲ. ಆದರೆ ಈ ರೀತಿ ಸಾಗಿಸುವುದು ಇತರ ವಾಹನ ಸವಾರರಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವತಃ ಸೈಕಲ್ ಪ್ರಿಯರೂ ಆಗಿರುವ ಎಡಿಜಿಪಿ ಭಾಸ್ಕರ್ ರಾವ್, ಸೈಕಲ್ ಗಳನ್ನು ರೂಫ್ ಮೇಲೆ ಅಥವಾ ಕಾರಿನ ಹಿಂಭಾಗದಲ್ಲಿ ಸಾಗಿಸುವುದು ಅಪರಾಧವಲ್ಲ. ಆದರೆ ಕಾರಿನ ಬದಿಯಲ್ಲಿ ಸಾಗಿಸುವುದು ಅಪರಾಧವೆಂದು ಪರಿಗಣಿಸಲಾಗಿದೆ.

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಈ ರೀತಿ ಸಾಗಿಸುವುದು ಇತರ ವಾಹನ ಸವಾರರಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಕಾರಿನಲ್ಲಿ ಎಷ್ಟೇ ಸಂಖ್ಯೆಯ ಸೈಕಲ್ ಗಳನ್ನು ಸಾಗಿಸಿದರೂ ಅದರಿಂದ ಇತರರಿಗೆ ತೊಂದರೆಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅನುಜ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ಹೀಗೆ ಪ್ರತಿಯೊಬ್ಬರು ವಿವಿಧ ಅಭಿಪ್ರಾಯಗಳನ್ನು ನೀಡುತ್ತಿರುವಾಗ ಈ ಘಟನೆಗೆ ಕಾರಣವಾದ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಬೆಂಗಳೂರು ಮಿರರ್ ಗೆ ನೀಡಿದ ಸಂದರ್ಶನದಲ್ಲಿ ಈ ರೀತಿ ಸೈಕಲ್ ಗಳನ್ನು ಸಾಗಿಸುವುದು ಆರ್‌ಟಿಒ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳ ಬಹುದು ಭಾರೀ ಪ್ರಮಾಣದ ದಂಡ

ವಾಹನಗಳಲ್ಲಿ ಯಾವುದೇ ಹೆಚ್ಚುವರಿ ಭಾಗಗಳನ್ನು ಅಳವಡಿಸುವ ಮೊದಲು ಆರ್‌ಟಿಒಗಳಿಂದ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೇ ಅಳವಡಿಸಲಾದ ಹೆಚ್ಚುವರಿ ಆಕ್ಸೆಸರಿಸ್ ಗಳಿಗೆ ರೂ. 5,000ಗಳವರೆಗೆ ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಕಾರಿನ ಹಿಂಭಾಗದಲ್ಲಿ ಸೈಕಲ್ ಕೊಂಡೊಯ್ಯುತ್ತಿದ್ದವರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles
 
Kannada
English summary
Bengaluru police imposes fine of Rs.5000 for carrying bicycles on car rack. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X