ಮಧುರೈ ಮೀನಾಕ್ಷಿ ದರ್ಶನಕ್ಕೆ ತೆರಳುವವರಿಗೆ ಸಿಹಿಸುದ್ದಿ: ಶೀಘ್ರ ವಂದೇ ಭಾರತ್ ಸಂಚಾರ.. 5.30 ಗಂಟೆ ಪ್ರಯಾಣ

ಕರ್ನಾಟಕದಿಂದ ಮಧುರೈ ಮೀನಾಕ್ಷಿ ದರ್ಶಕ್ಕೆ ತೆರಳುವವರಿಗೆ ಶೀಘ್ರ ಭರ್ಜರಿ ಸಿಹಿಸುದ್ದಿಯೊಂದು ದೊರೆಯಲಿದೆ. ಕೆಲವೇ ದಿನಗಳಲ್ಲಿ ಬೆಂಗಳೂರು - ಮಧುರೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸಂಚರಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಈ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎನ್ನಲಾಗಿದೆ.

ಮಧುರೈ (Madurai) - ಬೆಂಗಳೂರು (Bengaluru) ಮಧ್ಯೆ ಕಾರ್ಯಾಚರಣೆ ಮಾಡಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇಸರಿ (ಆರೆಂಜ್) ಬಣ್ಣವನ್ನು ಹೊಂದಿರುವ ಸಾಧ್ಯತೆಯಿದೆ. ಪ್ರಸ್ತುತ ಇವೆರೆಡು ನಗರಗಳ ನಡುವಿನ 435 ಕಿ.ಮೀ ಅಂತರವನ್ನು ಕ್ರಮಿಸಲು ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳು 7 ಗಂಟೆ ತೆಗೆದುಕೊಳ್ಳುತ್ತವೆ. ಆದರೆ, ಮುಂಬರುವ ವಂದೇ ಭಾರತ್ ರೈಲು ಕೇವಲ 6 ಅಥವಾ 5.30 ಗಂಟೆಗಳಲ್ಲಿ ತಲುಪಲಿದೆ.

Bengaluru To Madurai Vande Bharat Express Run Soon Good News For Minakshi Devotees

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಗಲಿನಲ್ಲಿ (Daytime) ಸಂಚರಿಸಲಿದ್ದು, 8 ಬೋಗಿಗಳನ್ನು ಒಳಗೊಂಡಿರಲಿದೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬೋಗಿಗಳನ್ನು ಸೇರಿಸಬಹುದು. ಮಧುರೈ - ಬೆಂಗಳೂರು ನಡುವೆ ದಿಂಡಗಲ್, ಕರೂರ್, ಸೇಲಂ, ಧರ್ಮಪುರಿ
ಹಾಗೂ ಹೊಸೂರಿನಲ್ಲಿ ನಿಲುಗಡೆ ಇರುತ್ತದೆ ಎಂದು ಹೇಳಲಾಗಿದೆ. ಅದರಲ್ಲೂ ಬೆಂಗಳೂರಿನಿಂದ ಮಧುರೈ ಮೀನಾಕ್ಷಿ ದರ್ಶಕಕ್ಕೆ ತೆರಳುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಸದ್ಯ ಈ ರೈಲಿನ ವೇಳಾಪಟ್ಟಿ ಮತ್ತು ಟಿಕೆಟ್ ದರದ ಬಗ್ಗೆ ಯಾವುದೇ ವಿವರಗಳಿಲ್ಲ. ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ತಿಳಿಯಲಿದೆ. ಬಹುತೇಕ 400 ಕಿ.ಮೀ.ಗಿಂತ ಹೆಚ್ಚು ಸಂಚರಿಸುವ ವಂದೇ ಭಾರತ್ ರೈಲುಗಳ ಎಸಿ ಚೇರ್ ಕ್ಲಾಸ್‌ನಲ್ಲಿ ರೂ.1,300, ಎಕ್ಸಿಕ್ಯೂಟಿವ್ ಸೀಟ್ ಕ್ಲಾಸ್‌ನಲ್ಲಿ ರೂ 2,300 ಟಿಕೆಟ್ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ಅದೇ ರೀತಿಯಲ್ಲಿ ಮಧುರೈ - ಬೆಂಗಳೂರು ವಂದೇ ಭಾರತ್ ರೈಲು ಕೂಡ ಟಿಕೆಟ್ ದರವನ್ನು ಹೊಂದಿರಬಹುದು.

Bengaluru To Madurai Vande Bharat Express Run Soon Good News For Minakshi Devotees

ಈಚೆಗೆ ಕೊಯಮತ್ತೂರು ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಡುವೆ ಸಂಚಾರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಸಾರ್ವಜನಿಕರ ಮನವಿ ಮೇರೆಗೆ ಬದಲಾಯಿಸಲಾಗಿತ್ತು. ಮಾರ್ಚ್ 11ರಿಂದ ಹೊಸ ವೇಳಾಪಟ್ಟಿ ಜಾರಿಗೊಂಡಿದೆ. ಕೊಯಮತ್ತೂರಿನಿಂದ ಬೆಳಗ್ಗೆ 7.25ಕ್ಕೆ ಸಂಚಾರವನ್ನು ಆರಂಭಿಸಿ, ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 8.45ಕ್ಕೆ ಕೊಯಮತ್ತೂರನ್ನು ತಲುಪುತ್ತದೆ.

ಕರ್ನಾಟಕದಲ್ಲಿ ಚೆನ್ನೈ - ಬೆಂಗಳೂರು - ಮೈಸೂರು (Chennai - Bengaluru - Mysuru), ಕಾಚಿಗುಡ (Hyderabad) ಹಾಗೂ ಯಶವಂತಪುರ (Bengaluru), ಮಂಗಳೂರು ಮತ್ತು ಮಡಗಾಂವ್ (Mangaluru - Madgaon), ಬೆಂಗಳೂರು - ಹುಬ್ಬಳ್ಳಿ - ಧಾರವಾಡ (Bengaluru - Hubballi - Dharwad) ನಡುವೆಯು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟವನ್ನು ನಡೆಸುತ್ತಿದೆ.

Bengaluru To Madurai Vande Bharat Express Run Soon Good News For Minakshi Devotees

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲು ಆಗಿರುವುದರಿಂದ ಸಾರ್ವಜನಿಕರಿಗೆ ವಿಮಾನದಂತಹ ಅತ್ಯಾಕರ್ಷಕ ಸೌಕರ್ಯವನ್ನು ಒದಗಿಸಲಾಗುತ್ತದೆ. ಪ್ರಮುಖವಾಗಿ ಆರಾಮದಾಯಕವಾಗಿ ಪ್ರಯಾಣಿಸಲು ಅತ್ಯಾಧುನಿಕ ಆಸನಗಳು, ಸಂಪೂರ್ಣ ಹವಾ ನಿಯಂತ್ರಿತ ಬೋಗಿಗಳು, ವೈಫೈ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಜೈವಿಕ ಶೌಚಾಲಯ, ಅಗ್ನಿ ನಿರೋಧಕ ಸಾಧನವನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, March 7, 2024, 12:21 [IST]
English summary
Bengaluru to madurai vande bharat express run soon good news for minakshi devotees
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+